ಉಡುಪಿ: ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ & ಮಕ್ಕಳ ಆಸ್ಪತ್ರೆಗೆ ಕಳೆದೆರಡು ತಿಂಗಳುಗಳ ಹಿಂದೆ ಪೂರೈಸಲಾದ ದಿಸ್ಟಿಲ್ಡ್ ವಾಟರ್’ನಲ್ಲಿ (ಶುದ್ಧ ನೀರಿನ ಕ್ಯಾನ್) ಆಲ್ಕೋಹಾಲ್ ಪತ್ತೆಯಾದ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಸಾಂದರ್ಭಿಕ ಚಿತ್ರ)
ಮೇ.13 ರಂದು ಅಜಿತ್ ಎಂಬುವವರು ನೀರಿನ ಕ್ಯಾನ್ ಡೆಲಿವರಿ ಮಾಡಿದ್ದು ಅವುಗಳಲ್ಲಿ 3 ಕ್ಯಾನ್ ಗಳಿಗೆ ಲೇಬಲ್ ಇರಲಿಲ್ಲ. ಆದ್ದರಿಂದ ಆ ಕ್ಯಾನುಗಳನ್ನು ಹಿಂದಕ್ಕೆ ಕಳುಹಿಸಿದ್ದು, ಉಳಿದ 3 ಕ್ಯಾನ್ ಗಳನ್ನು ಸ್ಟೋರ್ ಎಕ್ಸಿಕ್ಯೂಟಿವ್ ಗೋಕುಲ ಸ್ವೀಕರಿಸಿದ್ದರು. ಇವುಗಳಲ್ಲಿ 2 ಕ್ಯಾನ್ ಗಳು 2019 ರಲ್ಲಿ ತಯಾರಾಗಿದ್ದು, 1 ಕ್ಯಾನ್ ಬ್ಯಾಚ್ ನಂಬ್ರ 21/2017 ಇರುತ್ತದೆ. ಜೂ.04 ರಂದು ಹ್ಯೂಮಿಡಿಫೈಯರ್ ಗಳಿಗೆ ಬ್ಯಾಚ್ ನಂಬ್ರ 21/2017 ಇದ್ದ ಕ್ಯಾನ್ ನಿಂದ ಶುದ್ಧೀಕರಿಸಿದ ನೀರು ಭರ್ತಿ ಮಾಡಿದ್ದರು.
ಅಂದು ಮಧ್ಯಾಹ್ನ ಆಸ್ಪತ್ರೆಯ ನರ್ಸಿಂಗ್ ಸೂಪರ್ ವೈಸರ್ ಸಂದೇಶ ಮತ್ತು ನರ್ಸ ಡ್ರಾಯನ್ ಎಂಬುವವರು ಸ್ಟ್ರೇಚರ್ ಗಳನ್ನು ಕನ್ಸಲ್ಟೇಷನ್ ಕೋಣೆಯ ಹತ್ತಿರ ತಂದು ಸಿಲಿಂಡರ್ ಅಳವಡಿಸಲು ತಯಾರು ಮಾಡಿದಾಗ ಕೆಲವು ಹನಿ ಕೈಗೆ ಬಿದ್ದಾಗ ಹಿಮದ ಅನುಭವ ಆಗಿದ್ದು, ಹ್ಯೂಮಿಡಿಫೈಯರ್ ನ್ನು ಮೂಸಿ ನೋಡಿದಾಗ ಅದರಲ್ಲಿ ಸ್ಪೀರಿಟ್ ವಾಸನೆ ಬಂದಿತ್ತು. ಅದನ್ನು ಪರೀಕ್ಷೆಯ ಬಗ್ಗೆ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದಾಗ ಅದರಲ್ಲಿ 53.43% ಅಲ್ಕೋಹಾಲ್ ಇರುವುದು ಕಂಡು ಬಂದಿರುತ್ತದೆ.
ಯಾರೋ ವ್ಯಕ್ತಿಗಳು ಅಧ್ಯಕ್ಷ ಮತ್ತು ಆಸ್ಪತ್ರೆಯ ಗೌರವ ಮತ್ತು ಖ್ಯಾತಿಯನ್ನು ನಾಶಮಾಡುವ ದುರುದ್ದೇಶದಿಂದ ಪ್ರಾಣಹಾನಿ ಅಥವಾ ರೋಗಿಗಳಿಗೆ ಹಾನಿ ಉಂಟು ಮಾಡುವ ಪ್ರಯತ್ನ ಮಾಡಲು ಈ ಕೃತ್ಯವನ್ನು ಎಸಗಿದ ಬಗ್ಗೆ ಆಸ್ಪತ್ರೆ ಮ್ಯಾನೆಜರ್ ಪ್ರಶಾಂತ್ ಮಲ್ಯ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.