ಹೊಸದಿಲ್ಲಿ: ಮಂಗಳವಾರದಂದು ಗುರು ಪೂರ್ಣಿಮೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಪೇಜಾವರ ಶ್ರೀಗಳನ್ನು ಭೇಟಿಯಾದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ನಿನ್ನೆ (ಮಂಗಳವಾರ) ಗುರು ಪೂರ್ಣಿಮಾ, ಅತ್ಯಂತ ಮಹತ್ವದ ದಿನ. ಇಂಥ ದಿನದಂದು ಉಡುಪಿಯ ಪೇಜಾವರ ಶ್ರೀಗಳನ್ನು ಭೇಟಿ ಮಾಡಿ, ಮಾತುಕತೆ ನಡೆಸಿ ಆಶೀರ್ವಾದ ಪಡೆದ ಸುಯೋಗ ಒದಗಿಬಂತು ಎಂದು ಟ್ವೀಟಿಸಿದ್ದಾರೆ. ಅವರ ಮಾತುಗಳನ್ನು ಕೇಳವ ಸುವರ್ಣ ಅವಕಾಶ ಲಭಿಸಿತು. ಗುರುಗಳಿಂದ ಕಲಿಯುವುದು ಸಾಕಷ್ಟಿದೆ ಎಂದು ಮೋದಿ ಟ್ವೀಟರ್‌ನಲ್ಲಿ ತಿಳಿಸಿದ್ದಾರೆ.
ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದರ ಚತುರ್ಥ ಮತ್ತು ಪಂಚಮ ಪರ್ಯಾಯದ ಒಂದು ದಿನದ ಯತಿ ಚರಿತೆಯನ್ನು ಕೃತಿ ಮೂಲಕ ಹೊರತಂದ ಉದಯವಾಣಿ ಪತ್ರಿಕೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೊ ಮೋಹನ್ ಅವರ ಚಿತ್ರ ಕೃತಿ ಎ ಡೇ ವಿತ್ ದಿ ಸೈನ್ಟ್ ಪುಸ್ತಕವನ್ನು ಗುರು ಪೂರ್ಣಿಮಾ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮರ್ಪಿತಗೊಂಡಿತು. ಸಂದರ್ಭದಲ್ಲಿ ಪೇಜಾವರ ಶ್ರೀಗಳು ಹಾಗೂ ಸ್ವಾಮೀಜಿ ಅವರ ಆಪ್ತ ಕಾರ್ಯದರ್ಶಿ ಅನಂತ ಡಿ ಪಿ ಅವರು ಹಸ್ತಾಂತರಿಸಿದರು.
Comments are closed.