ಕರಾವಳಿ

ಕೊಲ್ಲೂರು: ಹೊಸ ಮನೆಯ ದೇವರ ಕೋಣೆಗೆ ಸಾಗುವಾನಿ ಮರ ಕಡಿದ ಮೂವರ ಬಂಧನ

Pinterest LinkedIn Tumblr
ಉಡುಪಿ: ಕೊಲ್ಲೂರು ವನ್ಯಜೀವಿ ವಲಯದ ವ್ಯಾಪ್ತಿಯ ಮಾದಿಬರೆ ಮೀಸಲು ಅರಣ್ಯದ ಒಳಗೆ ಸಾಗುವಾನಿ ನೆಡುತೋಪಿನಲ್ಲಿ ಅಕ್ರಮವಾಗಿ ಸಾಗುವಾನಿ ಮರಗಳನ್ನು ಕಡಿದ ಮೂವರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಮಾವಿನಕಾರು ನಿವಾಸಿಗಳಾದ ಉದಯ ನಾಯ್ಕ, ಪ್ರಶಾಂತ ನಾಯಕ, ಹುಲಿಪಾರೆ‌ ನಿವಾಸಿ ನಾರಾಯಣ ಶೆಟ್ಟಿ ಬಂಧಿತರು.
ನಾರಾಯಣ ಶೆಟ್ಟಿ ಎಂಬವರು ತಾನು ಕಟ್ಟುತ್ತಿರುವ ಹೊಸ ಮನೆಯ ದೇವರ ಕೋಣೆಗೆ ಸಾಗುವಾನಿ ಮರವನ್ನು ತಂದುಕೊಡುವಂತೆ ಉದಯ ಮತ್ತು ಪ್ರಶಾಂತ್ ಎಂಬವರಿಗೆ ಪ್ರೆರೇಪಿಸಿದ್ದು  ಆರೋಪಿಗಳು ಅಕ್ರಮವಾಗಿ ಸಾಗುವಾನಿ ಕಡಿದಿದ್ದ ಬಗ್ಗೆ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದು ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಕೊಲ್ಲೂರು ವಲಯದ ವಲಯ ಅರಣ್ಯ ಅಧಿಕಾರಿ ಸವಿತಾ ದೇವಾಡಿಗ ಅವರ ಮುಂದಾಳತ್ವದಲ್ಲಿ ಕಾರ್ಯಾಚರಣೆ‌ ನಡೆದಿದ್ದು ಉಪವಲಯ ಅರಣ್ಯ ಅಧಿಕಾರಿಯಾದ ಶ್ರೀ ಸಿದ್ದೇಶ್ವರ, ಮಂಜುನಾಥ್,  ರೂಪೇಶ್, ಅರಣ್ಯ ರಕ್ಷಕರಾದ ವಿವೇಕ್, ಗಂಗಾಧರ್,  ದೇವಿಪ್ರಸಾದ್, ಅರಣ್ಯ ವೀಕ್ಷಕರಾದ ನವೀನ್ ಶೆಟ್ಟಿ,  ಈಶ್ವರ ಮೊದಲಾದವರು ಭಾಗವಹಿಸಿದ್ದರು.

Comments are closed.