ಮಂಗಳೂರು, ನವೆಂಬರ್, 01: ನಗರದ ಕಂಕನಾಡಿಯ ಎಂಪೋರಿಯಂ ವಾಣಿಜ್ಯ ಸಂಕೀರ್ಣದಲ್ಲಿ ಸ್ಪಾ ಹೆಸರಿನಲ್ಲಿ ಆಕ್ರಮವಾಗಿ ನಡೆಯುತ್ತಿದ್ದ ವೇಶ್ಯಾವಟಿಕೆ ಅಡ್ಡೆಗೆ ಅಕ್ಟೋಬರ್ ೩೧ರಂದು ಕದ್ರಿ ಪೊಲೀಸರು ದಾಳಿ ನಡೆಸಿ ಇಬ್ಬರು ಪಿಂಪ್ ಗಳನ್ನು ಬಂಧಿಸಿದ್ದಾರೆ.
ನಗರದ ಮಂಗಳದೇವಿ ನಿವಾಸಿ ವಾಲಿದ್ ಖಾನ್ (34) ಹಾಗೂ ಉತ್ತರ ಪ್ರದೇಶದ ಇಸ್ತಿಕಾರ್ (38) ಎಂಬಿಬ್ಬರು ಪಿಂಪ್ ಗಳನ್ನು ಬಂಧಿಸಲಾಗಿದೆ. ಮಹಿಳಾ ಪಿಂಪ್ ಶೀಮತಿ ವಿನೋಧ ತಲೆಮರೆಸಿಕೊಂಡಿರುತ್ತಾರೆ. ಐದು ನೊಂದ ಹುಡುಗಿಯರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಕಂಕನಾಡಿಯ ಎಂಪೋರಿಯಂ ವಾಣಿಜ್ಯ ಸಂಕೀರ್ಣದಲ್ಲಿ ಎಂಬಲ್ಲಿಸ್ ಸಲೂನ್ ಮತ್ತು ಸ್ಪಾ ಎಂಬ ಹೆಸರಿನಲ್ಲಿ ಅಕ್ರಮವಾಗಿ ವೇಶ್ಯಾವಟಿಕೆ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ.
ತಲೆಮರೆಸಿಕೊಂಡಿರುವ ಮಹಿಳಾ ಪಿಂಪ್ ವಿನೋಧ ಈ ಹಿಂದೆ ಕದ್ರಿ ಠಾಣಾ ಮೊಕದ್ದಮೆ ಸಂಖ್ಯೆ 158/19 ವೇಶ್ಯಾವಟಿಕೆ ಪ್ರಕರಣದ ಆರೋಪಿಯಗಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವೇಶ್ಯಾವಟಿಕೆ ಜಾಲ ಪತ್ತೆ ಕಾರ್ಯಾಚರಣೆಯಲ್ಲಿ ಕದ್ರಿ ಇನ್ಸ್ಪಪೆಕ್ಟರ್ ಶಾಂತಾರಾಮ, ಎಸೈ, ಮಾರುತಿ, ಮತ್ತು ಸಿಬ್ಬಂದಿಗಳು ಭಾಗವಹಿಸಿರುತ್ತಾರೆ.
Comments are closed.