ಕುಂದಾಪುರ: ಕಳೆದ ಐದು ವರ್ಷದಿಂದ ಶಿಥಿಲಗೊಂಡ ಓವರ್ ಹೆಡ್ ನೀರಿನ ಟ್ಯಾಂಕ್ ಡೆಮಾಲಿಶ್ ಮಾಡಿಕೊಡುವಂತೆ ಹೋರಾಟ ನಡೆದಿದೆ. ತಾಲೂಕು ಹಾಗೂ ಜಿಲ್ಲಾ ಮಟ್ಟದ ದಲಿತ ಕುಂದುಕೊರತೆ ಸಭೆಯಲ್ಲಿ ಪ್ರತೀಸಲವೂ ಶಿಥಿಲ ನೀರಿನ ಟ್ಯಾಂಕ್ ಗಮನ ಸೆಳೆದಿದೆ. ಆದರೂ ಆಪಾಯಕಾರಿ ನೀರಿನ ಟ್ಯಾಂಕ್ ತೆರವು ಮಾಡಿಲ್ಲ. ದಲಿತರ ಹಕ್ಕು, ಅವರ ಸಮಸ್ಯೆಗೆ ಜಿಲ್ಲಾಡಳಿತ ಹೇಗೆ ಸ್ಪಂದಿಸತ್ತದೆ ಎನ್ನೋದಕ್ಕೆ ನೀರಿನ ಟ್ಯಾಂಕ್ ಸಾಕ್ಷಿ. ಈ ಕುರಿತ ಒಂದು ಸ್ಟೋರಿಯಿಲ್ಲಿದೆ ನೋಡಿ.
ಗೋಪಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಸನಿಹವಿರುವ ನೀರಿನ ಟ್ಯಾಂಕ್ ಬಳಿ ವಾಸಿಮಾಡುತ್ತಿರುವ ಕುಟುಂಬಗಳು ಕಳೆದ ಐದು ವರ್ಷದಿಂದ ನೆಮ್ಮದಿಯ ನಿದ್ದೆ ಮಾಡಿಲ್ಲ. ರಾತ್ರಿ ಮಲಗಿದರೂ ಎಲ್ಲಿ ನೀರಿನ ಟ್ಯಾಂಕ್ ಬೀಳುತ್ತದೋ ಎಂಬ ಕನವರಿಕೆಯಲ್ಲಿ ಎದ್ದು ಕೂರುತ್ತಾರೆ. ಪ್ರತೀದಿನ ಮಾನಸಿಕ ನೆಮ್ಮದಿ ಕಳೆದುಕೊಂಡು ಅಂಗೈಯಲ್ಲಿ ಜೀವ ಹಿಡಿದು ದಿನ ಕಳೆಯುತ್ತಿದ್ದಾರೆ. ಕಳೆದ ಐದು ವರ್ಷದಿಂದ ನೀರಿನ ಟ್ಯಾಂಕ್ ಡೆಮಾಲಿಶ್ ಮಾಡುವಂತೆ ದಲಿತ ಸಂಘರ್ಷ ಸಮಿತಿ ನಡೆಸುತ್ತಾ ಬಂದ ಹೋರಾಟಕ್ಕೆ ಜಿಲ್ಲಾಡಳಿತ ಕವಡೆಕಾಸಿನ ಕಿಮ್ಮತ್ತು ಕೊಟ್ಟಿಲ್ಲಾ ಎನ್ನೋದು ನಾಗರಿಕ ಪ್ರಪಂಚ ತಲೆ ತಗ್ಗಿಸುವಂತೆ ಮಾಡಿದೆ. 1983-84ರಲ್ಲಿ ಗ್ರಾಮೀಣ ನೀರು ಪೂರಕೆ ಯೋಜನೆ ಮೂಲಕ ಗೋಪಾಡಿ ಬೀಜಾಡಿ ಗ್ರಾಮದ ಕುಡಿಯುವ ನೀರು ಪೂರೈಕೆಗಾಗಿ ಓವರ್ ಹೆಡ್ ನೀರಿನ ಟ್ಯಾಂಕ್ ನಿರ್ಮಿಸಲಾಯಿತು.
