ಮಂಗಳೂರು, ಆಗಸ್ಟ್ 26: ಎನ್‌ಸಿಐಬಿ ನಿರ್ದೇಶಕ (NCIB Director) ಎಂದು ಹೇಳಿಕೊಂಡು ದರೋಡೆಗೆ ಸಂಚು ರೂಪಿಸಿ, ಆಗಸ್ಟ್ 16ರಂದು ಮಂಗಳೂರು ನಗರದ ಕದ್ರಿ ( ಪಶ್ಚಿಮ) ಪೊಲೀಸ್ ಠಾಣಾ ಪೊಲೀಸರಿಂದ ನಗರದ ಪಂಪ್‌ವೆಲ್ ಸಮೀಪದ ಲಾಡ್ಜ್‌ನಲ್ಲಿ ಬಂಧಿಸಲ್ಪಟ್ಟ ಕೇರಳ ಮೂಲದ ಕುಖ್ಯಾತ ವಂಚಕ ಸ್ಯಾಮ್‌ಪೀಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವನೊಂದಿಗೆ ವ್ಯವರಿಸುತ್ತಿದ್ದ ಮತ್ತು NCIB ತನಿಖಾಧಿಕಾರಿಗಳೆಂದು ಪೋಸ್ ಕೊಟ್ಟು ಜನರಿಗೆ ವಂಚಿಸುತಿದ್ದ ಮತ್ತೆ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬೆಂಗಳೂರು ನಾಗರಬಾವಿ ನಿವಾಸಿಗಳಾದ ನಾಗರಾಜ. ಎನ್.ಎಸ್ (39) ಹಾಗೂ ರಾಘವೇಂದ್ರ (31) ಎಂದು ಗುರುತಿಸಲಾಗಿದೆ.
ಆರೋಪಿಗಳ ಬಳಿಯಿದ್ದ NCIB ಬಾವುಟ, ಬೋರ್ಡ್, MLC ಪಾಸ್ ಇರುವ ಸ್ಕಾರ್ಪಿಯೋ KA02 MD7935 ಕಾರು,, ಐಡಿ ಕಾರ್ಡ್ ಗಳು, ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಧಾನ ಪರಿಷತ್ ಸದಸ್ಯ ಸಿ.ಆರ್ ಮನೋಹರ್ ರವರ ವಿಧಾನ ಸೌಧ ವಾಹನ ಪಾಸ್ ನ್ನು ಕೂಡ ಮೇಲ್ಕಂಡ ಆರೋಪಿಗಳು ದುರುಪಯೋಗ ಪಡಿಸಿದ್ದು ಈ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ..
ಕಾಶಿ ಮಠ ಪ್ರಕರಣ ಸಿಐಡಿ ಅಧಿಕಾರಿಗಳಿಂದ ತನಿಖೆ:
ರಾಘವೇಂದ್ರ ಸ್ವಾಮೀಜಿ, ಕಾಶಿ ಮಠ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ಬಾಬ್ತು ಆಂಧ್ರ ಪ್ರದೇಶದ CID ತನಿಖಾಧಿಕಾರಿಗಳು ಆಗಮಿಸಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ..
ಇದೇ ವೇಳೆ ದಿಬ್ಬುರಲ್ಲಿ ಪೋಲಿಸ್ ಸ್ಟೇಷನ್ ಚಿಕ್ಕಬಳ್ಳಾಪುರ ಜಿಲ್ಲೆಯ ಪೋಲಿಸ್ ಅಧಿಕಾರಿಗಳು ರಿಯಾಜ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲೀಂ ಬಾಬ ಪಟೇಲ್ ಮಹಾರಾಷ್ಟ್ರ ಇವನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ..
Comments are closed.