ಕುಂದಾಪುರ: ಕೋಟದಲ್ಲಿ ಜ.26ರಂದು ನಡೆದ ಭರತ್ ಹಾಗೂ ಯತೀಶ್ ಎನ್ನುವರ ಅವಳಿ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಮೂವರು ಆರೋಪಿಗಳು ಜಾಮೀನು ಪಡೆಯಲು ಸಲ್ಲಿಸಿದ ಅರ್ಜಿಯ ವಾದ- ಪ್ರತಿವಾದ ಸೋಮವಾರ ಮತ್ತೆ ಮುಂದುವರಿದಿದ್ದು, ಈ ಕುರಿತಂತೆ ಆದೇಶವನ್ನು ಜೂ.24 ಕ್ಕೆ ಪ್ರಕಟಿಸುವುದಾಗಿ ಕುಂದಾಪುರದ ಜೆಎಂಎಫ್‌ಸಿ ನ್ಯಾಯಾಲಾಯದ ಪ್ರಥಮ ನ್ಯಾಯಿಕ ದಂಡಾಧಿಕಾರಿ ನ್ಯಾ| ನಾಗಲಕ್ಷ್ಮಮ್ಮ ಘೋಷಿಸಿದ್ದಾರೆ.
ಕೋಟ ಸಮೀಪದ ಮಣೂರಿನಲ್ಲಿ ಈ ಜೋಡಿ ಕೊಲೆ ಪ್ರಕರಣ ನಡೆದಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದರೆನ್ನಲಾದ ಆರೋಪದಲ್ಲಿ ಈವರೆಗೆ 18 ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪೈಕಿ ಪೊಲೀಸ್ ಸಿಬಂದಿ ಪವನ್ ಅಮೀನ್, ಸಂತೋಷ್ ಕುಂದರ್ ಹಾಗೂ ತೌಸಿಫ್ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಕುರಿತಂತೆ ವಿಚಾರಣೆ ಜೂ. 15 ರಂದು ಆರಂಭಗೊಂಡಿದ್ದು, ಸೋಮವಾರವೂ ನಡೆಯಿತು.
ಪ್ರಾಸಿಕ್ಯೂಶನ್ ಪರ ಸರಕಾರಿ ಸಹಾಯಕ ಅಭಿಯೋಜಕಿ ಸುಮಂಗಲಾ ನಾಯಕ್ ಪ್ರತಿವಾದಿಸಿದರೆ, ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಆರೋಪಿಗಳ ಪರ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದ ಮಂಡಿಸಿದ್ದರು.
Comments are closed.