ಒಟ್ಟಾರೆ ದಲಿತರ ಅನುಕೂಲಕ್ಕಾಗಿ ವಿಶೇಷ ಯೋಜನೆ, ಕಾನೂನುಗಳಿದ್ದರೂ, ದಲಿತರ ಜೀವದೊಟ್ಟಿಗೆ ಚೆಲ್ಲಾಟವಾಡುವ ನೀರಿನ ಟ್ಯಾಂಕ್ಗೆ ಮೋಕ್ಷ ಸಿಕ್ಕಿಲ್ಲ ಎನ್ನೋದು ದಲಿತರ ಜೀವನ ಜಿಲ್ಲೆಯಲ್ಲಿ ಯಾವ ಹಂತದಲ್ಲಿದೆ ಅನ್ನೋದಕ್ಕೆ ನಿದರ್ಶನವಾಗಿದೆ. ದಲಿತ ಕುಂದು ಕೊರೆತೆ ಸಭೆಯಲ್ಲಿ ಶಿಥಿಲಗೊಂಡ ವ್ಯಾಟರ್ ಟ್ಯಾಂಕ್ ಸಂಗತಿ ಪ್ರಸ್ತಾಪವಾಗುತ್ತೆ. ಎಲ್ಲಾ ಅಧಿಕಾರಿಗಳು ಟ್ಯಾಂಕ್ ತೆರವು ಮಾಡುವ ಭರವಸೆ ನೀಡಿದ್ದಾರೆ. ಡಿಸಿ, ಎಸಿ ಎಲ್ಲರೂ ಸ್ಥಳಕ್ಕೆ ಬಂದು ಟ್ಯಾಂಕ್ ಸ್ಥಿತಿ ಕಂಡಿದ್ದಾರೆ. ಒಂದು ವಾರದಲ್ಲಿ ಶಿಥಿಲಗೊಂಡ ನೀರಿನ ಟ್ಯಾಂಕ್ ತೆರವು ಮಾಡಬೇಕು. ಇಲ್ಲದಿದ್ದರೆ, ಮನೆಯವರೊಟ್ಟಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರಾಜು ಬೆಟ್ಟಿನಮನೆ ಆಗ್ರಹಿಸಿದ್ದಾರೆ.
ಕೋಟೇಶ್ವರ ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ-66 ನಡುವೆ ನಾಲ್ಕು ಮನೆ ಸೇರಿ ಐದು ಕುಟುಂಬ ವಾಸ ಮಾಡುತ್ತಿದ್ದು, ಮಕ್ಕಳು ಹಾಗೂ ದೊಡ್ಡವರು ಸೇರಿ ಇಪ್ಪತ್ತರಷ್ಟು ಜನಸಂಖ್ಯೆ ಇದೆ. ಟ್ಯಾಂಕ್ ಶಿಥಿಲಾವಸ್ಥೆ ಗೊಂಡಿರುವುದರಿಂದ ದಲಿತ ಕುಟುಂಬಕ್ಕೆ ಅಷ್ಟೇ ಅಲ್ಲಾ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವ ವಾಹನಗಳಿಗೂ ಅಪಾಯವಿದೆ. ದಿನಂಪ್ರತಿ ಟ್ಯಾಂಕ್ ಬಳಿ ನೂರಾರು ಜನ ಸಂಚಾರವಿದ್ದು, ಶಾಲೆಗೆ ಹೋಗುವ ಮಕ್ಕಳು ಕೂಡಾ ಇದೇ ಮಾರ್ಗದಲ್ಲಿ ಹೋಗಬೇಕು. ವಾಟರ್ ಟ್ಯಾಂಕ್ ದೊಡ್ಡ ಗಾಳಿ ಬಂದರೆ ಸಾಕು ಗಾಳಿಬಂದ ಕಡೆ ವಾಗುತ್ತದೆ. ಟ್ಯಾಂಕ್ ಪಕ್ಕದಲ್ಲಿ ಒಂದು ಮನೆಯಿದ್ದು, ಎರಡು ಕುಟುಂಬ ವಾಸಡುತ್ತಿದೆ. ಕುಟುಂಬದ ಹಿರಿಯ ಹಿರಿಯ ಮಹಿಳೆ ಕೊರ್ಗು ಎಂಬವರು ಹಾಸಿಗೆ ಹಿಡಿದಿದ್ದು, ಪರಾವಲಂಬಿಯಾಗಿದ್ದಾರೆ.
