ಕರಾವಳಿ

ವೆಲೈಂಟೆನ್ ಡಿ ಸೋಜಾ ಸಹಿತಾ ನಾಲ್ವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

Pinterest LinkedIn Tumblr

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ ನಾಲ್ವರು ಹಿರಿಯ ಪೊಲೀಸ್ ಅಧಿಕಾರಿಗಳು ರಾಷ್ಟ್ರಪತಿ ಪದಕ ಪುರಸ್ಕಾರಕ್ಕೆ ಆಯ್ಕೆ ಆಗಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ವಿಶೇಷ ಸೇವೆ ಸಲ್ಲಿಸಿದ ನಾಲ್ವರು ಹಿರಿಯ ಪೊಲೀಸ್ ಅಧಿಕಾರಿಗಳು ರಾಷ್ಟ್ರಪತಿ ಪದಕ ಪುರಸ್ಕಾರಕ್ಕೆ ಆಯ್ಕೆ ಆಗಿದ್ದು, ಈ ವಿಚಾರವನ್ನು ಎಡಿಜಿಪಿ ಡಾ.ಎಸ್‌.ಪರಶಿವಮೂರ್ತಿ ಪ್ರಕಟಿಸಿದ್ದಾರೆ.

ಡೆಪ್ಯುಟಿ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ವೆಲೈಂಟೆನ್ ಡಿ ಸೋಜಾ, ನಿವೃತ್ತ ಸಹಾಯಕ ಕಮಿಷನರ್ ಉದಯ ನಾಯಕ್, ಸಹಾಯಕ ಕಮಿಷನರ್ ಆಫ್ ಪೊಲೀಸ್ ಸಿಸಿಆರ್‌ಬಿಯ ವಿನಯ್ ಎ ಗಾಂವ್ಕರ್ ಮತ್ತು ಭ್ರಷ್ಟಾಚಾರ ನಿಗ್ರಹ ದಳದ ಡೆಪ್ಯುಟಿ ಸುಪರಿಂಟೆಂಟ್ ಆಫ್ ಪೊಲೀಸ್ ಸುಧೀರ್ ಎಂ ಹೆಗ್ಡೆ ರಾಷ್ಟ್ರಪತಿ ಪದಕ ಪುರಸ್ಕಾರಕ್ಕೆ ಆಯ್ಕೆಯಾಗಿರುವ ನಾಲ್ವರು ಹಿರಿಯ ಪೊಲೀಸ್ ಅಧಿಕಾರಿಗಳು.

ಬೆಂಗಳೂರಿನಲ್ಲಿ ಜುಲೈ 5 ರಂದು ನಡೆಯಲಿರುವ ರಾಜಭವನದ ಗಾಜಿನಮನೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಇವಾರು ರಾಷ್ಟ್ರಪತಿ ಪದಕ ಪಡೆದುಕೊಳ್ಳಲಿರುವರು.

ವೆಲೆಂಟಿನ್ ಡಿ ಸೋಜಾ ಅವರು ಪ್ರಸ್ತುತ ಭಟ್ಕಳದಲ್ಲಿ ಡಿಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉದಯ್ ನಾಯ್ಕ್ ಅವರು ನಗರದ ವಿವಿಧ ಠಾಣೆಗಳಲ್ಲಿ ಇನ್‌ಸ್ಪೆಕ್ಟರ್ ಹಾಗೂ ಮಂಗಳೂರು ನಗರ ಸೆಂಟ್ರಲ್ ಎಸಿಪಿ ಮತ್ತು ಸಂಚಾರಿ ವಿಭಾಗದ ಎಸಿಪಿ ಆಗಿ ಸೇವೆ ಸಲ್ಲಿಸಿ ಬಳಿಕ ಲೋಕಾಯುಕ್ತದ ಸಹಾಯಕ ಕಮಿಷನರ್ ಆಗಿ ನಿವೃತ್ತಿಯಾಗಿದ್ದಾರೆ.

ವಿನಯ್ ಎ ಗಾಂವ್ಕರ್ ಅವರು ಸಿಸಿಆರ್‌ಬಿಯಲ್ಲಿ ಸಹಾಯಕ ಕಮಿಷನರ್ ಆಫ್ ಪೊಲೀಸ್ ಹುದ್ದೆಯಲ್ಲಿದ್ದಾರೆ. ಸುಧೀರ್ ಎಂ ಹೆಗ್ಡೆ ಅವರು ಭ್ರಷ್ಟಾಚಾರ ನಿಗ್ರಹ ದಳದ ಡೆಪ್ಯುಟಿ ಸುಪರಿಂಟೆಂಟ್ ಆಫ್ ಪೊಲೀಸ್ ಆಗಿ ಸೇವೆಯಲ್ಲಿದ್ದಾರೆ.

Comments are closed.