ಕರಾವಳಿ

ಸಂಸದ ನಳಿನ್ ಕುಮಾರ್ ಆಪ್ತ ಸಹಾಯಕರಾಗಿ ಕೆ. ಸುಧಾಕರ ನೇಮಕ

Pinterest LinkedIn Tumblr

ಸಂಸದ ನಳಿನ್ ಕುಮಾರ್  ಕಟೀಲ್                                                         ಕೆ. ಸುಧಾಕರ

ಮಂಗಳೂರು :ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್ ಇವರ ಆಪ್ತ ಸಹಾಯಕರಾಗಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರತಿನಿಯೋಜನೆ ಮೇರೆಗೆ ಕೆ. ಸುಧಾಕರ ಇವರನ್ನು ಲೋಕಸಭಾ ಸದಸ್ಯರ ಕೋರಿಕೆಯಂತೆ ಜಿಲ್ಲಾಧಿಕಾರಿಯವರು ನೇಮಕ ಮಾಡಿದ್ದಾರೆ.

ಸುಧಾಕರ್ ಅವರು ಈ ಹಿಂದೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕುಲಪತಿಗಳಾಗಿದ್ದ ಪ್ರೊ. ಎಸ್. ಗೋಪಾಲ್, ಪ್ರೊ.ಬಿ. ಹನುಮಯ್ಯ ಹಾಗೂ ಪ್ರೊ. ಕೆ.ಎಂ. ಕಾವೇರಿಯಪ್ಪ ಇವರ ಆಪ್ತಸಹಾಯಕರಾಗಿ ಕಾರ್ಯನಿರ್ವಹಿಸಿದ್ದರು ಅಲ್ಲದೆ 2008 ರಿಂದ 2018ರವರೆಗೆ ವಿಧಾನ ಪರಿಷತ್ ಸದಸ್ಯರಾಗಿದ್ದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್‍ರವರ ಆಪ್ತ ಸಹಾಯಕರಾಗಿ ಸೇವೆಸಲ್ಲಿಸಿದ್ದರು.

Comments are closed.