ಮಂಗಳೂರು, ಜುಲೈ.22: ನಗರದಲ್ಲಿ ಡೆಂಗ್ಯು ಹಾವಳಿ ಮುಂದುವರಿದಿದ್ದು, ಮಾರಣಾಂತಿಕ ಡೆಂಗ್ಯು ಜ್ವರಕ್ಕೆ ಖಾಸಗಿ ವಾಹಿನಿಯ ಕ್ಯಾಮರಾಮ್ಯಾನ್ ಒಬ್ಬರು ಬಲಿಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಖಾಸಗಿ ಸುದ್ದಿವಾಹಿನಿ ಬಿಟಿವಿ ಕ್ಯಾಮರಾಮ್ಯಾನ್ ನಗರದ ನೀರುಮಾರ್ಗ ಸಮೀಪದ ಪಡು ನಿವಾಸಿ ನಾಗೇಶ್ ಪಡು(35) ಡೆಂಗ್ಯುನಿಂದ ರವಿವಾರ ಮಧ್ಯರಾತ್ರಿ ಮೃತಪಟ್ಟಿದ್ದಾರೆ.
ಕಳೆದ ಕೆಲವು ದಿನಗಳಿಂದ ಶಂಕಿತ ಡೆಂಗ್ಯು ಜ್ವರದಿಂದ ಬಳಲುತ್ತಿದ್ದ ಅವರು ಜ್ವರ ಉಲ್ಬಣಗೊಂಡು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕಳೆದ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ನಾಗೇಶ್ ಅವರು ಮೃತಪಟ್ಟಿದ್ದಾರೆ
ಮೃತರು ಪತ್ನಿ, ಓರ್ವ ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Comments are closed.