ಮಂಗಳೂರು, ಜೂನ್ 15 : ಹಲವಾರು ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ಅಂಡರ್ ವಲ್ಡ್ ರೌಡಿ ಅಸ್ಗರ್ ಆಲಿಯನ್ನು ಮಂಗಳೂರು ನಗರ ಪೊಲೀಸರು ಕಾಸರಗೋಡಿನ ಉಪ್ಪಳದಲ್ಲಿ ಬಂಧಿಸಿ ಮಂಗಳೂರಿಗೆ ಕರೆತಂದಿದ್ದಾರೆ.
ಎರಡು ಕೊಲೆ ಪ್ರಕರಣ ಸೇರಿದಂತೆ 9 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಈತ 2007 ರಲ್ಲಿ ನಕಲಿ ಪಾಸ್ ಪೋರ್ಟ್ ಬಳಸಿ ದುಬೈಗೆ ಪಲಾಯಗೈದು ತಲೆಮರೆಸಿಕೊಂಡಿದ್ದ. ದುಬೈನಲ್ಲಿ ಈತ ನಡೆಸುತ್ತಿದ್ದ ಚಟುವಟಿಕೆಗಳ ಬಗ್ಗೆ ವಿವರವಾದ ವಿಚಾರಣೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದೇಶದಿಂದ ಊರಿಗೆ ಮರಳಿ ಕೇರಳದ ಉಪ್ಪಳದಲ್ಲಿ ಈತ ತಲೆಮರೆಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕಂಕನಾಡಿ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಜಗದೀಶ್ ಹಾಗೂ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ಯಾಮಸುಂದರ್ ಅವರನ್ನೊಳಗೊಂಡ ತಂಡ ಈ ಕತರ್‌ನಾಕ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುಖ್ಯಾತ ಕ್ರಿಮಿನಲ್ ಆಗಿರುವ ಆಸ್ಗರ್ ಆಲ್ ದುಬೈಗೆ ಪಲಾಯನ ಮಾಡಲು ನಕಲಿ ಪಾಸ್ ಪೋರ್ಟ್ ನೀಡಿ ಸಹಕರಿಸಿದ ಇಬ್ಬರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಭೂಗತ ಪಾತಕಿಗೆ ನಕಲಿ ಪಾಸ್ ಪೋರ್ಟ್ ನೀಡಿ ಸಹಕರಿಸಿದ ನವಾಜ್ ಮತ್ತು ರಶೀದ್ ಬಂಧಿತ ಆರೋಪಿಗಳು. ಇವರಿಬ್ಬರು ನಕಲಿ ಪಾಸ್ ಪೋರ್ಟ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದು, ಒಟ್ಟು ಪ್ರಕರಣದ ಹೆಚ್ಚಿನ ತನಿಖೆಯನ್ನು ಪೊಲೀಸರು ಕೈಗೆತ್ತಿಕೊಂಡಿದ್ದಾರೆ.
ಇದೇ ವೇಳೆ ಈತನ ಕ್ರಿಮಿನಲ್ ಹಿನ್ನೆಲೆ ಹಾಗೂ ಚಟುವಟಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾಳೆ (ರವಿವಾರ) ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರಿಗೆ ವಿವರಿಸುವದಾಗಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
Notorious underworld rowdy Ashgar Ali Arrested:
Notorious underworld rowdy Ashgar Ali, who was involved in 9 cases including 2 murder cases had fled to Dubai in 2007 on a fake passport.
We got information about his passport details and got credible information that he has come to India and was hiding in Uppala, kerala. Sent a team of PI Kankanadi Jagdeesh, PSI shyamsundar who were successful in arresting him.
Detailed interrogation will be done about his activities in Dubai. Also, 2 people who made fake passport for him Nawaz and Rasheed are arrested. Further investigation going on as to how many such fake passports they are involved in and unearth the fake passport racket.
He was involved in…
1. In 2005, was involved in murder of Pollali Anantu.
2. Was involved in murder of Target group Illyas. He was in Dubai, and along with Dawood and others hatched conspiracy to kill. Also, after murder, he arranged hideout for accused in Mumbai.
3. He was involved in cases along with Rashid Malabari
4. He made threat calls for ransom
: Police Commissioner. Sing
Comments are closed.