ಮಂಗಳೂರು : ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ವತಿಯಿಂದ ,ಎಂ ಆರ್ ಪಿ ಎಲ್ ಸಹಯೋಗದೊಂದಿಗೆ ನಗರದ ಬೋಳೂರು ಶ್ರೀ ಜಾರಂದಾಯ ದೇವಸ್ಥಾನ ರಸ್ತೆಯಲ್ಲಿ ಭಾನುವಾರ ಅಮಲ ಭಾರತ ಸ್ವಚ್ಛತಾ ಜನ ಜಾಗರಣ ಯಜ್ಞ ಹಮ್ಮಿಕೊಳ್ಳ ಲಾಯಿತು.
ಮಠದ ಮುಖ್ಯಸ್ಥರಾದ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರು ಈ ಸಂದರ್ಭದಲ್ಲಿ ಮಾತನಾಡುತ್ತಾ, ಅಮ್ಮನವರು ಸ್ವಚ್ಛ ಭಾರತದ ದೃಢ ಸಂಕಲ್ಪದೊಂದಿಗೆ 2010ರ ಸೆಪ್ಟೆಂಬರ್ 27 ರಂದು ಕೇರಳದ ಅಮೃತಪುರಿಯಲ್ಲಿ “ಅಮಲ ಭಾರತ ಅಭಿಯಾನ” ಎಂಬ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿದರು.
2011ರ ಮೇ ತಿಂಗಳಲ್ಲಿ ಸ್ವಚ್ಛ, ಸುಂದರ ಹಾಗೂ ಆರೋಗ್ಯ ಪೂರ್ಣ ಭಾರತದ ಈ ಯೋಜನೆಯು ಅಮ್ಮ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು ಮಂಗಳೂರಿನ “ಅಮೃತ ಸಂಗಮ 2011” ಕಾರ್ಯಕ್ರಮದಲ್ಲಿ ಶುಭಾರಂಭಗೊಂಡಿರುತ್ತದೆ.ಇಂದು ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಸರ್ವತ್ರ ವ್ಯಾಪಿಸಿದೆ. ಈ ಮೂಲಕ ಸ್ವಚ್ಛ ಪರಿಸರ ಬಗ್ಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದೆ. 2ನೇಯ ವರ್ಷದ ಈ ಕಾರ್ಯಕ್ರಮವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಈ ಸೇವಾ ಕಾರ್ಯದಲ್ಲಿ ಯುವ ಸೇವಾ ಘಟಕ ” ಅಯುಧ್”, ಮಹಿಳೆಯರ “ಅಮೃತ ಸಂಘಿಣಿ” ಹಾಗೂ ಪುರುಷರ ಸೇವಾ ವಿಭಾಗ ” ಅಮೃತ ಸೇವಕ್” ನ ಸೇವಾರ್ಥಿಗಳು ಭಾಗವಹಿಸಿ ಪರಿಸರದ ಸ್ವಚ್ಛತೆ ಮಾಡಿದರು.
ಪರಿಸರ ನೈರ್ಮಲ್ಯದ ಜೊತೆಗೆ ರಸ್ತೆಯಲ್ಲಿ ಸಂಚರಿಸುವ ಜನರಿಗೆ ನೆರಳಿನಾಶ್ರಯ ನೀಡಲು ಮರಗಳನ್ನು ಬೆಳೆಸುವ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಯಿತು.
ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯರ ನೇತೃತ್ವದಲ್ಲಿ ಸೇವಾ ಸಮಿತಿಯ ಅಧ್ಯಕ್ಷರಾದ ಪ್ರಸಾದ್ ರಾಜ್ ಕಾಂಚನ್,ಗೌರವಾಧ್ಯಕ್ಷರಾದ ಶ್ರೀಮತಿ ಶ್ರುತಿ ಸನತ್ ಹೆಗ್ಡೆ ಹಾಗೂ ಅಯುಧ್ ಅಧ್ಯಕ್ಷ ರಾಮನಾಥ್ ಸಸಿಗಳನ್ನು ನೆಟ್ಟರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಕಮಲಾಕ್ಷ ಸಾಲ್ಯಾನ್,ಹೆಲ್ತ್ ಇನ್ಸ್‌ಪೆಕ್ಟರ್ ಅಶ್ವಿನಿ ಎಂ, ಸೇವಾ ಸಮಿತಿಯ ಪದಾಧಿಕಾರಿಗಳಾದ ಶ್ರೀ ಸುರೇಶ್ ಅಮಿನ್, ಡಾ.ಅಶೋಕ್ ಶೆಣೈ,ಮುರಳೀಧರ ಶೆಟ್ಟಿ, ಡಾ.ದೇವದಾಸ್,ಸುಗುಣನ್,ರಾಜನ್,ಪ್ರಕಾಶ್ ಕರ್ಕೇರ,ಮೋಹನ್ ಬಂಗೇರ, ನಿತ್ಯಾನಂದ ಅಡ್ಯಂತಾಯ ಮತ್ತು ಸೇವಾ ಸಮಿತಿಯ ಸದಸ್ಯರು,ಅಯುಧ್ ಸೇವಾ ತಂಡ,ಹಾಗೂ ಅಮ್ಮನ ಭಕ್ತರು ಉಪಸ್ಥಿತರಿದ್ದರು.
Comments are closed.