ಮಂಗಳೂರು : ಮಾತಾ ಅಮೃತಾನಂದಮಯಿ ಮಠದ ವತಿಯಿಂದ ,ಎಂ ಆರ್ ಪಿ ಎಲ್ ಸಹಯೋಗದೊಂದಿಗೆ ಮಂಗಳೂರಿನ ಸುಲ್ತಾನ್ ಬತ್ತೇರಿ ನದಿ ಕಿನಾರೆಯಲ್ಲಿ ಅಮಲ ಭಾರತ ಸ್ವಚ್ಛತಾ ಜನ ಜಾಗರಣ ಯಜ್ಞ ಶನಿವಾರ ಮಧ್ಯಾಹ್ನ ಜರುಗಿತು. ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಗೌರವಾಧ್ಯಕ್ಷ ಸಿಎ ವಾಮನ ಕಾಮತ್ ರವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರಿಂದ ಮಂಗಳೂರು ನಗರದಲ್ಲಿ 8 ವರ್ಷಗಳ ಹಿಂದೆ ಆರಂಭ ಗೊಂಡ ಸ್ವಚ್ಚತಾ ಜನ ಜಾಗರಣ ಯಜ್ಞ ಇಂದು ಅತ್ಯಂತ ಯಶಸ್ವಿಯಾಗಿ ಜನರ ಪ್ರೀತಿ ವಿಶ್ವಾಸ ಗಳಿಸುತ್ತಿದೆ.
ನಮ್ಮ ದೇಹ,ಮನಸ್ಸು, ಚಿಂತನೆಗಳು ಸ್ವಚ್ಛಗೊಂಡಾಗ ಶ್ರೇಷ್ಠತೆಯತ್ತ ಸಾಗಲು ಸಾಧ್ಯ, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ವಚ್ಚತಾ ಸೇವೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಇತರರಿಗೂ ಸ್ಪೂರ್ತಿ ತುಂಬುವಂತೆ ಕರೆಯಿತ್ತರು.
ಮಠದ ಮುಖ್ಯಸ್ಥರಾದ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ, ಅಮಲ ಭಾರತ ಅಭಿಯಾನದ ಅಧ್ಯಕ್ಷರಾದ ಡಾ.ಜೀವರಾಜ್ ಸೊರಕೆ,ಸೇವಾಸಮಿತಿಯ ಅಧ್ಯಕ್ಷ ಶ್ರೀ ಪ್ರಸಾದ್ ರಾಜ್ ಕಾಂಚನ್,ಸಂಘಟನಾ ಕಾರ್ಯದರ್ಶಿ ಶ್ರೀ ಸುರೇಶ್ ಅಮಿನ್, ಉಪಾಧ್ಯಕ್ಷ ಡಾ.ದೇವದಾಸ್, ಚಂದ್ರಹಾಸ್ ಸುವರ್ಣ, ಮಾಧವ ಸುವರ್ಣ, ಶ್ರೀ ಕೃಷ್ಣ ಶೆಟ್ಟಿ, ರಾಜನ್, ರವಿ ಉಚ್ಚಿಲ್,ಪ್ರಕಾಶ್ ಠಕ್ಕರ್,ಪ್ರಕಾಶ್ ಕರ್ಕೇರ್,ಆಯುಧ ಅಧ್ಯಕ್ಷ ಸಿ ಎ ರಾಮನಾಥ್ ,ಗೋಕರ್ಣನಾಥ ಕಾಲೇಜಿನ ಎನ್ ಎಸ್ ಎಸ್ ಅಧಿಕಾರಿ ಡಾ.ದಿನಕರ್ ಪಚ್ಚನಾಡಿ,ಮಿಲಾಗ್ರಿಸ್ ಕಾಲೇಜಿನ ಪ್ರೋಗ್ರಾಂ ಆಫಿಸರ್ ಡೆನ್ಝಿಲ್ ಪಿಂಟೋ ಮೊದಲಾದವರು ಉಪಸ್ಥಿತರಿದ್ದರು.
ಸೇವಾರ್ಥಿಗಳಾಗಿ ಸೈಂಟ್ ಅಲೋಶಿಯಸ್ ಕಾಲೇಜು, ಮಿಲಾಗ್ರಿಸ್ ಕಾಲೇಜು, ಶ್ರೀ ಗೋಕರ್ಣನಾಥೇಶ್ವರ ಕಾಲೇಜು,ಸೈಂಟ್ ಆಗ್ನೆಸ್ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳು, ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಸ್ಥಳೀಯ ಸಾರ್ವಜನಿಕರು ಭಾಗವಹಿಸಿದ್ದರು.ಇನ್ನೂರು ಮಂದಿ ಹತ್ತು ತಂಡಗಳಲ್ಲಿ ವಿವಿಧ ಸ್ಥಳಗಳಲ್ಲಿ ಸ್ವಚ್ಚತಾ ಸೇವೆಗೈದರು.
Comments are closed.