ಕರಾವಳಿ

ಸಂಘನಿಕೇತನ : 72ನೇ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಸಂಭ್ರಮದ ತೆರೆ

Pinterest LinkedIn Tumblr

ಮಂಗಳೂರು  : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಮಂಗಳೂರಿನ ಪ್ರತಾಪನಗರದಲ್ಲಿರುವ ಸಂಘನಿಕೇತನದಲ್ಲಿ ಪೂಜಿಸಲ್ಪಟ್ಟ 72ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವವು ಶುಕ್ರವಾರ ಸಂಜೆ ನಡೆದ ಶೋಭಾಯಾತ್ರೆಯೊಂದಿಗೆ ಬಹಳ ಸಂಭ್ರಮ ಸಡಗರೊಂದಿಗೆ ಸಮಾಪನಗೊಂಡಿತ್ತು.

ಶುಕ್ರವಾರ ಶ್ರೀ ಮಹಾ ಗಣಪತಿ ದೇವರ ಭವ್ಯ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಯಿತು. ಬಳಿಕ ಸಂಜೆ ನಗರದ ಪ್ರತಾಪನಗರದಲ್ಲಿರುವ ಸಂಘನೀಕೇತನದಿಂದ ಹೊರಟ ಶ್ರೀ ಗಣಪತಿ ದೇವರ ವೈಭವದ ಶೋಭಾಯಾತ್ರೆಯು ಮಣ್ಣಗುಡ್ಡ, ಗುರ್ಜಿ. ಆಳಕೆ,ನ್ಯೂಚಿತ್ರಾ ಮಾರ್ಗವಾಗಿ ಸಾಗಿ ರಥಭೀದಿಯಲ್ಲಿರುವ ಶ್ರೀ ಕುಡ್ತೇರಿ ಮಾಹಮ್ಮಾಯಿ ದೇವಸ್ಥಾನದ ಕೆರೆಯಲ್ಲಿ ಸಂಪನ್ನಗೊಂಡಿತ್ತು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮಾತ್, ಮಂಗಳೂರು ಉತ್ತರ ಶಾಸಕ ಡಾ, ವೈ, ಭರತ್ ಶೆಟ್ಟಿ, ಬಿಜೆಪಿ ಮುಖಂಡ ರವಿಶಂಕರ್ ಮಿಜಾರ್, ಸಂಘದ ಪ್ರಮುಖರಾದ ಸಂಜಯ ಪ್ರಭು, ಗುರುಚರಣ್, ರಾಜೇಂದ್ರ ಶೆಟ್ಟಿ, ವಸಂತ್ ಪೂಜಾರಿ ಹಾಗೂ ಮತ್ತಿತ್ತರ ಆರ್ ಎಸ್ ಎಸ್ ಪ್ರಮುಖರು ಮತ್ತು ಬಿಜೆಪಿಯ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Comments are closed.