ಕರಾವಳಿ

ನಿರ್ಲಕ್ಷ ಚಾಲನೆ ಹಾಗೂ ರಸ್ತೆಗಳಲ್ಲಿ ಅಡ್ಡಾದಿಡ್ಡಿ ಬಸ್ಸುಗಳನ್ನು ನಿಲ್ಲಿಸಿದರೆ ಮುಟ್ಟುಗೋಲು : ಪೊಲೀಸ್ ಕಮಿಷನರ್

Pinterest LinkedIn Tumblr

ಮಂಗಳೂರು : ನಗರದ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ಬಸ್ಸುಗಳನ್ನು ನಿಲುಗಡೆ ಮಾಡುವುದು ಸೇರಿದಂತೆ ನಿರ್ಲಕ್ಷವಾಗಿ ಚಲಾಯಿಸುವ ಪ್ರಕರಣಗಳಿಗೆ ಸಂಬಂಧಿಸಿ ಆ ಬಸ್ಸುಗಳನ್ನು ಮುಟ್ಟುಗೋಲು ಹಾಕಬೇಕು. ಚಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸಂಚಾರಿ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

ನಗರದಲ್ಲಿ ಬಸ್ಸುಗಳ ನಿರ್ಲಕ್ಷದ ಚಲಾವಣೆ ಹಾಗೂ ಸಂಚಾರಿ ನಿಯಮಗಳ ಉಲ್ಲಂಘನೆ ಕುರಿತಂತೆ ಸಾರ್ವಜನಿಕರು ದೂರವಾಣಿ ಕರೆಯ ಮೂಲಕ ಹಾಗೂ ವಾಟ್ಸಾಪ್ ಸಂದೇಶದ ಮೂಲಕ ಸಾಕಷ್ಟು ದೂರುಗಳನ್ನು ನೀಡುತ್ತಿದ್ದಾರೆ. ಬಸ್ಸು ಮಾಲಕರಿಗೆ ಈ ಬಗ್ಗೆ ಚಾಲಕರಿಗೆ ಸೂಚನೆ ನೀಡಲು ಸಾಕಷ್ಟು ಬಾರಿ ತಿಳಿಸಲಾಗಿದೆ. ಇದೀಗ ಕ್ರಮ ಕೈಗೊಳ್ಳುವ ಮೂಲಕ ಎಚ್ಚರಿಕೆ ನೀಡಬೇಕು ಎಂದು ಅವರು ಹೇಳಿದ್ದಾರೆ.

ಲೇಡಿಹಿಲ್, ಉರ್ವಾಸ್ಟೋರ್, ಕಾವೂರು ಮೊದಲಾದ ಕಡೆ ಅನಧಿಕೃತ ಪಾರ್ಕಿಂಗ್ ಸಮಸ್ಯೆಗಳ ಕುರಿತಂತೆ ಕೂಡ ಸಾಕಷ್ಟು ದೂರುಗಳು ಬರುತ್ತಿದ್ದು, ಈ ಬಗ್ಗೆ ಕೂಡ ಪರಿಶೀಲನೆ ನಡೆಸಿ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಅಯುಕ್ತರು ತಿಳಿಸಿದ್ದಾರೆ.

Comments are closed.