ಕೆನರಾ ಎಂಜಿನಿಯರಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭ
ಮಂಗಳೂರು: ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಕ್ರಾಂತಿಕಾರಿಯಾಗಿ ವಿಸ್ತರಿಸುತ್ತಿದೆ. ಈ ಹಂತದಲ್ಲಿ ನಮ್ಮ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲು ಸಂಶೋಧನಾ ಚಟುವಟಿಕೆಗಳು ಹೆಚ್ಚಬೇಕಾದ ಅಗತ್ಯವಿದೆ. ಸಮಸ್ಯೆಗಳಿಗೆ ಸ್ಪಂದಿಸುವ ತಂತ್ರಜ್ಞಾನದ ಸಾಮಥ್ರ್ಯವನ್ನು ಸಮರ್ಥವಾಗಿ ನಾವು ಬಳಸಿಕೊಳ್ಳುವಂತಾಗಬೇಕು. ಅನ್ಯರಿಗೆ ಗೌರವ, ಹೆತ್ತವರಿಗೆ ಆದ್ಯತೆ, ಸಮಾಜಕ್ಕೆ ಸಮರ್ಪಣಾ ಮನೋಭಾವ, ಭಾವೈಕ್ಯತೆ ಯ ಮೌಲ್ಯಗಳನ್ನು ನಾವು ಜೀವನದಲ್ಲಿ ಪಾಲಿಸಬೇಕು ಎಂದು ಟಾಟಾ ಕನ್ಸಲ್ಟೆನ್ಸಿ ಸವರ್ೀಸಸ್ನ ಅಕಾಡಮಿಕ್ ಇಂಟರ್ಫೇಸ್ ಪ್ರೋಗ್ರಾಂನ ಪ್ರಾಂತೀಯ ಮುಖ್ಯಸ್ಥ ಶ್ರೀನಿವಾಸ ರಾಮಾನುಜಂ ಹೇಳಿದರು.
ಅವರು ಇಲ್ಲಿನ ಟಿ.ವಿ.ರಮಣ ಪೈ ಕನ್ವೆನ್ಷನ್ ಸೆಂಟರ್ನಲ್ಲಿ ರವಿವಾರ ನಡೆದ ಕೆನರಾ ಇಂಜಿನಿಯರಿಂಗ್ ಕಾಲೇಜು ವಿದ್ಯಾಥರ್ಿಗಳ 15 ನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ತಾಂತ್ರಿಕ ಪದವೀಧರರು ತಮ್ಮ ಬಿಡುವಿನ ವೇಳೆಯಲ್ಲಿ ಗ್ರಾಮೀಣ ಭಾರತದ ಅಗತ್ಯಗಳಿಗೆ ಸಹಾಯ ಹಸ್ತ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ಕಲಿಕೆಯನ್ನು ಹಂಚಿಕೊಳ್ಳುವ ಉದಾತ್ತ ಗುಣಗಳ ಮೂಲಕ ಸಮಾಜದಲ್ಲಿ ಬೆಳೆಯಬೇಕು ಎಂದವರು ಹಾರೈಸಿದರು.
ಕಾಲೇಜಿನ ಆಡಳಿತ ಮಂಡಳಿ ಕೆನರಾ ಹೈಸ್ಕೂಲ್ ಎಸೋಸಿಯೇಶನ್ ಅಧ್ಯಕ್ಷ ಎಸ್. ಎಸ್. ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಸಂಚಾಲಕ ಎಂ. ಪದ್ಮನಾಭ ಪೈ ವಿದ್ಯಾಥರ್ಿಗಳಿಗೆ ಪ್ರಮಾಣ ವಚನ ಬೋಧಿಸಿ ಶುಭ ಹಾರೈಸಿದರು.
ಆಡಳಿತ ಮಂಡಳಿ ಕಾರ್ಯದಶರ್ಿ ಎಂ.ರಂಗನಾಥ್ ಭಟ್ ಮಾತನಾಡಿ ಶಿಕ್ಷಣದ ಜತೆಗೆ ಮೌಲ್ಯಗಳಿರಬೇಕು. ನೈತಿಕತೆ ಮತ್ತು ಭಾವೈಕ್ಯತೆಯ ಮೌಲಿಕತೆಯ ಬದುಕು ನಮ್ಮೆಲ್ಲರದ್ದಾಗಬೇಕು ಎಂದರು. ಇದೇ ಸಂದರ್ಭದಲ್ಲಿ ಕಾಲೇಜಿನ ಇ ವಾಷರ್ಿಕ ಸಂಚಿಕೆಯ ಲೋಕಾರ್ಪಣೆ, ಶೈಕ್ಷಣಿಕ ಸಾಧಕರು, ಶ್ರೇಷ್ಠ ವಿದ್ಯಾಥರ್ಿಗಳು, ಸಾಧಕ ವಿದ್ಯಾಥರ್ಿಗಳನ್ನು ಗೌರವಿಸಲಾಯಿತು. ಒಟ್ಟು 474 ವಿದ್ಯಾಥರ್ಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ಗಣೇಶ್ ವಿ.ಭಟ್ ಸ್ವಾಗತಿಸಿದರು. ನೇಮಕಾತಿ ಅಧಿಕಾರಿ ಪ್ರಶಾಂತ್ ಕುಮಾರ್ ಎ ಅತಿಥಿಯವರನ್ನು ಪರಿಚಯಿಸಿದರು. ವಿದ್ಯಾಥರ್ಿಗಳಾದ ಅಕ್ಷಯ್ ಕಾಮತ್, ಕೀತರ್ಿ ಗುರು ಸಾವಂತ್, ಶ್ರದ್ಧಾ ಜೆ.ಶೆಟ್ಟಿ, ಐಶ್ವರ್ಯ ಕಿಣಿ ಕೆ, ಲಿಖಿತಾ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಎಂ.ಅಣ್ಣಪ್ಪ ಪೈ, ಕೊಶಾಧಿಕಾರಿ ಪಂಚಮಾಲ್ ಗೋಪಾಲಕೃಷ್ಣ ಶೆಣೈ, ಸಹ ಕೋಶಾಧಿಕಾರಿ ಎಂ. ವಾಮನ್ ಕಾಮತ್, ಬಸ್ತಿ ಪುರುಷೋತ್ತಮ ಶೆಣೈ, ಎಂ.ಗಣೇಶ್ ಕಾಮತ್, ಕೆ. ಸುರೇಶ್ ಕಾಮತ್, ಡಾ.ಪಿ. ಉಮಾನಂದ ಮಲ್ಯ, ಹಾಗೂ ಕಾಲೇಜಿನ ವಿಭಾಗ ಮುಖ್ಯಸ್ಥರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹಪ್ರಾಧ್ಯಾಪಕಿ ಜಯಶ್ರೀ ವಂದಿಸಿದರು. ಸಹ ಪ್ರಾಧ್ಯಾಪಕ ಆನಂದ ಭಟ್ ಕಾರ್ಯಕ್ರಮ ನಿರ್ವಹಿಸಿದರು.
Comments are closed.