ಕರಾವಳಿ

ಮಂಗಳೂರಿನಲ್ಲಿ ಗಾಂಜಾ ಮಾರಾಟಕ್ಕೆ ಯತ್ನ : 1 ಕೆ.ಜಿಗೂ ಅಧಿಕ ಗಾಂಜಾ ಸಹಿತ ನಾಲ್ವರ ಬಂಧನ

Pinterest LinkedIn Tumblr

ಮಂಗಳೂರು : ಮಂಗಳೂರು ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯೊಂದರಲ್ಲಿ ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳನ್ನು 1 ಕೆ.ಜಿಗೂ ಅಧಿಕ ಗಾಂಜಾ ಸಹಿತ ಬಂಧಿಸಿದ್ದಾರೆ.

ನಗರದಲ್ಲಿ ಅವ್ಯಾಹುತವಾಗಿ ನಡೆಯುತ್ತಿರುವ ಡ್ರಗ್ಸ್ ಹಾವಳಿ ವಿರುದ್ಧ ಸಮರ ಸಾರಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರ ನಿರ್ದೇಶನದಂತೆ ಮಂಗಳೂರು ನಗರ ಪೊಲೀಸ್ ಕಮಿಷನರೆಟ್‌ನ ಕೇಂದ್ರ ವಿಭಾಗದ ಬಾಸ್ಕರ್ ವಿ.ಬಿ ಹಾಗೂ ಅವರ ತಂಡ ಈ ಕಾರ್ಯಾಚರಣೆ ನಡೆಸಿದ್ದು, ನಗರದ ಅತ್ತಾವರ ಬಾಬುಗುಡ್ಡೆ ಒಂದನೇ ಕ್ರಾಸ್ ರಸ್ತೆಯಲ್ಲಿ ದಾಳಿ ನಡೆಸಿ ಗಾಂಜಾ ಸಹಿತಾ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ವೆಲೆನ್ಸಿಯಾದ ಕ್ಲೆವಿನ್ ಸಲ್ಡಾನಾ(21), ಮಂಗಳಾದೇವಿಯ ಸಾಗರ್ ಅಮೀನ್ (23), ಎಕ್ಕೂರು ಕಲ್ಕರ್ ಮನೆ ನಿವಾಸಿ ಪೃಥ್ವಿ ಪಿ. ಕುಮಾರ್(19) ಹಾಗೂ ಅತ್ತಾವರ ಬಾಬುಗುಡ್ಡೆಯ ವಿ.ಎಸ್. ನಿಖಿಲ್ (21) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 1 ಕೆ.ಜಿ. 200 ಗ್ರಾಂ ಗಾಂಜಾ ಹಾಗೂ ಐದು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

Comments are closed.