ಮಂಗಳೂರು, ಜೂನ್.27 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ತಲೆಯೆತ್ತಿರುವ ಗೋಕಳ್ಳರ ಹಾವಳಿಯಿಂದ ಬಡ ಹೈನುಗಾರರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
ಸತತ ಗೋಕಳ್ಳತನದಿಂದ ಹೈನುಗಾರಿಕೆಯನ್ನೇ ನಂಬಿರುವ ಅನೇಕ ಕುಟುಂಬಗಳಿಗೆ ಮೂಲ ಆದಾಯವೇ ಇಲ್ಲದಂತಾಗಿದೆ.ಹಾಗಾಗಿ ಪೋಲಿಸ್ ಇಲಾಖೆ ಗೋಕಳ್ಳರ ಮೇಲೆ ಕಠಿಣ ಕ್ರಮ ಜರಗಿಸಬೇಕೆಂದು ಶಾಸಕರು ತಿಳಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಶಾಂತವಾಗಿದ್ದ ಕರಾವಳಿಯಲ್ಲಿ ಗೋಕಳ್ಳತನದಿಂದ ಸಾಮರಸ್ಯಕ್ಕೆ ಧಕ್ಕೆಯಾಗಲಿದೆ.ಹಾಗಾಗಿ ಸರಕಾರ ಮತ್ತು ಪೊಲೀಸ್ ಇಲಾಖೆ ಗೋಕಳ್ಳತನವಾಗದಂತೆ ಕಠಿಣ ಕಾನೂನು ಜಾರಿಗೆ ತರಬೇಕೆಂದು ಶಾಸಕರು ಆಗ್ರಹಿಸಿದ್ದಾರೆ.
ಇದೇ ವೇಳೆ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ರಾತ್ರಿ ವೇಳೆ ಬಾರಿಕೇಡ್ ಹಾಕುವ ಮೂಲಕ ವಾಹನ ತಪಾಸಣೆ ಮಾಡಿಸಿದರೆ ಗೋಕಳ್ಳರನ್ನು ನಿಯಂತ್ರಿಸಬಹುದು ಎಂದು ಪೊಲೀಸ್ ಇಲಾಖೆಗೆ ಶಾಸಕರು ಸಲಹೆ ನೀಡಿದ್ದಾರೆ.
Comments are closed.