ಕರಾವಳಿ

ನಂತೂರ್ ಸರ್ಕಲ್ ಸಮೀಪ ಚಲಿಸುತ್ತಿದ್ದ ಶಾಲಾ ಬಸ್ಸ್ ಮೇಲೆ ಉರುಳಿ ಬಿದ್ದ ಮರ

Pinterest LinkedIn Tumblr

ಮಂಗಳೂರು, ಆಗಸ್ಟ್,14: ರಸ್ತೆ ಪಕ್ಕದ ಎತ್ತರದ ಪ್ರದೇಶದ ಮಣ್ಣು ಕುಸಿದ ಪರಿಣಾಮ ಬೃಹತ್ ಗಾತ್ರದ ಮರವೊಂದು ಬುಡ ಸಮೇತಾ ಉರುಳಿ ರಸ್ತೆಯಲ್ಲಿ ಸಾಗುತ್ತಿದ್ದ ಶಾಲಾ ವಾಹನ ಹಾಗೂ ಬುಲೆಟ್ ಟ್ಯಾಂಕರ್ ಮೇಲೆ ಬಿದ್ದ ಘಟನೆ ಇಂದು ಬೆಳಗ್ಗೆ ನಂತೂರು ಸರ್ಕಲ್ ಬಳಿ ಸಂಭವಿಸಿದೆ.

ಬಸ್ಸಿನಲ್ಲಿ 17 ಶಾಲಾ ಮಕ್ಕಳು ಪ್ರಯಾಣಿಸುತ್ತಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಅಗಮಿಸಿದ ಪೊಲೀಸರು ಮಕ್ಕಳನ್ನು ಸುರಕ್ಷಿತವಾಗಿ ಬಸ್ಸಿನಿಂದ ತೆರವುಗೊಳಿಸಿದ್ದಾರೆ.

ಘಟನೆ ಬಗ್ಗೆ ಕೂಡಲೇ ಪೊಲೀಸರು ಸಂಬಂಧಪಟ್ಟ ಶಾಲೆಗೆ ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಶಾಲೆಯ ಪ್ರಾಂಶುಪಾಲರು ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್‌.ಹರ್ಷ ಸೇರಿದಂತೆ ಡಿಸಿಪಿ ಮತ್ತು ಇತರ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದಾರೆ.

ಬಸ್ ನಲ್ಲಿ ಸುಮಾರು 17 ಮಂದಿ ಶಾಲಾ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ಮರ ಬಸ್ಸಿನ ಮೇಲ್ಭಾಗಕ್ಕೆ ಬಿದ್ದ ತಕ್ಷಣ ಬಸ್ ನಿಲ್ಲಿಸಲಾಗಿದೆ. ಇದರಿಂದ ಯಾವೂದೇ ಹೆಚ್ಚಿನ ಅನಾಹುತ ಸಂಭವಿಸಲಿಲ್ಲ. ಎಲ್ಲಾ ಮಕ್ಕಳು ಸುರಕ್ಷಿತವಾಗಿದ್ದಾರೆ. ಘಟನೆ ಬಗ್ಗೆ ಶಾಲಾ ಮುಖ್ಯಸ್ಥರ ಜೊತೆ ಮಾತನಾಡಲಾಗಿದೆ. ಯಾವೂದೇ ಭಯ ಬೀಳುವ ಅಗತ್ಯವಿಲ್ಲ ಎಂದು ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್‌.ಹರ್ಷ ಅವರು ತಿಳಿಸಿದ್ದಾರೆ.

Comments are closed.