ಕರಾವಳಿ

ಕ್ರಿಕೆಟ್ ಬೆಟ್ಟಿಂಗ್ : ಇಬ್ಬರ ಸೆರೆ – ಮೊಬೈಲ್, ಕಂಪ್ಯೂಟರ್, ಕಾರು ಸಹಿತಾ ರೂ.70 ಸಾವಿರ ನಗದು ವಶ

Pinterest LinkedIn Tumblr

ಮಂಗಳೂರು : ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಯುವಕರನ್ನು ಸಿಸಿಬಿ ಪೊಲೀಸರು ತಲಪಾಡಿ ಸಮೀಪದ ಮನೆಯೊಂದರಿಂದ ಬಂಧಿಸಿದ್ದಾರೆ.

ಬಂಧಿತರನ್ನು ವಿಟ್ಲ ಸಮೀಪದ ನಿವಾಸಿ ಸಂತೋಷ್ (35) ಮತ್ತು ಕಂಕನಾಡಿ ಸಮೀಪದ ನಿವಾಸಿ ಜೀವನ್ (22) ಎಂದು ಹೆಸರಿಸಲಾಗಿದೆ. ಇವರನ್ನು ಹಣವನ್ನು ಪಣಕ್ಕಿಟ್ಟು ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದಲ್ಲಿ ಬಂಧಿಸಲಾಗಿದೆ.

ಬಂಧಿತರಿಂದ ಮೊಬೈಲ್, ಕಂಪ್ಯೂಟರ್, ಒಂದು ಕಾರು ಸೇರಿದಂತೆ ರೂ.70,000 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಲೊಕ್ಯಾಂಟೋ ಆ್ಯಾಪ್ ಮೂಲಕ ಬೆಟ್ಟಿಂಗ್ ವ್ಯವಹಾರದಲ್ಲಿ ಯುವಕರನ್ನು ತೊಡಗಿಸುತ್ತಿದ್ದರೆನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Comments are closed.