ಮಂಗಳೂರು, ಜೂನ್.18: ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಮಂಗಳೂರು (ನಗರ) ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಯರು ಹಾಗೂ ಸಹಾಯಕಿಯರ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅತ್ತಾವರ ಗ್ರಾಮ ಸಂಘ ವಾರ್ಡ್ ನಂ. 55 ಅತ್ತಾವರ ಗ್ರಾಮ, ಯುಬಿಎಂಸಿ ಬಲ್ಮಠ ವಾರ್ಡ್ ನಂ 38 ಅತ್ತಾವರ ಗ್ರಾಮ, ಪೊಲೀಸ್ ಲೈನ್-1 ವಾರ್ಡ್ ನಂ 40 ಅತ್ತಾವರ ಗ್ರಾಮ ಹಾಗೂ ದಂಬೇಲ್ ವಾರ್ಡ್ ನಂ.26 ಬೋಳೂರು, ಬರ್ಕೆ ನಡುಪಳ್ಳಿ ವಾರ್ಡ್ ನಂ.43 ಕಸಬಾ ಬಜಾರ್ ಗ್ರಾಮ, ಬದ್ರಿಯಾ ಶಾಲೆ ವಾರ್ಡ್ ನಂ. 45 ಕಸಬಾ ಬಜಾರ್ ಒಟ್ಟು 6 ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಅಂಗನವಾಡಿ ಸಹಾಯಕಿಯರು: ಈ ಹುದ್ದೆಗೆ ಗ್ರೀನ್ ವ್ಯೆ ಅಳಪೆ – ವಾರ್ಡ್ ನಂ. 50 ಅಳಪೆ ಗ್ರಾಮ, ಸೈಂಟ್ ಮೇರಿಸ್ ಫಳ್ನೀರ್ – ವಾರ್ಡ್ ನಂ. 47 ಅತ್ತಾವರ ಗ್ರಾಮ, ಉರ್ವಗಾಂಧಿ ನಗರ ವಾರ್ಡ್ ನಂ. 26 ಬೋಳೂರು ಗ್ರಾಮ, ಶ್ರೀಕೃಷ್ಣ ಭಜನಾ ಮಂದಿರ ಕೊಟ್ಟಾರ ವಾರ್ಡ್ ನಂ.25 ದೇರೆಬೈಲ್ ಗ್ರಾಮ, ಸಿರಿಯನ್ ಮಿಶನ್ ವಾರ್ಡ್ ನಂ. 55 ಜಪ್ಪಿನಮೊಗರು ಗ್ರಾಮ, ಜಪ್ಪಿನ ಮೊಗರು-1 ವಾರ್ಡ್ ನಂ. 54 ಜಪ್ಪಿನಮೊಗರು ಗ್ರಾಮ, ಗಾರ್ಡಿಯನ್ ಏಂಜೆಲ್ಸ್ ವಾರ್ಡ್ ನಂ. 49 ಕಂಕನಾಡಿ ಗ್ರಾಮ, ಕುದ್ರೋಳಿ ಯುವಕ ಸಂಘ ವಾರ್ಡ್ ನಂ. 42 ಕಸಬಾ ಗ್ರಾಮ, 1ನೇ ವಿಭಾಗ ಸಮಾಜ ಮಂದಿರ ಕಾಟಿಪಳ್ಳ ವಾರ್ಡ್ ನಂ.3 ಕಾಟಿಪಳ್ಳ ಗ್ರಾಮ, ಗಾಂಧಿನಗರ ವಾರ್ಡ್ ನಂ.15 ಕಾವೂರು ಗ್ರಾಮ, ಪಳನೀರು ವಾರ್ಡ್ ನಂ.15 ಕಾವೂರು ಗ್ರಾಮ, ಬೋಳಾರ ಶಾಲೆ ವಾರ್ಡ್ ನಂ.58 ಮಂಗಳೂರು ತೋಟ, ಮರಕಡ ಯುವಕ ಮಂಡಲ ವಾರ್ಡ್ ನಂ.14 ಮರಕಡ ಗ್ರಾಮ, ಮರೋಳಿ ಯುವಕ ಮಂಡಲ ವಾರ್ಡ್ ನಂ.37 ಮರೋಳಿ ಗ್ರಾಮ, ದೀಪಾ ಗೇಮ್ಸ್ ಕ್ಲಬ್ ವಾರ್ಡ್ ನಂ.21 ಪದವು ಗ್ರಾಮ, ಗಾಂಧಕಾಡು ವಾರ್ಡ್ ನಂ.22 ಪದವು ಗ್ರಾಮ, ಜೈ ಜವಾನ್ ಕುಲಶೇಖರ ವಾರ್ಡ್ ನಂ.36 ಪದವು ಗ್ರಾಮ, ನ್ಯೂ ಫ್ರೆಂಡ್ಸ್ ಕ್ಲಬ್ ಪಡೀಲ್ ವಾರ್ಡ್ ನಂ.51 ಪಡೀಲ್ ಗ್ರಾಮ ಒಟ್ಟು 18 ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಎಸೆಸೆಲ್ಸಿ ಉತ್ತೀರ್ಣರಾಗಿರಬೇಕು. ಅದರಂತೆ, ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಿಚ್ಛಿಸುವವರು 4ನೇ ತರಗತಿಯಿಂದ 9ನೇ ತರಗತಿವರೆಗೆ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ಈ ಎಲ್ಲ ಹುದ್ದೆಗಳು ಸಾಮಾನ್ಯ ವರ್ಗವಾಗಿದ್ದು, ಆನ್‌ಲೈನ್ ಅರ್ಜಿ ಸಲ್ಲಿಸಲು ಜುಲೈ 17 ರಂದು ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಸಿಲ್ವಾ ಕ್ರಾಸ್ ರೋಡ್ ವೆಲೆನ್ಸಿಯ, ಬಿಷಪ್ ವಿಕ್ಟರ್ ಅಡ್ಡರಸ್ತೆ, ಮಂಗಳೂರು ಇಲ್ಲಿಗೆ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Comments are closed.