ಕರಾವಳಿ

ಧ್ವಜಪುರ ಖ್ಯಾತಿಯ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರನ ಸನ್ನಿಧಿಗೆ ಸುಳ್ಯದಿಂದ ಬರುವ ಧ್ವಜ ಮರ

Pinterest LinkedIn Tumblr

ಕುಂದಾಪುರ: ತಾಲೂಕಿನ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ನೂತನ ಧ್ವಜ ಮರವನ್ನು ಸುಳ್ಯ ತಾಲೂಕಿನ ಕುಕ್ಕಜಡ್ಕದಿಂದ ಕೋಟೇಶ್ವರಕ್ಕೆ ತರುವ ಕಾರ್ಯ ನಡೆಯುತ್ತಿದೆ. ಸೋಮವಾರ ಶುಭ ಮುಹೂರ್ತದಲ್ಲಿ ಅಂದಾಜು 87 ಅಡಿ ಉದ್ದದ ಧ್ವಜ ಮರವನ್ನು 2 ದೊಡ್ಡ ಕ್ರೇನ್ ಮುಖಾಂತರ ಸ್ಥಳಾಂತರಿಸಿ 40 ಅಡಿ ಉದ್ದದ ಟ್ರಾಲಿಗೆ ಲೋಡ್ ಮಾಡಲಾಯಿತು.

ಈ ಸಂದರ್ಭ ಶ್ರೀ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಕೃಷ್ಣದೇವ ಕಾರಂತ, ಪ್ರಸನ್ನ ತಂತ್ರಿಯವರು ಉಸ್ತುವಾರಿ ವಹಿಸಿದ್ದರು. ಮುಖಂಡರಾದ ಬಿ. ಹೆರಿಯಣ್ಣ, ಮಲ್ಯಾಡಿ ಶಿವರಾಮ ಶೆಟ್ಟಿ, ಅಶೋಕ್ ಪೂಜಾರಿ ಬೀಜಾಡಿ, ಖ್ಯಾತ ಶಿಲ್ಪಿ ರಾಜಗೋಪಾಲ ಆಚಾರ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯರು ಮೊದಲಾದವರಿದ್ದರು.

ಬುಧವಾರ ಮೆರವಣಿಗೆ….
ಬುಧವಾರ ಬೆಳಿಗ್ಗೆ ತೆಕ್ಕಟ್ಟೆಯಿಂದ ಗ್ರಾಮಸ್ತರು ದೇವಸ್ಥಾನದ ಆಡಳಿತ ಕಮಿಟಿಯವರು ಹಾಗೂ ಭಕ್ತಾದಿಗಳ ಒಗ್ಗೂಡುವಿಕೆಯಲ್ಲಿ ಕೋಟೇಶ್ವರಕ್ಕೆ ಧ್ವಜಮರವನ್ನು ಮೆರವಣಿಗೆ ಮೂಲಕ ತರಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.