ಮಂಗಳೂರು, ಜುಲೈ.05: ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಮಿಂಚಿನ ಕಾರ್ಯಚರಣೆ ಮೂಲಕ ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಬಡಗಮಿಜಾರು ಗ್ರಾಮದ ಬಂಗೇರಪದವು, ಪದಮಲೆ ಮತ್ತು ಮಂಜನಬೈಲು ಗ್ರಾಮ ಎಂಬಲ್ಲಿನ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಅಡ್ಡಕ್ಕೆ ದಾಳಿ ನಡೆಸಿ ನಾಲ್ಕು ಟ್ರಿಲ್ಲರ್ ಮೆಷಿನ್,ನಾಲ್ಕು ಲೋಡೆಡ್ ಲಾರಿಗಳು ಸೇರಿದಂತೆ ಸುಮಾರು 31 ಲಕ್ಷದ ಸೊತ್ತುಗಳು ವಶ ಪಡಿಸಿಕೊಂಡಿದ್ದಾರೆ.
ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಬಡಗಮಿಜಾರು ಗ್ರಾಮದ ಪದಮಲೆ ಮತ್ತು ಮಂಜನಬೈಲು ಗ್ರಾಮ ಎಂಬಲ್ಲಿ ಜೋಕಿಂ ಕೊರೆಯ ಮತ್ತು ಹೇಮಚಂದ್ರ, ಜಗದೀಶ್ ಎಂಬವರು ಯಾವುದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಕೆಂಪು ಕಲ್ಲಿನ ಗಣಿಗಾರಿಕೆಯನ್ನು ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯಂತೆ ಪಣಂಬೂರು ಉತ್ತರ ಉಪವಿಭಾಗದ ಎಸಿ ಶ್ರೀನಿವಾಸ ಆರ್.ಗೌಡ (ಐಪಿಎಸ್) ರವರ ನೇತೃತ್ವದ ರೌಡಿ ನಿಗ್ರಹ ದಳವು ಸದ್ರಿ ಸ್ಥಳಕ್ಕೆ ದಾಳಿ ನಡೆಸಿ ಕೆಂಪು ಕಲ್ಲುಗಳನ್ನು ಕೊರೆಯುವ 4 ಟ್ರಿಲ್ಲರ್ ಡ್ರೆಸ್ಸಿಂಗ್ ಮಷೀನ್ ಗಳನ್ನು ಮತ್ತು ಮೂಡಬಿದ್ರೆ ತಾಲೂಕು ಬಡಗಮಿಜಾರು ಗ್ರಾಮದ ಬಂಗೇರಪದವು ಎಂಬಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಕೆಂಪು ಕಲ್ಲುಗಳನ್ನು ಸಾಗಾಟ ಮಾಡುತ್ತಿದ್ದ ಕೆಎ-19-ಸಿ-2031, ಕೆಎ- 19-ಬಿ-7199, ಕೆಎ-42-1271, ಕೆಎ-19-ಎಎ-8904 ನೇ ಲಾರಿ ಮತ್ತು ಲಾರಿಗಳಲ್ಲಿ ತುಂಬಿದ ಕೆಂಪು ಕಲ್ಲುಗಳನ್ನು ಸ್ಥಳದಲ್ಲಿಯೇ ವಶಕ್ಕೆ ಪಡೆದುಕೊಂಡಿದ್ದಾರೆ.
ವಶಪಡಿಸಿಕೊಂಡ ಸೊತ್ತುಗಳನ್ನು ಮುಂದಿನ ಕ್ರಮದ ಬಗ್ಗೆ ಉಪನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಂಗಳೂರು ಇವರಿಗೆ ಹಸ್ತಾಂತರಿಸಲಾಗಿದ್ದು, ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ (4 ಟ್ರಿಲ್ಲರ್ ಡ್ರೆಸ್ಸಿಂಗ್ ಮಷೀನ್ ಮತ್ತು 4 ಲಾರಿಗಳ ಅಂದಾಜು ಮಾಲ್ಯ) ರೂ.30,60,000 (ಮೂವತ್ತು ಲಕ್ಷದ ಆರವತ್ತು ಸಾವಿರ) ಹಾಗೂ 4 ಲಾರಿಗಳಲ್ಲಿ ತುಂಬಿಸಿದ ಕೆಂಪು ಕಲ್ಲಿನ ಒಟ್ಟು ಮೌಲ್ಯ 60,000(ಆರವತ್ತು ಸಾವಿರ) ರೂ. ಒಟ್ಟು ಮೌಲ್ಯ ಸುಮಾರು 31.00000 ಲಕ್ಷ ರೂ.ಆಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಸಂದೀಪ್ ಪಾಟೀಲ್ ಪೊಲೀಸ್ ಆಯುಕ್ತರು ಮಂಗಳೂರು ನಗರ ರವರ ನಿರ್ದೇಶನದಂತೆ, ಹನಮಂತರಾಯ ಉಪ-ಪೊಲೀಸ್ ಆಯುಕ್ತರು ಐಪಿಎಸ್. (ಕಾ&ಸು) ಮಂಗಳೂರು ನಗರ ಮತ್ತು ಲಕ್ಷ್ಮೀ ಗಣೇಶ್ ಪೊಲೀಸ್ ಉಪ-ಆಯುಕ್ತರು (ಅಪರಾಧ &ಸಂಚಾರ) ಮಂಗಳೂರು ನಗರ ರವರ ಮಾರ್ಗದರ್ಶನದಂತೆ, ಹಾಗೂ ಶ್ರೀನಿವಾಸ ಆರ್ ಗೌಡ (ಐಪಿಎಸ್) ಸಹಾಯಕ ಪೊಲೀಸ್ ಆಯುಕ್ತರು ಮಂಗಳೂರು ಉತ್ತರ ಉಪ-ವಿಭಾಗ ಪಣಂಬೂರು, ರವರ ಆದೇಶದಂತೆ ನಡೆದ ಕಾರ್ಯಾಚರಣೆಯಲ್ಲಿ ಮೂಡಬಿದ್ರೆ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ದೇಜಪ್ಪ ಮತ್ತು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳದ ಸಿಬ್ಬಂದಿಗಳಾದ ಎಎಸ್ಐ ಮೊಹಮ್ಮದ್, ಕುಶಲ ಮಣಿಯಾಣಿ, ವಿಜಯ್ ಕಾಂಚನ್,ಸತೀಶ್ ಎಮ್. ಇಸಾಕ್ ಹಾಗೂ ಶರಣ್ ಕಾಳಿ ಹಾಗೂ ಮೂಡಬಿದ್ರೆ ಪೊಲೀಸ್ ಠಾಣಾ ಪೊಲೀಸ್ ಸಿಬ್ಬಂದಿಗಳಾದ ಶಿವರಾಜ್, ಬಂದೇ ನವಾಜ್, ಹಾಗೂ ಮೂಡಬಿದಿರೆ ಠಾಣಾ ಪೊಲೀಸರು ಪಾಲ್ಗೊಂಡಿದ್ದರು.
Comments are closed.