ನೀರಿನ ಟ್ಯಾಂಕ್ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಸಿಎಸ್ ಗಮನ ಸೆಳೆದಿದ್ದು, ಸ್ಥಳಕ್ಕ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಭೇಟಿ ನೀಡಿ, ಟ್ಯಾಂಕ್ ತೆರವು ಮಾಡಿಸುವ ಭರವಸೆ ನೀಡಿದ್ದು, ಅವರ ವರ್ಗಾವಣೆ ಆಗಿ, ಚುನಾವಣೆ ನೀತಿ ಸಂಹಿತೆಯಿಂದ ಗ್ರಾಮಪಂಚಾಯತ್ ಪ್ರಸ್ತಾಪ ನೆನೆಗುದಿಗೆ ಬಿತ್ತು. ಟ್ಯಾಂಕ್ ತೆರವು ಮಾಡಲು ಎರಡೂವರೆ ಲಕ್ಷ ಎಸ್ಟಿಮೇಟ್ ಆಗಿದ್ದು, ಅಷ್ಟು ಹಣ ಗ್ರಾಪಂನಿಂದ ಹೊಂದಿಸಲು ಆಗೋದಿಲ್ಲ. ಪ್ರಕೃತಿ ವಿಕೋಪ ನಿಧಿಯಲ್ಲಿ ಸಾಕಷ್ಟು ಅನುದಾನವಿದ್ದು, ಆ ಅನುದಾನ ಬಳಸಿ ಟ್ಯಾಂಕ್ ತೆರವು ಮಾಡಬಹುದಾಗಿದ್ದರೆ, ಪ್ರಕೃತಿ ವಿಕೋಪ ನಿಧಿ ಅನಾಹುತ ನಂತರ ಪರಿ?ಹಾರ ಕೊಡಲಿಕ್ಕೆ ಇರೋದಾ? ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಅನುದಾನ ಕೊಟ್ಟರೆ ಗ್ರಾಪಂ ತೆರವು ಮಾಡಲು ಸಿದ್ದವಿದೆ ಎಂದು ಗೋಪಾಡಿ ಗ್ರಾಮ ಪಂಚಾಯ್ತ್ ಅಧ್ಯಕ್ಷೆ ಸರಸ್ವತಿ ಜಿ.ಪುತ್ರನ್ ಹೇಳುತ್ತಾರೆ.
ಒಟ್ಟಿನಲ್ಲಿ ಈ ಅಪಾಯಕಾರಿ ಟ್ಯಾಂಕ್ ಹೆದ್ದಾರಿ ಹಾಗೂ ರ್ಯಾಜ್ಯ ಹೆದ್ದಾರಿ ಮೇಲೆ ವಾಲಿದರೆ ಅನಾಹುತವೇ ಜರುಗಲಿದ್ದು, ಮನೆಗಳ ಮೇಲೆ ಒರಗಿದರೆ ಮೂರು ಮನೆ ನೆಲಸಮ ಆಗುವುದಷ್ಟೇ ಅಲ್ಲಾ ಪ್ರಾಣ ಹಾನಿ ಸಂಭವಿಸದರೂ ಅಚ್ಚರಿಯಲ್ಲ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಸಂಬಂದಪಟ್ಟ ಇಲಾಖೆ ಕೂಡಲೇ ಟ್ಯಾಂಕ್ ತೆರವು ಮಾಡಬೇಕಿದೆ.
Comments are closed.