ಮಂಗಳೂರು, ನವೆಂಬರ್.1: ಕನ್ನಡರಾಜ್ಯೋತ್ಸವದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಶುಕ್ರವಾರ ಬೆಳಗ್ಗೆ ನಗರದ ಅಂಬೇಡ್ಕರ್ ವೃತ್ತದಿಂದ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವದ ವೈಭವಪೂರ್ಣವಾದ ಮೆರವಣಿಗೆ ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷಎಸ್. ಪ್ರದೀಪ ಕುಮಾರ ಕಲ್ಕೂರ ಅವರ ನೇತೃತ್ವದಲ್ಲಿ ನಗರದ ಮುಖ್ಯರಸ್ತೆಯಲ್ಲಿ ಸಾಗಿಬಂದು ಕೇಂದ್ರ ಮೈದಾನತಲುಪಿತು.
ನಗರದ ಅಂಬೇಡ್ಕರ್ ವೃತ್ತದ ಹಿರಿಯ ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಹಿಲ್ಡಾ ರಾಯಪ್ಪನ್ ಮೆರವಣಿಗೆಯನ್ನು ವಿದ್ಯುಕ್ತವಾಗಿ ಉದ್ಘಾಟಿಸುವ ಮೂಲಕ ಚಾಲನೆಯಿತ್ತರು.
ಬಹುಭಾಷಿಕರ ಬೀಡಾದದಕ್ಷಿಣಕನ್ನಡಜಿಲ್ಲೆಯಲ್ಲಿ, ಕನ್ನಡ ಭಾಷೆಯ ಅನುಷ್ಠಾನದೊಂದಿಗೆ ಜೀವನಧರ್ಮದ ಸಾಕ್ಷಾತ್ಕಾರ ಈ ಮಣ್ಣಿನ ಶ್ರೇಷ್ಠ ಗುಣ ವೈಶಿಷ್ಠವಾಗಿದೆ. ವಿವಿಧಜೀವನ ಮೌಲ್ಯಗಳ ಜೊತೆಗೂಡುವಿಕೆರಾಜ್ಯೋತ್ಸವದ ಸಂಭ್ರಮಎಂದರು.
ಕನ್ನಡ ನಾಡುನುಡಿಯಜೀವನಧರ್ಮದ ಸಾರವನ್ನು ನಾವೆಲ್ಲರೂ ಮುಂದಿನ ಪೀಳಿಗೆಗೆ ತಿಳಿ ಹೇಳುವ ಸುಸಂದರ್ಭಇದಾಗಿದೆ. ಎಂದು ಶುಭವನ್ನು ಹಾರೈಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರುತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆಗೈದರು.
ಮೆರವಣಿಗೆಯ ಮುಂಚೂಣಿಯಲ್ಲಿ ಮಂಗಳೂರು ಉಪವಿಭಾಗದ ಅಸಿಸ್ಟೆಂಟ್ ಕಮಿಷನರ್ ರವಿಚಂದ್ರ ನಾಯಕ್, ಮೂಡಾದ ಆಯುಕ್ತ ಶ್ರೀಕಾಂತ್ ರಾವ್, ತಹಶೀಲ್ದಾರ್ ಗುರುಪ್ರಸಾದ್, ವಾರ್ತಾಧಿಕಾರಿಖಾದರ್ ಷಾ, ಸಾರ್ವಜನಿಕ ಶಿಕ್ಷಣ ಇಲಾಖೆಯಉಪನಿರ್ದೇಶಕ ವಾಲ್ಟರ್ ಡಿ’ಮೆಲ್ಲೊ, ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಸಹಾಯಕ ನಿರ್ದೇಶಕರಾಜೇಶ್ ಜಿ. ಸಹಿತ ಅನೇಕ ಪ್ರಮುಖರು ಉಪಸ್ಥಿತರಿದ್ದರು. ವಿವಿಧಅಕಾಡೆಮಿಯ ಮುಖ್ಯಸ್ಥರು, ಜನಪದ ನೃತ್ಯ ತಂಡಗಳು, ಟ್ಯಾಬ್ಲೋಗಳು, ಶಾಲಾಮಕ್ಕಳು ಹಾಗೂ ಸಾರ್ವಜನಿಕರು ಬಹುಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ನೆಹರೂ ಮೈದಾನದವರೆಗೆ ಹಮ್ಮಿಕೊಂಡ ಮೆರವಣಿಗೆಯಲ್ಲಿ ಕರಾವಳಿಯ ಹುಲಿವೇಷ, ಕರಂಗೋಲು, ಡೋಲು ನೃತ್ಯ ಸೇರಿದಂತೆ ಅರಣ್ಯ, ಆರೋಗ್ಯ ಇಲಾಖೆ, ತೋಟಗಾರಿಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳ ತಂಡ ಪಾಲ್ಗೊಂಡು ಮೆರುಗು ನೀಡಿದವು.
Comments are closed.