ಮಂಗಳೂರು : ದ.ಕ.ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ನಡೆದ ದನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ವಿಶೇಷ ಅಪರಾಧ ಪತ್ತೆ ದಳ ವಶಕ್ಕೆ ಪಡೆದಿದೆ.
ಕುಖ್ಯಾತ ಅಂತರ್ ಜಿಲ್ಲಾ ದನಕಳ್ಳ ಬಶೀರ್ ಯಾನೆ ಆರ್ಗಾ ಬಶೀರ್ (42) ಬಂಧಿತ ಆರೋಪಿ. ಐಷಾರಾಮಿ ಕಾರೊಂದರಲ್ಲಿ ಅಕ್ರಮವಾಗಿ ಹಿಂಸಾತ್ಮಕವಾಗಿ ಗೋ ಸಾಗಾಟ ನಡೆಸುತ್ತಿರುವಾಗ ಮುಂಡಾಜೆ ಸಮೀಪ ಕಾರು ಪಲ್ಟಿಯಾದ ಪ್ರಕರಣದಲ್ಲಿ ಕೂಡ ಈತ ಆರೋಪಿಯಾಗಿದ್ದಾನೆ.
ಉಜಿರೆಯ ಬಳಿಯ ಮುಂಡಾಜೆಯಲ್ಲಿ ದನಗಳನ್ನು ಕಳ್ಳತನಮಾಡಿ ಸಾಗಿಸ್ತುತ್ತಿದ್ದಾಗ ವಾಹನ ಅಡಿಮೇಲಾಗಿ ವಾಹನದಲ್ಲಿದ್ದ ದನಗಳೆಲ್ಲ ಸತ್ತಿದ್ದು ಈ ವಾಹನದಲ್ಲಿ ಈತನೇ ಚಾಲಕನಾಗಿ ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ.ಮುಂಡಾಜೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡುಬಿದಿರೆ ಹಿದಾಯತ್ ನಗರದ ಕಾರು ಮಾಲೀಕ ಅನ್ಸಾರ್ (27) , ಜುಬೇರ್ (26) ಈ ಹಿಂದೆಯೇ ಬಂಧಿಸಲಾಗಿತ್ತು. ಅಲ್ಲದೆ ಸುರತ್ಕ್ಲಲ್ ಕೃಷ್ಣಾಪುರ ನೈತಂಗಡಿ ಬಳಿಯಲ್ಲಿ ಗೀತಾ ಎಂಬವರ ಮನೆಯಿಂದ ದನ ಕಳ್ಳತನ ಮಾಡಿದ ಆರೋಫಿಗಳ ಪೈಕಿ ಈತನೇ ಪ್ರಮುಖನಾಗಿರುತ್ತಾನೆ.
ದನಕಳ್ಳತನವನ್ನೆ ಕಸುಬನ್ನಾಗಿಸಿಕೊಂಡಿದ್ದ ಬಶೀರ್ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತನ ಸಹಚರರು ಬಂಧಿತರಾಗಿದ್ದರೂ ಉಜಿರೆಯ ಬಳಿಯ ಮುಂಡಾಜೆಯಲ್ಲಿ ನಡೆದ ಘಟನೆಯ ಬಳಿಕ ತಲೆ ಮರೆಸಿಕೊಂಡು ಬಳಿಕ ನ್ಯಾಯಾಲಯದಿಂದ ಮುಂಜಾಗ್ರತಾ ಜಾಮೀನು ಪಡೆದು ಬಳಿಕ ಅದೇ ಕೃತ್ಯದಲ್ಲಿ ತೊಡಗಿಸಿಕೊಂಡು ತಿರುಗುತ್ತಿದ್ದ.
ಈತ ಪ್ರಕರಣ ದಾಖಲಾಗಿ ದಸ್ತಗಿರಿಗೆ ಸಿಗದೇ ತಲೆ ಮರೆಸಿಕೊಂಡು ತಿರುಗುತ್ತಿದ್ದುದಾಗಿ ಮಾಹಿತಿಯಿದ್ದು ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ ಶ್ರೀನಿವಾಸ ಆರ್. ಗೌಡ ನೇತ್ರತ್ವದ ವಿಷೇಷ ಅಪರಾಧ ಪತ್ತೆ ದಳಕ್ಕೆ ದೊರೆತ ಖಚಿತ ವರ್ತಮಾನದ ಮೇರೆಗೆ ಆತನನ್ನು ಮೂಡುಬಿದ್ರೆಯ ತೋಡಾರ್ ಬಳಿ ಮೂಡುಬಿದ್ರೆ ಪೊಲೀಸರ ಸಹಕಾರದೊಂದಿಗೆ ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಇತನ ವಿರುದ್ದ ಚಿಕ್ಕಮಗಳೂರು ಜಿಲ್ಲೆ:ಯ ಕಳಸ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ , ಕೊಡಗು ಜಿಲ್ಲೆಯ ವಿರಾಜ್ ಪೇಟೆ ಒಂದು ಹಾಗೂ ದ.ಕ. ಜಿಲ್ಲೆಯ ವೇಣೂರು ಪೊಲೀಸ್ ಠಾಣೆಯಲ್ಲಿ ಒಂದು, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎರಡು , ಮಂಗಳೂರು ನಗರ ಠಾಣೆಯಲ್ಲಿ ನಾಲ್ಕು, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಒಂದು , ಮೂಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಎರಡು, ಬಜಪೆ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣ ದಾಖಲಾಗಿದೆ.
ಮಂಗಳೂರು ನಗರ ಪೊಲೀಸು ಆಯುಕ್ತ ಸಂದೀಪ್ ಪಾಟಿಲ್ ಇವರ ನಿರ್ದೇಶನದಂತೆ ಮಂಗಳೂರು ನಗರ ಪೊಲೀಸ್ ಉಪ-ಆಯುಕ್ತರು (ಕಾ & ಸು) ಹನುಮಂತರಾಯ ಐ.ಪಿ.ಎಸ್. ಪೊಲೀಸ್ ಉಪ-ಆಯುಕ್ತರು(ಅಪರಾಧ & ಸಂಚಾರ) ಲಕ್ಮೀ ಗಣೇಶ್ ಇವರ ಮಾರ್ಗದರ್ಶನದಂತೆ ಮಂಗಳೂರು ಉತ್ತರ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀನಿವಾಸ ಆರ್ ಗೌಡ (ಐಪಿಎಸ್) ಇವರ ನೇತೃತ್ವ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಜಪೆ ಠಾಣಾ ಪೊಲೀಸ್ ನಿರೀಕ್ಷಕರಾದ ಪರಶಿವ ಮೂರ್ತಿ, ಸುರತ್ಕಲ್ ಪೊಲೀಸ್ ಠಾಣಾ ನಿರೀಕ್ಷಕರಾದ ರಾಮಕೃಷ್ಣ ಕೆ.ಜಿ.,ಮಂಗಳೂರು ಉತ್ತರ ಉಪವಿಭಾಗದ ವಿಶೇಷ ಅಪರಾಧ ಪತ್ತೆ ದಳದ ಅಧಿಕಾರಿ ಸಿಬ್ಬಂದಿಗಳಾದ ಮೊಹಮ್ಮದ್ ಎ.ಎಸ್.ಐ. ಕುಶಲ ಮಣಿಯಾಣಿ, ಸತೀಶ್. ಎಂ. ವಿಜಯ ಕಾಂಚನ್, ಇಸಾಕ್ ಮತ್ತು ಶರಣ್ ಕಾಳಿ,ಹಾಗೂ ಮೂಡುಬಿದ್ರೆ ಠಾಣಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
Comments are closed.