ಕರಾವಳಿ

ಸುಪರ್ ಹಿಟ್ ಹಾಡು ‘ಮೋಕೆದ ಸಿಂಗಾರಿ.. ‘ಖ್ಯಾತಿಯ ಹಿರಿಯ ತುಳು ಸಾಹಿತಿ ಸೀತಾರಾಮ್ ಕುಲಾಲ್ ನಿಧನ

Pinterest LinkedIn Tumblr

ಮಂಗಳೂರು, ಜುಲೈ.28: ತುಳುವಿನ ಸುಪರ್ ಹಿಟ್ ಹಾಡು ‘ಮೋಕೆದ ಸಿಂಗಾರಿ.. ‘ಖ್ಯಾತಿಯ ಹಿರಿಯ ತುಳು ಸಾಹಿತಿ, ತುಳು ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಎಂ.ಕೆ. ಸೀತಾರಾಮ ಕುಲಾಲ್ ಅವರು ರವಿವಾರ ವಿಧಿವಶರಾಗಿದ್ದಾರೆ.

ಮಂಗಳೂರಿನ ಬಿಜೈಯಲ್ಲಿ ನೆಲೆಯೂರಿದ್ದ ಸೀತಾರಾಮ್ ಕುಲಾಲ್ ಮೊದಲು ‘ದಾಸಿಪುತ್ರ’ ಎನ್ನುವ ಕನ್ನಡ ನಾಟಕದ ಮೂಲಕ ರಂಗಭೂಮಿ ಪ್ರವೇಶಿಸಿದ್ದರು.ಸೀತಾರಾಮ ಕುಲಾಲ್ ಸುಮಾರು 11ಕ್ಕೂ ಹೆಚ್ಚು ತುಳುಚಿತ್ರಗಳಿಗೆ ಹಾಗೂ 25ಕ್ಕೂ ಮಿಕ್ಕಿ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ.

ಕಲಾವಿದರಾಗಿ ಕಳೆದ 45 ವರ್ಷಗಳಿಂದ ಕಲಾಸೇವೆ ಮಾಡಿದ ಇವರು ತಾವು ರಚಿಸಿರುವ ಯಾವುದೇ ಕೃತಿಗಾಗಲಿ, ನಟನೆ, ನಾಟಕ ಹಾಗೂ ಹಾಡುಗಳಿಗಾಗಲಿ ಯಾವುದೇ ರೀತಿಯ ಸಂಭಾವನೆ ಪಡೆದುಕೊಳ್ಳುತ್ತಿರಲಿಲ್ಲ. ಈ ರೀತಿ ಸಂಭಾವನೆಯನ್ನು ಪಡೆದುಕೊಳ್ಳದೆ ಸೇವೆ ಸಲ್ಲಿಸಿರುವುದು ಇವರ ಕಲಾಪ್ರೇಮಕ್ಕೆ ಸಾಕ್ಷಿಯಾಗಿದೆ.

ಮೋಕೆದ ಸಿಂಗಾರಿ ಉಂತುದೆ ವಯ್ಯಾರಿ ಯಾನ್ ಮೂಲೆ ಕಾತೊಂದುಲ್ಲೆ ಮರತೇ ಪೋಪನಾ, ಪಕ್ಕಿಲು ಮೂಜಿ ಒಂಜೇ ಗೂಡುಡು ಬದ್ಕೊಂದುಂಡುಗೆ, ಪರಶುರಾಮನ ಕೊಡಲಿಗ್ ಪುಟ್ಟಿನ ತುಳುನಾಡ್,ಬ್ರಹ್ಮನ ಬರವು ಮಾಜಂದೆ ಪೊಂಡಾ/ ಅಪ್ಪೆ ಮನಸ್ ಬಂಗಾರ ಅಮ್ಮ ತೆನಸು ಸಿಂಗಾರ, ಡಿಂಗಿರಿ ಮಾಮ ಡಿಂಗಿರಿ ಮಾಮ ಪೊಡಿದ್ ಪಾರಡಾ. ಹೀಗೆ ಸುಮಾರು 11 ತುಳು ಚಿತ್ರಗಳಿಗೆ 25ಕ್ಕೂ ಮಿಕ್ಕಿ ಸೂಪರ್ ಹಿಟ್ ಹಾಡುಗಳನ್ನು ನೀಡಿದ ಹಿರಿಯ ತುಳು ಸಾಹಿತಿ ಎಂ.ಕೆ.ಸೀತಾರಾಮ್ ಕುಲಾಲ್ ಇಂದು ಕೂಡಾ ತುಳುನಾಡಿನ ಜನರ ನೆನಪಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.

ಇವರಿಗೆ ‘ರಂಗಕಲಾಭೂಷಣ’ ‘ತುಳು ರತ್ನ’ ‘ಪೆರ್‍ಮೆದ ತುಳುವೆ’ ‘ತುಳುಸಿರಿ’ ‘ತುಳು ಸಾಹಿತ್ಯ ರತ್ನಾಕರ’ ‘ತೌಳವ ಪ್ರಶಸ್ತಿ’ ಇತ್ಯಾದಿ ಹಲವಾರು ಪ್ರಶಸ್ತಿ ಸಂದಿದ್ದು, ಇದರೊಂದಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2014ರ ಸಾಲಿನ ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ.ಇವರ ಸಾವಿನಿಂದ ತುಳು ಚಿತ್ರರಂಗ ಹಾಗೂ ತುಳು ಸಾಹಿತ್ಯ ಲೋಕಕ್ಕೆ ಅಪಾರ ನಷ್ಟ ಉಂಟಾಗಿದೆ.

Comments are closed.