ಕರಾವಳಿ

ಮಾತಾ ಅಮೃತಾನಂದಮಯಿ ಮಠದಲ್ಲಿ ಗುರುಪೂರ್ಣಿಮಾ ದಿನಾಚರಣೆ /ಸದ್ಗುರುವಿನ ಶ್ರೀರಕ್ಷೆಯೊಂದಿಗೆ ಜೀವನ ಸಾರ್ಥಕ: ಮಂಗಳಾಮೃತ ಚೈತನ್ಯ

Pinterest LinkedIn Tumblr

ಮಂಗಳೂರು : ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ ಗುರುಪೂರ್ಣಿಮಾ ದಿನವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಮಠಾಧಿಪತಿ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯರ ಸಾರಥ್ಯದಲ್ಲಿ ಶ್ರೀ ಗುರುಪಾದುಕಾ ಪೂಜೆ, ಗುರು ಹೋಮ, ಮಹಾ ಮೃತ್ಯುಂಜಯ ಹೋಮ,ಸರ್ವೈಶ್ವರ್ಯ ಪೂಜೆ,ಆರತಿ, ಭಕ್ತರಿಂದ ಕ್ಷೀರಾಭಿಷೇಕ ಮೊದಲಾದ ಕಾರ್ಯಕ್ರಮ ಜರುಗಿತು.

ಅವರು ಈ ಸಂದರ್ಭದಲ್ಲಿ ಆಶೀರ್ವಚನವಿತ್ತು” ಜೀವನದಲ್ಲಿ ಸದ್ಗುರುವಿನ ಪಾತ್ರ ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದೆ ಎಂಬುದು ಗುರುವಿನ ಅನುಗ್ರಹದೊಂದಿಗೆ ಸಾರ್ಥಕ ಜೀವನ ನಡೆಸುತ್ತಿರುವ ಭಕ್ತರ ಅನುಭವಗಳಾಗಿವೆ.ಅಮ್ಮನವರು ಮಕ್ಕಳ ಶ್ರೇಯೋಭಿವೃದ್ಧಿ ಗಾಗಿ ಪ್ರಾಣಶಕ್ತಿಯೊಂದಿಗೆ ಮಂತ್ರದೀಕ್ಷೆ ನೀಡುತ್ತಿದ್ದಾರೆ.ಬ್ರಹ್ಮಸ್ಥಾನಗಳಲ್ಲಿ ಪ್ರಾಣ ಪ್ರತಿಷ್ಠೆ ಮಾಡಿದ್ದಾರೆ.ಅಮ್ಮನವರ ಮಕ್ಕಳ ಸಮಾಜಮುಖಿ ಸೇವೆ ಇಂದು ವಿಶ್ವದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ತಮ್ಮ ಸರ್ವೈಶ್ವರ್ಯ ಪ್ರಾಪ್ತಿಗಾಗಿ ಭಕ್ತರು ಸ್ವತಃ ತಾವೇ ಪೂಜೆ ಗೈದು ಪ್ರಾರ್ಥಿಸಿದರು.ಬ್ರಹ್ಮಚಾರಿ ರತೀಶ್ ಹೋಮ ಹಾಗೂ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಈ ವೇಳೆ ಸೇವಾ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಪ್ರಸಾದ್ ರಾಜ್ ಕಾಂಚನ್, ಸೇವಾ ಸಮಿತಿಗೆ ಅಧ್ಯಕ್ಷರಾಗಿ ನೂತನವಾಗಿ ಅಯ್ಕೆಯಾದ ಡಾ.ವಸಂತ ಕುಮಾರ್ ಪೆರ್ಲ, ಸಂಘಟನಾ ಕಾರ್ಯದರ್ಶಿ ಶ್ರೀ ಸುರೇಶ್ ಅಮಿನ್, ಗೌರವಾಧ್ಯಕ್ಷರಾದ ಶ್ರೀಮತಿ ಶ್ರುತಿ ಸನತ್ ಹೆಗ್ಡೆ, ಗೌರವಾಧ್ಯಕ್ಷ ಸಿ ಎ ವಾಮನ್ ಕಾಮತ್, ಡಾ.ದೇವದಾಸ್ ಉಪಸ್ಥಿತರಿದ್ದರು.

ಗುರುಪೂರ್ಣಿಮಾ ಪೂಜಾ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು, ಅಮ್ಮನವರ ಭಕ್ತರು ಭಾಗವಹಿಸಿದ್ದರು.

Comments are closed.