ಮಂಗಳೂರು, ಅಕ್ಟೋಬರ್.01 :ಮಂಗಳವಾರ ಬೆಳಗ್ಗೆ ಕದ್ರಿಯಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೊರಟ ಬ್ರಹ್ಮರಥ ಬಿ.ಸಿ.ರೋಡ್ ಕೈಕಂಬ ತಲುಪಿದಾಗ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಕೈಕಂಬದ ಮುಸ್ಲಿಮ್ ಭಾಂದವರು ರಥವನ್ನು ಸ್ವಾಗತಿಸಿ ರಲ್ಲದೆ, ಮೆರವಣಿಗೆಯಲ್ಲಿ ಆಗಮಿಸಿದವರಿಗೆ ತಂಪು ಪಾನೀಯ ಹಾಗೂ ಲಡ್ಡು ವಿತರಿಸುವ ಮೂಲಕ ಸೌಹಾರ್ದ ಮೆರೆದರು.
ಬಳಿಕ ಬಿ.ಸಿ.ರೋಡಿನಲ್ಲಿ ಬಂಟ್ವಾಳದ ಭಕ್ತಾದಿಗಳ ಪರವಾಗಿ ಶಾಸಕ ರಾಜೇಶ್‌ನಾಯ್ಕ್ ಉಳಿಪ್ಪಾಡಿ ಬ್ರಹ್ಮರಥವನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.
ಕದ್ರಿಯಿಂದ ಕಡಬದ ವರೆಗೆ ಬ್ರಹ್ಮರಥ ಸಾಗಿ ಕಡಬದಲ್ಲಿ ಇಂದು ತಂಗಲಿದೆ. ಮರುದಿನ ಕಡಬದಿಂದ ವಾಹನ ಜಾಥಾ ಮೆರವಣಿಗೆ ಮೂಲಕ ಸಂಜೆ 4ಕ್ಕೆ ಬ್ರಹ್ಮರಥ ಸುಬ್ರಹ್ಮಣ್ಯಕ್ಕೆ ತಲುಪಲಿದೆ.
ಚಂಪ ಷ್ಠಷ್ಠಿ ಸಮಯದಲ್ಲಿ ಶ್ರದ್ಧಾ ಭಕ್ತಿಂಯಿದ ಎಳೆಯಲಾಗುವ ಬ್ರಹ್ಮರಥ ಶಿಥಿಲಾವಾಸ್ಥೆಗೆ ತಲುಪಿತ್ತು. ಹಾಗಾಗಿ ದೇವಳದ ವತಿಯಿಂದ ಪ್ರಶ್ನೆ ಚಿಂತನೆ ಮಾಡಿದ ಸಂದರ್ಭ ಈ ವಿಚಾರ ತಿಳಿದ ಬಳಿಕ ನೂತನ ರಥಕ್ಕೆ ಮೂಹರ್ತ ಮಾಡಲಾಗಿತ್ತು. ಬೆಂಗಳೂರು ಬಿಡದಿ ರಿಯಾಲಿಟಿ ವೆಂಚರ್ ಪೋರ್ ಗ್ರೂಪ್ ಸಂಸ್ಥೆಯ ಮುಖ್ಯಸ್ಥ ಉದ್ಯಮಿ ಮುತ್ತಪ್ಪ ರೈ ಹಾಗೂ ಪಾಲುದಾರ ಅಜಿತ್ ಶೆಟ್ಟಿ ಇವರ ಸಹಕಾರ ದೊಂದಿಗೆ ಅಂದಾಜು ಎರಡುವರೆ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ನೂತನ ಬ್ರಹ್ಮರಥವನ್ನು ದೇವಳಕ್ಕೆ ದಾನ ರೂಪದಲ್ಲಿ ನೀಡಲಾಗಿದೆ.
Comments are closed.