ಕರಾವಳಿ

ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ:ವಿಕಾಸ ಪದವಿ ಪೂರ್ವ ಕಾಲೇಜಿನ ಬಾಲಕ ಹಾಗೂ ಬಾಲಕಿಯರ ತಂಡಗಳಿಗೆ ಪ್ರಶಸ್ತಿ

Pinterest LinkedIn Tumblr

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಮಂಗಳೂರು ಮತ್ತು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು, ಸುಳ್ಯ ಇದರ ಜಂಟಿ ಆಶ್ರಯದಲ್ಲಿ ಸುಳ್ಯದ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅಂತರ ಪದವಿ ಪೂರ್ವ ಕಾಲೇಜುಗಳ ಕಬಡ್ಡಿ ಪಂದ್ಯಾಟದಲ್ಲಿ ಮಂಗಳೂರಿನ ವಿಕಾಸ ಪದವಿ ಪೂರ್ವ ಕಾಲೇಜಿನ ತಂಡಗಳು ಬಾಲಕರ ವಿಭಾಗದಲ್ಲಿಪ್ರಥಮಸ್ಥಾನ ಮತ್ತು ಬಾಲಕಿಯರ ವಿಭಾಗದಲ್ಲಿ ತೄತೀಯ ಸ್ಥಾನವನ್ನು ಪಡೆದುಕೊಂಡಿರುತ್ತದೆ.

ಹುಡುಗರ ತಂಡದಲ್ಲಿಜಾರ್ಜ್ ಫಿಲಿಪ್, ಶಂಕರ್, ಗಣೇಶ್, ಸಚಿನ್, ಶ್ರೀಕಾಂತ್, ಲವ, ಕುಶ, ಸುಜಯ್, ಮೋಕ್ಷಿತ್,ಸುನೀಲ್ ಬಿಸ್ತ, ಸ್ವಸ್ತಿಕ್, ಕೌಶಿಕ್ ಎನ್ ಕೆ ಹಾಗೂ ಹುಡುಗಿಯರ ತಂಡದಲ್ಲಿ ಸಿಂಚನ ಎಲ್ ಶೆಟ್ಟಿ, ಸ್ನೇಹ, ನಿಶ್ಚಿತ, ಹಿತಶ್ರೀ, ರಚನ ಭಾಗವಹಿಸಿದ್ದರು.

ವಿಜೇತ ತಂಡದ ಸದಸ್ಯರನ್ನು ವಿಕಾಸ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

Comments are closed.