ಕರಾವಳಿ

ಮಂಗಳೂರಿನ ಜನನಿಬಿಡ ಪ್ರದೇಶ ಬಂದರ್ ಸಮೀಪ ಮಟ್ಕಾ ಆಡುತ್ತಿದ್ದ 10 ಮಂದಿ ಆರೋಪಿಗಳ ಬಂಧನ ; ರೂ.29,500 ನಗದು ವಶ

Pinterest LinkedIn Tumblr

ಮಂಗಳೂರು, ಜುಲೈ .22: ನಗರದ ಪ್ರಮುಖ ಸ್ಥಳವೊಂದರಲ್ಲಿ ಮಟ್ಕಾ ಆಡುತ್ತಿದ್ದ 10 ಮಂದಿ ಆರೋಪಿಗಳನ್ನು ಸೋಮವಾರ ರಾತ್ರಿ ಮಂಗಳೂರು ಉತ್ತರ (ಬಂದರ್) ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಯಶವಂತ್, ಮುಹಮ್ಮದ್ ರಫೀಕ್, ಬಸವರಾಜು, ಎಂ.ಸತೀಶ್ ಕಾಮತ್, ಹರೀಶ್‌ಚಂದ್ರ, ಶಂಕರ್, ಅನ್ವರ್ ಹುಸೈನ್, ಅಬ್ದುಲ್ ರಹೀಂ, ರಾಜೇಶ್ ಮಲ್ಯ, ಎಂ.ರಫೀಕ್ ಎಂದು ಗುರುತಿಸಲಾಗಿದೆ.

ಆರೋಪಿಗಳು ನಗರದ ಜನನಿಬಿಡ ಪ್ರದೇಶವಾದ ಬಂದರ್ ಸಮೀಪದ ಕಾಂಪ್ಲೆಕ್ಸ್‌ವೊಂದರ ಬಳಿ ಮಟ್ಕಾ ಆಡುತ್ತಿದ್ದ ಸಂದರ್ಭ ಖಚಿತ ಮಾಹಿತಿ ಮೇರೆಗೆ ಬಂದರ್ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

ಈ ವೇಳೆ ಬಂಧಿತ ಆರೋಪಿಗಳಿಂದ ನಗದು ಹಣ ರೂ.29,500 ವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.