ಮಂಗಳೂರು : ಮಾತಾ ಅಮೃತಾನಂದಮಯಿ ಸೇವಾ ಸಮಿತಿಯನ್ನು ಪುನಾರಚನೆ ಮಾಡಲಾಯಿತು. ಮುಂದಿನ 2 ವರ್ಷಗಳ ಅವಧಿಗೆ ಡಾ.ವಸಂತ ಕುಮಾರ್ ಪೆರ್ಲ ಇವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ ಸದ್ಗುರುವಿನ ಈ ಸಂಸ್ಥೆಯಲ್ಲಿ ಸೇವೆಮಾಡಲು ಲಭಿಸಿದ ಅವಕಾಶಗಳು ಹಾಗೂ ಸದ್ಗುರುವಿನ ಅನುಗ್ರಹದಿಂದ ಅನುಷ್ಠಾನ ಗೊಂಡ ವಿಧಾನಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು , ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ ಮಾತನಾಡಿ ಸೇವಾಸಮಿತಿಯ ಕಾರ್ಯಶೈಲಿಯು ತನ್ನ ಶ್ರೇಷ್ಠತೆಯನ್ನು ಹೊಂದಿದ್ದು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿದೆ ಎಂದು ಶ್ಲಾಘಿಸಿದರು.
ಡಾ ಜೀವರಾಜ್ ಸೊರಕೆ ಮಾತನಾಡಿ ಶ್ರೀ ಪ್ರಸಾದ್ ರಾಜ್ ನೇತೃತ್ವದಲ್ಲಿ ಯುವಶಕ್ತಿಗಳ ಸಹಕಾರದೊಂದಿಗೆ ಉತ್ತಮ ಕಾರ್ಯ ಸಾಧನೆ ಮಾಡಲಾಗಿದೆ ಅದೇ ರೀತಿ ಡಾ.ವಸಂತ ಕುಮಾರ್ ಪೆರ್ಲರ ಅವಧಿಯಲ್ಲಿ ಇನ್ನಷ್ಟು ಪರಿಣಾಮಕಾರಿ ಸೇವೆ ಸಲ್ಲಿಸುವಂತಾಗಲಿ ಎಂದು ಶುಭ ಹಾರೈಸಿದರು.
ಯುವ ಘಟಕ “ಅಯುಧ್” ಅಧ್ಯಕ್ಷ ಸಿ ಎ ರಾಮನಾಥ್ ಹಾಗೂ ಕಾರ್ಯದರ್ಶಿ ಶ್ರೀಮತಿ ಮೀನು ಶ್ರೀ ಕುಮಾರ್ ರನ್ನು ಸನ್ಮಾನಿಸ ಲಾಯಿತು.
ಸಂಘಟನಾ ಕಾರ್ಯದರ್ಶಿ ಶ್ರೀ ಸುರೇಶ್ ಅಮಿನ್, ಗೌರವಾಧ್ಯಕ್ಷರಾದ ಶ್ರೀಮತಿ ಶ್ರುತಿ ಸನತ್ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರವಾಧ್ಯಕ್ಷ ಸಿ ಎ ವಾಮನ್ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು.ಡಾ.ದೇವದಾಸ್ ವಂದಿಸಿದರು.ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು, ಅಮ್ಮನವರ ಭಕ್ತರು ಭಾಗವಹಿಸಿದ್ದರು.
Comments are closed.