ಕರಾವಳಿ

ಮನಪಾ ಚುನಾವಣೆ : ಕೊನೆಯ ದಿನ ನಾಮಪತ್ರಗಳ ಮಹಾಪೂರ -ಒಟ್ಟು 236 ನಾಮಪತ್ರ ಸಲ್ಲಿಕೆ

Pinterest LinkedIn Tumblr

ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನವಾದ್ದರಿಂದ ವಿವಿಧ ಪಕ್ಷಗಳ ಅಭ್ಯರ್ಥಿಗಳು ತಮ್ಮ ತಮ್ಮ ಪಕ್ಷದ ಕಾರ್ಯಕರ್ತರ ಜೊತೆಗೆ ಮಂಗಳೂರು ಮಹಾನಗರ ಪಾಲಿಕೆ ಕಚೇರಿಗೆ ಅಗಮಿಸಿದರು.

ಮಂಗಳೂರು, ನವೆಂಬರ್.01: : ಮಂಗಳೂರು ಮಹಾನಗರ ಪಾಲಿಕೆಗೆ ನವೆಂಬರ್ 12ರಂದು ನಡೆಯಲಿರುವ ಚುನಾವಣೆಗೆ ಗುರುವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ವಿವಿಧ ರಾಜಕೀಯ ಪಕ್ಷಗಳಿಂದ ಒಟ್ಟು 236 ನಾಮಪತ್ರ ಸಲ್ಲಿಕೆಯಾಗಿದೆ.

ಒಟ್ಟು ನಾಮಪತ್ರಗಳ ವಿವರ:

ಕಾಂಗ್ರೆಸ್ – 66,     ಬಿಜೆಪಿ – 94,      ಜೆಡಿಎಸ್ – 14,      ಸಿಪಿಐ- 1,    ಸಿಪಿಐಎಂ – 8,    ಎಸ್.ಡಿ.ಪಿ.ಐ – 10 ,    ಜೆಡಿಯು – 2,
ಡಬ್ಲ್ಯೂ ಪಿಐ – 3,       ಕರ್ನಾಟಕ ರಾಷ್ಟ್ರ ಸಮಿತಿ – 3,         ಪಕ್ಷೇತರರು – 35,        ಒಟ್ಟು ನಾಮಪತ್ರಗಳು 236

ಗರಿಷ್ಠ ನಾಮಪತ್ರ – 7          ವಾಡ್೯ 3, 22, 33, 43, 56 ರಲ್ಲಿ

ಕನಿಷ್ಠ ನಾಮಪತ್ರ – 2        ವಾಡ್೯ 2, 7, 10, 13,17, 51 ರಲ್ಲಿ

ನಾಮಪತ್ರಗಳನ್ನು ಪರಿಶೀಲಿಸುವ ದಿನ ನವೆಂಬರ್ 2, ಉಮೇದುವಾರರನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನ ನವೆಂಬರ್ 4, ಮತದಾನ ಅವಶ್ಯವಿದ್ದರೆ ಮತದಾನವನ್ನು ನಡೆಸಬೇಕಾದ ದಿನ ಮತ್ತು ಸಮಯ ನವೆಂಬರ್ 12 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆ ವರೆಗೆ. ಮರು ಮತದಾನ ಇದ್ದಲ್ಲಿ ಮತದಾನ ನಡೆಸಬೇಕಾದ ದಿನ ಮತ್ತು ಸಮಯ ನವೆಂಬರ್ 13 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆ ವರೆಗೆ. ಮತಗಳ ಎಣಿಕೆಯ ದಿನ ನವೆಂಬರ್ 14 ರಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದೆ. ಚುನಾವಣೆಯನ್ನು ಮುಕ್ತಾಯಗೊಳಿಸಬೇಕಾದ ದಿನ ನವೆಂಬರ್ 14.

Comments are closed.