ಮಂಗಳೂರು, ಜುಲೈ.14 : ಸ್ವಚ್ಛ, ಸುಂದರ ಹಾಗೂ ಆರೋಗ್ಯ ಪೂರ್ಣ ಸಮಾಜಕ್ಕಾಗಿ ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಸ್ವಚ್ಚತಾ ಜನ ಜಾಗೃತಿ ಅಭಿಯಾನ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಶನಿವಾರ ದಿನಾಂಕ13/7/2019 ರಂದು ಜರುಗಿತು.
ಎಂಆರ್ ಪಿಎಲ್ ಸಹಭಾಗಿತ್ವದಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಮಂಗಳೂರಿನ ವಿವಿಧ ಕಾಲೇಜುಗಳ ರಾಷ್ಟ್ರೀಯ ಸೇವಾ ಯೋಜನೆ ಇವರ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ಸೇವೆಗೈದು ವೆನ್ಲಾಕ್ ಪರಿಸರ ಸ್ವಚ್ಛ ಗೊಳಿಸಲಾಯಿತು.
ಈ ವೇಳೆ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಸರ್ಜನ್ ಡಾ.ರಾಜೇಶ್ವರಿ ದೇವಿ, ಯುವ ವಿದ್ಯಾರ್ಥಿಗಳು ಸ್ವಸ್ಥ ಸಮಾಜಕ್ಕಾಗಿ ಪರಿಸರ ಸ್ವಚ್ಚತೆ ಹಾಗೂ ವೈಯಕ್ತಿಕ ಸ್ವಚ್ಛತೆಗೆ ವಿಶೇಷ ಗಮನಹರಿಸಬೇಕು ಎಂದು ಹೇಳಿದರು.
ಅಮಲ ಭಾರತ ಅಭಿಯಾನದ ಅಧ್ಯಕ್ಷರಾದ ಡಾ.ಜೀವರಾಜ್ ಸೊರಕೆ ಮಾತನಾಡಿ ಭಾರತ ಸೂಪರ್ ಪವರ್ ನತ್ತ ಮುನ್ನಡೆಯುತ್ತಿರುವ ಈ ಸಂದರ್ಭದಲ್ಲಿ ಸ್ವಚ್ಛತೆ ಇಲ್ಲ ಎಂಬ ಕಾರಣಕ್ಕೆ ಅವಮಾನವಾಗಬಾರದು.ಇದೇ ಉದ್ದೇಶದಿಂದ ಅಮ್ಮನವರು ಕಳೆದ 8 ವರ್ಷಗಳಿಂದ ನಮಗೆ ಸ್ವಚ್ಛ ಭಾರತದ ಸೇವೆಗೆ ಸ್ಪೂರ್ತಿ ತುಂಬುತ್ತಿದ್ದಾರೆ.ವಿದ್ಯಾರ್ಥಿಗಳು ಸ್ವಚ್ಛತೆಯ ರಾಯಭಾರಿಗಳಂತೆ ಮಹತ್ವದ ಪಾತ್ರ ವಹಿಸುವಂತೆ ಕರೆಯಿತ್ತರು.
ರೆಡ್ ಕ್ರಾಸ್ ಕಾರ್ಯದರ್ಶಿ,ನಿವೃತ್ತ ಅಪರ ಜಿಲ್ಲಾಧಿಕಾರಿ ಶ್ರೀ ಪ್ರಭಾಕರ್ ಶರ್ಮ ಸೇವಾರ್ಥಿಗಳಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಗೌರವಾಧ್ಯಕ್ಷ ಸಿ ಎ ವಾಮನ್ ಕಾಮತ್,ಸಂಘಟನಾ ಕಾರ್ಯದರ್ಶಿ ಸುರೇಶ್ ಅಮಿನ್, ಮಾಜಿ ಕಾರ್ಪೊರೇಟರ್ ಶ್ರೀ ಪದ್ಮನಾಭ ಅಮಿನ್ ಆಯುಧ್ ಅಧ್ಯಕ್ಷ ಸಿ ಎ ರಾಮನಾಥ್, ಮೇಟ್ರನ್ ಹರಿಣಿ ವೇದಿಕೆಯಲ್ಲಿದ್ದರು. ಸೇವಾ ಸಮಿತಿಯ ಉಪಾಧ್ಯಕ್ಷ ಡಾ.ದೇವದಾಸ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್ ಸ್ಟ್ರೀಟ್, ಬೆಸೆಂಟ್ ಮಹಿಳಾ ಕಾಲೇಜು, ಸೈಂಟ್ ಆಗ್ನೆಸ್ ಕಾಲೇಜು, ಸೈಂಟ್ ಅಲೋಶಿಯಸ್ ಕಾಲೇಜು, ಮಿಲಾಗ್ರಿಸ್ ಕಾಲೇಜು, ಪದುವಾ ಪದವಿ ಪೂರ್ವ ಕಾಲೇಜು,ಕರ್ನಾಟಕ ಪಾಲಿಟೆಕ್ನಿಕ್, ಬಂಟ್ವಾಳ ಕಾರ್ಮೆಲ್ ಕಾಲೇಜು, ಮೊಡಂಕಾಪು ಮೊದಲಾದ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ರೆಡ್ ಕ್ರಾಸ್ ಸೊಸೈಟಿ ಸಹ ಸಂಯೋಜಕ ಪ್ರವೀಣ್,ಅಮಲ ಭಾರತ ಅಭಿಯಾನದ ಸದಸ್ಯರಾದ ಶ್ರೀ ಪ್ರೇಮ ರಾಜ್, ಶ್ರೀ ಮೋಹನ್ ಬಂಗೇರ್,ಚಂದ್ರಹಾಸ್ ಸುವರ್ಣ, ಶ್ರೀ ಅಶೋಕ್,ರವಿ ಉಚ್ಚಿಲ್,ಶಿಫಾಲಿ ಮೊದಲಾದವರು ಭಾಗವಹಿಸಿದ್ದರು.ವೆನ್ಲಾಕ್ ಸಿಬ್ಬಂದಿ ವರ್ಗದವರು ಸೇವಾ ಸಹಕಾರದೊಂದಿಗೆ ಸುಮಾರು 250 ಮಂದಿ ಸೇವೆಗೈದು ಪರಿಸರ ಸ್ವಚ್ಛಗೊಳಿಸಿದರು.
Comments are closed.