ಮಂಗಳೂರು : ಇದೇ ತಾ.22.07.2019 ರಿಂದ ಶ್ರೀ ಸಂಸ್ಥಾನ ಕಾಶೀಮಠಾಧೀಶ ಶ್ರೀಮತ್ ಶ್ರೀಸಂಯಮೀಂದ್ರ ತೀರ್ಥ ಸ್ವಾಮೀಜಿ ಯವರು ಕೋಟ ಶ್ರೀಕಾಶೀಮಠದ ಶ್ರೀಮುರಲೀಧರ ಕೃಷ್ಣ ಮುಖ್ಯಪ್ರಾಣ ದೇವಸ್ಥಾನದಲ್ಲಿ ವಿಕಾರಿ ಸಂ|ರದ ಚಾತುರ್ಮಾಸ ವೃತವನ್ನು ಆಚರಿಸಲಿದ್ದಾರೆ.
ತಾ.11.07.19 ರ ಗುರುವಾರದಂದು ಮುನಿಯಾಲು ಶ್ರೀವೆಂಕಟರಮಣ ದೇವಸ್ಥಾನದ ಮೊಕ್ಕಾಂನಿಂದ ಆಗಮಿಸಲಿರುವ ಶ್ರೀ ಸ್ವಾಮಿಜಿ ಯವರನ್ನು ಸಂಸ್ಥಾನದ ಆರಾಧ್ಯ ದೇವರಾದ ವ್ಯಾಸರಘುಪತಿ ದೇವರನ್ನು ಕೋಟದ ಶ್ರೀಹಿರೇಮಹಾಲಿಂಗೇಶ್ವರ ದೇವಸ್ಥಾನದ ಸಮೀಪದಿಂದ ವೈಭವದ ಮೆರವಣಿಗೆಯಲ್ಲಿ ಸ್ವಾಗತಿಸಲಾಗುವುದು.
ಚಾತುರ್ಮಾಸದ ಅಂಗವಾಗಿ ಹೊರೆಕಾಣಿಕೆ ಸಮರ್ಪಣೆಯನ್ನು ಆಯೋಜಿಸಿದ್ದು ತಾ.14.07.2019 ರ ಆದಿತ್ಯವಾರ ಸಾಯಂಕಾಲ 4ಗಂಟೆಗೆ ಹೊರೆಕಾಣಿಕೆ ಮೆರವಣಿಗೆ ಹೊರಡಲಿದೆ.
ತಾ.19.07.2019 ರಿಂದ ಮೊದಲ್ಗೊಡು 21.07.2019ರ ತನಕ ಸಾನಿಧ್ಯಹವನಾದಿಗಳು ಜರಗಲಿದ್ದು, 22.07.2019ರ ಸೋಮವಾರ ಶ್ರೀವ್ಯಾಸರಘುಪತಿ ದೇವರಿಗೆ ಶತಕಲಶಾಭಿಶೇಕ, ಲಘುವಿಷ್ಣುಕಲಶಾಭಿಶೇಕ, ಕನಕಾಭಿಶೇಕ, ಮುದ್ರಾದಾನ ನಡೆಯಲಿದ್ದು ಮಧ್ಯಾಹ್ನ ಮಹಾಪೂಜೆಯ ಬಳಿಕ ಮೃತ್ತಿಕಾ ಪೂಜನೆಯೊಂದಿಗೆ ಚಾತುರ್ಮಾಸ ವೃತವು ಆರಂಭವಾಗಲಿದೆ.
ಚಾತುರ್ಮಾಸ ಕಾಲದಲ್ಲಿ ಭಜನಾ ಕಾರ್ಯಕ್ರಮಗಳು, ಭಾಗವತ ಹವನ,ಭಜನಾ ಸಪ್ತಾಹ, ಋಕಸಂಹಿತಾ ಯಾಗ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದೆ ಇಂದು ಚಾತುರ್ಮಾಸ ಸಮಿತಿ 2019ರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Comments are closed.