ಕರಾವಳಿ

ನೆರೆ ಪೀಡಿತರ ನೆರವಿಗೆ ಕೈ ಜೋಡಿಸುವಂತೆ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಮನವಿ

Pinterest LinkedIn Tumblr

ಮಂಗಳೂರು : ವಿಪರೀತ ಮಳೆ ಮತ್ತು ನೆರೆಯಿಂದ ದಕ್ಷಿಣ ಕನ್ನಡ ಜಿಲ್ಲೆಯನ್ನು ಸೇರಿಸಿ ಕರ್ನಾಟಕ ರಾಜ್ಯದ ಬಹುಭಾಗ ಜಲಾವೃತವಾಗಿರುವುದರಿಂದ ಲಕ್ಷಾಂತರ ಜನರು ನಿತ್ಯಸಂಕಟವನ್ನು ಅನುಭವಿಸಿದ್ದಾರೆ. ಅವರ ನೆರವಿಗೆ ಧಾವಿಸಲು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹಾಗೂ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಮಾನವೀಯ ನೆಲೆಯಲ್ಲಿ ತಾವು ಸಹಾಯಹಸ್ತ ಚಾಚಬೇಕಾಗಿ ಶಾಸಕ ವೇದವ್ಯಾಸ ಕಾಮತ್ ವಿನಂತಿಸಿದ್ದಾರೆ.

ನೀವು ವಸ್ತುರೂಪದಲ್ಲಿ ಹಾಸಿಗೆ (ಚಾಪೆ/ ಪ್ಲಾಸ್ಟಿಕ್ ಶೀಟ್), ಹೊದಿಕೆ (ರಗ್), ಸ್ತ್ರೀ/ಪುರುಷ/ಮಕ್ಕಳ ಒಳಉಡುಪು, ಸ್ಯಾನಿಟರಿ ಪ್ಯಾಡ್, ಪ್ಲಾಸ್ಟಿಕ್ ಟರ್ಪಾಲಿನ್, ಟವೆಲ್, ಸೀರೆ, ಪ್ಯಾಂಟ್ ಮತ್ತು ಶರ್ಟ್, ಮಕ್ಕಳ ಉಡುಪು, ಬೆಚ್ಚಗಿನ ಉಡುಪು, ಆಹಾರ ಪದಾರ್ಥಗಳು ಮತ್ತು ಕುಡಿಯುವ ನೀರು ಕೊಡಬಹುದಾಗಿದೆ. ನೀವು ವಸ್ತುಗಳನ್ನು ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಕಲಾಕುಂಜ ಹಾಲ್ ರಸ್ತೆಯಲ್ಲಿರುವ ಅಟಲ್ ಸೇವಾ ಕೇಂದ್ರದಲ್ಲಿ ತಂದು ನೀಡಬಹುದು.

ಒಂದು ವೇಳೆ ನೀವು ಹಣವನ್ನು ನೀಡುವುದಾಗಿದ್ದರೆ ಮುಖ್ಯಮಂತ್ರಿ ಪರಿಹಾರ ನಿಧಿಯ ಹೆಸರಿನಲ್ಲಿ ಚೆಕ್ ನೀಡಬಹುದು. ಅದನ್ನು ಕೂಡ ಸ್ವೀಕರಿಸಲಾಗುವುದು. ವಸ್ತುರೂಪದಲ್ಲಿ ನೀವು ನೀಡುವ ಸಹಾಯ ಅಥವಾ ಚೆಕ್ ರೂಪದಲ್ಲಿ ನೀಡುವ ಆರ್ಥಿಕ ಸಹಾಯವನ್ನು ಗೌರವಪೂರ್ವಕವಾಗಿ ಸ್ವೀಕರಿಸಿ ರಸೀದಿಯನ್ನು ನೀಡಲಾಗುವುದು. ನಿಮ್ಮ ಎಲ್ಲಾ ಸಹಾಯ ಯೋಗ್ಯವಾಗಿ ಸಂತ್ರಸ್ತರಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುವುದು.

ಈಗಾಗಲೇ ಈ ಸತ್ಕಾರ್ಯಕ್ಕೆ ಆಲ್ ಟೆಂಪಲ್ ಎಸೋಸಿಯೇಶನ್ ವತಿಯಿಂದ ಒಂದು ಲಾರಿ ಅಕ್ಕಿಯನ್ನು ನೀಡಲಾಗುವುದು ಎಂದು ಎಸೋಸಿಯೇಶನ್ ಅಧ್ಯಕ್ಷ ಸಿಎ ಜಗನ್ನಾಥ ಕಾಮತ್ ಹೇಳಿದ್ದಾರೆ. ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ 50 ಸಾವಿರ, ವಿವೇಕ್ ಟ್ರೇಡರ್ಸ್ ನ ಆಯುರ್ ವಿವೇಕ್ ವತಿಯಿಂದ ಸಂಸ್ಥೆಯ ಮಾಲೀಕ ಮಂಗಲ್ಪಾಡಿ ನರೇಶ್ ಶೆಣೈಯವರು 50 ಸಾವಿರ ಮೌಲ್ಯದ ವಸ್ತುಗಳನ್ನು ನೀಡುವುದಾಗಿ ತಿಳಿಸಿದ್ದಾರೆ.

ನಾಗರಿಕರು ಇಂತಹ ಶ್ರೇಷ್ಟ ಕಾರ್ಯದಲ್ಲಿ ಕೈ ಜೋಡಿಸಬೇಕಾಗಿ ಸಹೃದಯಿಗಳ ಕಳಕಳಿಯ ವಿನಂತಿ. ಶಾಸಕ ಕಾಮತ್ ಅವರ ಕಚೇರಿ ಸಹಾಯಕ ಸತೀಶ್ ಅವರನ್ನು ಈ ವಿಷಯದಲ್ಲಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ- 9945263233.

Comments are closed.