ಮಂಗಳೂರು : ದಕ್ಷಿಣಕನ್ನಡಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತುಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸ್ವಾಂತಂತ್ರ್ಯೋತ್ಸವ ಕವಿಗೋಷ್ಠಿ-ಸಾಂಸ್ಕೃತಿಕ ಸಂಭ್ರಮಮಂಗಳೂರು ಪುರಭವನದಲ್ಲಿ ಆಗಸ್ಟ್15 ಗುರುವಾರ ದಂದು 73ನೇ ಸ್ವಾಂತ್ರಂತ್ರೋತ್ಸವದ ಪ್ರಯುಕ್ತ ಮಂಗಳೂರು ಪುರಭವನದಲ್ಲಿಅಪರಾಹ್ನ 3ರಿಂದ ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು, ಸಾರ್ವಜನಿಕ ಶಿಕ್ಷಣ ಇಲಾಖೆ , ಕನ್ನಡ ಮತ್ತು ಸಂಸ್ಕೃತಿಇಲಾಖೆಯ ವತಿಯಿಂದ, ಸ್ವಾತಂತ್ರೋತ್ಸವ ಸಂದೇಶ ಕವಿಗೋಷ್ಠಿ ಗೌರವ ಪ್ರದಾನ-ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ.
ಕಾರ್ಯಕ್ರಮವನ್ನುಡಾ. ವಸಂತಕುಮಾರ ಪೆರ್ಲಉದ್ಘಾಟಿಸಲಿದ್ದು. ಜಿಲ್ಲಾಕನ್ನಡ ಸಾಹಿತ್ಯಅಧ್ಯಕ್ಷಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಲಿರುವರು.
ಜಿಲ್ಲಾ ಪೊಲೀಸ್‌ಇಲಾಖೆಯ ವತಿಯಿಂದ ಪೊಲೀಸ್ ಬ್ಯಾಂಡ್‌ನೊಂದಿಗೆಕಾರ್ಯಕ್ರಮ ಪ್ರಾರಂಭಗೊಳ್ಳಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದಡಾ. ವಸಂತ್‌ಕುಮಾರ್‌ಪೆರ್ಲರವರಅಧ್ಯಕ್ಷತೆಯಲ್ಲಿಕವಿಗೋಷ್ಠಿ ನಡೆಯಲಿದೆ.
ಭಾಗವಹಿಸುವ ಕವಿಗಳು ಅಕ್ಷಯಆರ್. ಶೆಟ್ಟಿ, ಮಂಗಳೂರು, ಸೋಮನಿಂಗ ಹೆಚ್. ಹಿಪ್ಪರಗಿ, ನಾಗರಾಜ್‌ಖಾರ್ವಿಕಲ್ಮಂಜಿ, ಜಯಶ್ರೀ ಬಿ. ಕದ್ರಿ , ಮಂಗಳೂರು, ಮರಿಯನ್ ಪಿಯುಸ್ ಡಿ’ಸೋಜ, ಸುರತ್ಕಲ್, ರಾಜೇಶ್ ಶೆಟ್ಟಿದೋಟ, ಮಂಗಳೂರು, ಕೆ.ಪಿ. ಅಬ್ದುಲ್ ಖಾದರ್ ಕುತ್ತೆತ್ತೂರು.
ಆ ಬಳಿಕ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಕೆನರಾಅಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಉರ್ವ ಇಲ್ಲಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕವೈವಿಧ್ಯಮಯಕಾರ್ಯಕ್ರಮ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ವತಿಯಿಂದ ಸಾಂಸ್ಕೃತಿ ಕಕಾರ್ಯಕ್ರಮ ಜರಗಲಿರುವುದು.
ಕನ್ನಡ ಮತ್ತು ಸಂಸ್ಕೃತಿಇಲಾಖೆಯ ವತಿಯಿಂದ ಪುತ್ತೂರುಜಗದೀಶಆಚಾರ್ಯ ಮತ್ತು ಬಳಗ ಇವರಿಂದದೇಶ ಭಕ್ತಿಗೀತಾ ಗಾನ ಸಂಭ್ರಮಕಾರ್ಯಕ್ರಮಜರಗಲಿವೆ ಎಂದುದಕ್ಷಿಣಕನ್ನಡಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನಅಧ್ಯಕ್ಷಎಸ್. ಪ್ರದೀಪಕುಮಾರಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿರುವರು.
Comments are closed.