ಯೆಯ್ಯಾಡಿ ಕೈಗಾರಿಕೆ ವಸಾಹತು ಪ್ರದೇಶ, ಮತ್ತು ಯೆಯ್ಯಾಡಿಯಲ್ಲಿ ಮೂಲಭೂತ ಸೌಕರ್ಯಗಳ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಮನಪಾ ಮಾಜಿ ಕಾರ್ಪೋರೇಟರ್ ರೂಪಾ ಡಿ ಬಂಗೇರ ನೆರವೇರಿಸಿದರು.
ಮಂಗಳೂರು : ಯೆಯ್ಯಾಡಿ ಕೈಗಾರಿಕೆ ವಸಾಹತು ಪ್ರದೇಶ, ಮತ್ತು ಯೆಯ್ಯಾಡಿಯ ಪರಿಸರದಲ್ಲಿ ಮೂಲಭೂತ ಸೌಲಭ್ಯಗಳ ಮೇಲ್ದರ್ಜೆ ಯ ಕಾಮಗಾರಿಯ ಗುದ್ದಲಿ ಪೂಜೆಯನ್ನು ಮಾಜಿ ಕಾರ್ಪೋರೇಟರ್ ರೂಪಾ ಡಿ ಬಂಗೇರ ಅವರು ಮಂಗಳವಾರ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಪರಿಸರದ ನಿವಾಸಿಗಳು ಮತ್ತು ಯೆಯ್ಯಾಡಿ ಕೈಗಾರಿಕೆ ವಸಾಹತು ಪ್ರದೇಶದ ಉದ್ದಿಮೆ ದಾರರು ಕಳೆದ ಸುಮಾರು 60 ವರುಷಗಳಿಂದ ಮೂಲಭೂತ ಸೌಕರ್ಯಗಳನ್ನು ನವೀಕರಣಕ್ಕೆ ಬೇಡಿಕೆಯನ್ನು ಇಟ್ಟಿದ್ದಾರೆ.
ಈ ಬಾರಿ ಬಿಜೆಪಿ ಸರ್ಕಾರದ ಅಲ್ಲಿನ ನಿವಾಸಿಗಳಿಗೆ ಅನುಕೂಲವಾಗುವಂತೆ ಕಾಮಗಾರಿ ನಡೆಸಲು ಸುಮಾರು ರೂ. 5.65 ಕೋಟಿಯನ್ನು ಬಿಡುಗಡೆಗೊಳಿಸಿದೆ.
ಈ ಅನುದಾನವನ್ನು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ರವರು ಮುತುವರ್ಜಿ ವಹಿಸಿ ಸರ್ಕಾರದಿಂದ ಬಿಡುಗಡೆಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಯೆಯ್ಯಾಡಿಯ ಈ ಪರಿಸರದಲ್ಲಿ ಬೇಕಾಗಿರುವ ಚರಂಡಿ ವ್ಯವಸ್ಥೆ, ಡಾಮರೀಕರಣ ಮತ್ತಿತ್ತರ ಕಾಮಗಾರಿಗಳನ್ನು ನಡೆಸಲಾಗುತ್ತದೆ ಎಂದರು.
ರಾಜ್ಯದಲ್ಲಿ 2ನೇ ಪ್ರಮುಖ ಕೈಗಾರಿಕೆ ಪ್ರಾಂಗಣವಾಗಿರುವ ಯೆಯ್ಯಾಡಿ ಕೈಗಾರಿಕೆ ವಲಯಕ್ಕೆ ಅನುದಾನ ಬಿಡುಗಡೆಗೊಂಡಿರುವುದಕ್ಕೆ ಸಂತಸಗೊಂಡಿದೆ. ಈ ಸಂದರ್ಭದಲ್ಲಿ ಶಾಸಕರನ್ನು ಮತ್ತು ಇದಕ್ಕೆ ಶ್ರಮಿಸಿದ ಎಲ್ಲರನ್ನು ಅಭಿನಂದಿಸುತ್ತೇನೆ ಎಂದರು.
ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗೋಕುಲದಾಸ ನಾಯಕ್ ರವರು ಮಾತನಾಡುತ್ತ ಕೈಗಾರಿಕಾ ವಸಾಹತು ಪ್ರದೇಶಕ್ಕೆ ಮೂಲಭೂತ ಸೌಕರ್‍ಯಗಳ ಬೇಡಿಕೆ ಹಲವು ವರ್ಷಗಳದಾಗಿತ್ತು. ಆದರೆ ಈ ಬಾರಿಯ ಸರ್ಕಾರ ಅನುದಾನ ಒದಗಿಸುವುದರಿಂದ ಎಲ್ಲಾ ಕಾಮಗಾರಿಗಳು ನಡೆದು ಉದ್ದಿಮೆದಾರರಿಗೆ ತುಂಬಾ ಅನುಕೂಲವಾಗಲಿದೆ ಎಂದರು.
ಬಿಜೆಪಿಯ ಕೋಶಾಧಿಕಾರಿ ಸಂಜಯ್ ಪ್ರಭುರವರು ಮಾತನಾಡಿ ಯೆಯ್ಯಾಡಿ ಕೈಗಾರಿಕಾ ವಸಾಹತು ಪ್ರದೇಶಕ್ಕೆ ಶಾಸಕರಾದ ವೇದವ್ಯಾಸ ಕಾಮತರು ಅನುದಾನ ಬಿಡುಗಡೆಯಾಗಿರುವುದಕ್ಕೆ ಸಂತೋಷವಾಗಿದೆ. ಇಲ್ಲಿನ ಜನರ ಮತ್ತು ಉದ್ದಿಮೆದಾರರ ಕೋರಿಕೆಯನ್ನು ಈ ಬಾರಿಯ ಯಡಿಯೂರಪ್ಪರವರ ಬಿಜೆಪಿ ಸರ್ಕಾರ ಮನ್ನಣೆ ನೀಡಿ ಅನುದಾನ ಬಿಡುಗಡೆಗೊಳಿಸಿದೆ ಎಂದರು.
ಕಾಮಗಾರಿಯ ಕಂಟ್ರಾಕ್ಟರ್ ಉದಯ ಕುಮಾರ್ ಶೆಟ್ಟಿ ಮಾತನಾಡಿ ಪರಿಸರದ ಜನರು ಕಾಮಗಾರಿಯ ಸಂದರ್ಭದಲ್ಲಿ ಪೂರ್ಣ ರೀತಿಯ ಸಹಕಾರವನ್ನು ಬಯಸುತ್ತೇನೆ. ಜೊತೆಗೆ ಕ್ಲಪ್ತ ಸಮಯದಲ್ಲಿ ಪೂರ್ಣಗೊಳಿಸುವ ಭರವಸೆಯನ್ನು ನೀಡಿದರು.
ಕಾರ್ಯಕ್ರಮದ ಸಂದರ್ಭ ಮಾಜಿ ಅಧ್ಯಕ್ಷರಾದ ಅಣ್ಣಪ್ಪ ಪೈ, ಜಯವಂತ ಪೈ, ರಘುವೀರ್ ನಾಯಕ್, ಸೂರಜ್ ಕಾಮತ್, ಶ್ರೀನಿವಾಸ್ ಶೇಟ್, ಶಫೀಕ್ ಅಹಮ್ಮದ್, ವಸಂತ ಪೂಜಾರಿ, ಪ್ರವೀಣ್ ಗುಂಡಲಿಕೆ ಉಪಸ್ಥಿತರಿದ್ದರು. ವಿಶಾಲ್ ಸಾಲ್ಯಾನ್ ಪ್ರಸ್ತಾವಿಸಿ, ಸುಮಿತ್ ರಾವ್ ನಿರೂಪಿಸಿದರು.
Comments are closed.