ಕರಾವಳಿ

ಪರಿಣಾಮಕಾರಿ ಬಜೆಟ್ – ‘ಸಭ್ ಕಾ ಸಾಥ್ ಸಭ್ ಕಾ ವಿಕಾಸ್’ನೊಂದಿಗೆ ‘ಸಭ್ ಕಾ ವಿಶ್ವಾಸ್’ : ಕ್ಯಾ.ಕಾರ್ಣಿಕ್

Pinterest LinkedIn Tumblr

ಮಂಗಳೂರು :ಅಭೂತಪೂರ್ವ ಐತಿಹಾಸಿಕ ವಿಜಯದೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬಂದ ಭಾಜಪಾ ಸರ್ಕಾರದಿಂದ ದೇಶದ ಮೊದಲನೇಯ ಪೂರ್ಣಕಾಲಿಕ ಮಹಿಳಾ ಅರ್ಥಿಕ ಮಂತ್ರಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಂದ ದೇಶದ ಪ್ರಸಕ್ತ ಅರ್ಥಿಕ ಪರಿಸ್ಥಿಯನ್ನು ಅರ್ಥೈಸಿಕೊಂಡು ಜಾಗತಿಕ ಸಮಸ್ಯೆಗಳನ್ನು ಮತ್ತು ಅರ್ಥಿಕ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ನೀಡಿರುವ ಅತ್ಯಂತ ಪರಿಣಾಮಕಾರಿ ಬಜೆಟ್ ಇದಾಗಿದ್ದು ಈ ಹಿಂದೆ ಫೆಬ್ರವರಿ ತಿಂಗಳಿನಲ್ಲಿ ಸನ್ಮಾನ್ಯ ಪಿಯೂಷ್ ಗೋಯಲ್‌ರವರು ನೀಡಿದ ‘ಸಭ್ ಕಾ ಸಾಥ್ ಸಭ್ ಕಾ ವಿಕಾಸ್’ನೊಂದಿಗೆ ‘ಸಭ್ ಕಾ ವಿಶ್ವಾಸ್’ನ್ನು ಸೇರಿಸಿ ನೀಡಿರುವ ಅರ್ಥಿಕ ಶಿಸ್ತನ್ನು ರೂಢಿಸಿರುವ ದೂರದೃಷ್ಠಿಯ ಸ್ವಾಗತಾರ್ಹ ಬಜೆಟ್ ಎಂದು ವಿಧಾನ ಪರಿಷತ್ ನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.

ಭಾರತ ದೇಶ ಐದು ಟ್ರಿಲಿಯನ್ ಅರ್ಥಿಕ ಶಕ್ತಿಯಾಗಿ ದಾಪುಗಾಲಿಡಲು ಪೂರಕವಾಗುವ ಬಜೆಟ್.ತೈಲದ ಮೇಲಿನ ಸೆಸ್ ಹಾಗೂ ಆಮದು ಚಿನ್ನದ ಮೇಲಿನ 12.5% ತೆರಿಗೆ ಸ್ವಲ್ಪ ಮಟ್ಟಿಗೆ ನಿರಾಶೆಯನ್ನು ಮೂಡಿಸಿದರು. ಒಂದೇ ದೇಶ ಒಂದೇ ತೆರಿಗೆಯನ್ನು ಅನುಷ್ಠಾನ ಗೊಳಿಸಿದ  ಜಿ.ಎಸ್.ಟಿ ಈಗಾಗಲೆ ಜನ ಸಾಮಾನ್ಯರು ಉಪಯೋಗಿಸುವ ಎಲ್ಲಾ ವಸ್ತುಗಳ ಮೇಲೆ ತೆರಿಗೆಯನ್ನು ಕಡಿಮೆಗೊಳಿಸಿ ರುವುದರಿಂದ ಅಷ್ಟೇನೂ ಚಿಂತಿಸಬೇಕಾದ ವಿಷಯವಲ್ಲ.

ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್‌ಗಳನ್ನು ಅಂತರಾಷ್ಟ್ರೀಯ ಮಟ್ಟಕೇರಿಸಲು ನೀಡಿರುವ ವಿಶೇಷ ಅನುದಾನ ಹಾಗೂ ರಾಷ್ರ್ಟೀಯ ಸಂಶೋಧನ ಸಂಸ್ಥೆಯ ಸ್ಥಾಪನೆ ಶ್ಲಾಘನೀಯ ಹೆಜ್ಜೆ.

ದೇಶದ ಪ್ರತಿ ಮನೆಗೂ ಕುಡಿಯುವ ನೀರು ಪೂರೈಕೆಗೆ ‘ಹರ್ ಘರ್ ಜಲ್’ ಯೋಜನೆ ಅತ್ಯಂತ ಮಹತ್ವದ ನಿರ್ಣಯ.
ಶೂನ್ಯ ಬಂಡವಾಳ ಕೃಷಿ, 2022ರ ವೇಳೆಗೆ ಕೃಷಿಕನ ಆದಾಯ ದ್ವಿಗುಣ ಗೊಳಿಸಲು ಸರ್ವವ್ಯಾಪಿ ಯೋಜನೆ ರೈತನ ಪಾಲಿಗೆ ಆಶಾದಾಯಕ ನಿರ್ಣಯ.

ಅಗತ್ಯ ರಕ್ಷಣಾ ಸಾಮಾಗ್ರಿಗಳ ಆಮದಿನ ಮೇಲೆ ನೀಡಿರುವ ವಿನಾಯತಿ ಸ್ವಾಗತರ್ಹ.ಅಸಂಘಟಿತ ಮೂರು ಕೋಟಿ ಸಣ್ಣ ವ್ಯಾಪಾರಿಗಳಿಗೆ ವಿಮಾ ಯೋಜನೆ ಈ ಸರ್ಕಾರದ ಜನಪರ ಚಿಂತನೆಗೆ ಒಂದು ನಿದರ್ಶನ. ಜನ ಸಾಮಾನ್ಯನ ಮೇಲೆ ಯಾವುದೇ ಭಾರವಿಲ್ಲದೆ ದೇಶದ ಜನತೆ ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕಾದ ಬಜೆಟ್ ಇದಾಗಿದೆ ಎಂದು ಕಾರ್ಣಿಕ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.