ಕರಾವಳಿ

ಕೊಲ್ಲೂರು ಮೂಕಾಂಬಿಕಾ ದೇವಳದಲ್ಲಿದ್ದ ‘ಇಂದಿರಾ’ ಆನೆ ಇನ್ನಿಲ್ಲ: ಶೋಕದಲ್ಲಿ ಸ್ಥಳೀಯರು

Pinterest LinkedIn Tumblr

ಕುಂದಾಪುರ: ಇತಿಹಾಸ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕ ದೇವಳದ ಹೆಣ್ಣಾನೆ ‘ಇಂದಿರಾ’ ತೀವ್ರ ಜ್ವರರದಿಂದ ಬಳಲಿ ಮಂಗಳವಾರ ರಾತ್ರಿ ಇಹಲೋಕ ತ್ಯಜಿಸಿದ ಘಟನೆ ವರದಿಯಾಗಿದೆ.

ಸುಮಾರು 62 ವರ್ಷ ಪ್ರಾಯದ ಇಂದಿರಾ ಎನ್ನುವ ಆನೆಯನ್ನು ಬಾಣೆಹೊನ್ನೂರಿನ ಕ್ರಷಿಕ ಹಾಗೂ ಉದ್ಯಮಿ ಮಧು ಎನ್ನುವರು ಎರಡೂವರೆ ದಶಕದ ಹಿಂದೆ ದೇವಳಕ್ಕೆ ದಾನ ಕೊಟ್ಟಿದ್ದು ಐಯಣ್ಣ ಯಾನೆ ಬಾಬಣ್ಣ ಎನ್ನುವರು ಇಂದಿರಾಳಿಗೆ ಮಾವುತರಾಗಿದ್ದರು.

ಸುಮಾರು ಎರಡು ದಶಕಗಳಿಂದ ಕೊಲ್ಲೂರಿನಲ್ಲಿದ್ದ ಇಂದಿರಾ ಹೆಸರಿನ ಆನೆ ಬರುವ ಭಕ್ತಾಧಿಗಳ ಅಚ್ಚುಮೆಚ್ಚಿನ ಆನೆಯಾಗಿತ್ತು. ಭಕ್ತರು ನೀಡುವ ಕಾಣಿಕೆ, ಬಾಳೆ ಹಣ್ಣು ಸ್ವೀಕರಿಸಿ ಅವರಿಗೆ ಸೋಡಿಲೆತ್ತಿ ಆಶೀರ್ವಾದ ಮಾಡಿದ ಇಂದಿರಾ ಅಗಲಿಕೆ ಎಲ್ಲರಲ್ಲೂ ದುಃಖಕ್ಕೆ ಕಾರಣವಾಗಿದೆ. ಇಂದಿರಾ ಇಂದಿಗೂ ಯಾವುದೇ ಕಿರಿಕ್ ಮಾಡಿದ ಉದಾಹರಣೆಯೂ ಇಲ್ಲ. ತೀವ್ರ ಜ್ವರದಿಂದ ಬಳಲುತ್ತಿದ್ದ ಇಂದಿರಾ ಸತತವಾದ ಚಿಕಿತ್ಸೆಗೂ ಸ್ಪಂಧಿಸದೇ ಬಾರದ ಲೋಕಕ್ಕೆ ಪಯಣಿಸಿದೆ.

ಬುಧವಾರ ಕೊಲ್ಲೂರು ಬಂದ್
ಭಕ್ತಾಧಿಗಳಿಗೆ ಮಾತ್ರವಲ್ಲದೇ ಊರಿನವರಿಗೆ ಪ್ರೀತಿ ಪಾತ್ರವಾಗಿದ್ದ ಇಂದಿರಾ ಸಾವಿಗೆ ಎಲ್ಲೆಡೆ ಶೋಕ ವ್ಯಕ್ತವಾಗಿದ್ದು ಆ.14 ಬುಧವಾರ ಕೊಲ್ಲೂರಿನಲ್ಲಿ ಸ್ವಯಂಪ್ರೇರಿತ ಬಂದ್ ಮಾಡಿ ಆನೆಯ ಸಾವಿಗೆ ಶೋಕಾಚರಣೆ ನಡೆಸಲಿದ್ದಾರೆ ಎಂಬ ಮಾಹಿತಿಯಿದೆ.

(ವರದಿ-ಯೋಗೀಶ್ ಕುಂಭಾಸಿ)

Comments are closed.