ಕರಾವಳಿ

ಕೆನರಾ ಶಾಲೆಯ ಆದಿತ್ಯ ಶೆಣೈ‌ಗೆ ಕಬ್ ವಿಭಾಗದಲ್ಲಿ ರಾಜ್ಯ ಪುರಸ್ಕಾರ ‘ ಹಾಗೂ ‘ಗೋಲ್ಡನ್ ಏರೋ ‘ ಪ್ರಶಸ್ತಿ

Pinterest LinkedIn Tumblr

ಮಂಗಳೂರು : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕಬ್ ವಿಭಾಗದಲ್ಲಿ ‘ ರಾಜ್ಯ ಪುರಸ್ಕಾರ ‘ ಹಾಗೂ ‘ಗೋಲ್ಡನ್ ಏರೋ ‘ ಪ್ರಶಸ್ತಿಯನ್ನು ಕೆನರಾ ಹಿರಿಯ ಪ್ರಾಥಮಿಕ ಶಾಲೆ ಉರ್ವಾದ ಆರನೇ ತರಗತಿಯ ವಿದ್ಯಾರ್ಥಿ ಕೆ . ಆದಿತ್ಯ ಶೆಣೈ ಹಾಗೂ ಶಮಂತ್ ಶರ್ಮ ರವರು ಗಳಿಸಿರುತ್ತಾರೆ.

ಪ್ರಶಸ್ತಿ ನೀಡುವ ಸಮಾರಂಭವು ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಭವನದಲ್ಲಿ ನೆರವೇರಿತು . ಕಾರ್ಯಕ್ರಮದಲ್ಲಿ ಜಿಲ್ಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಪದಾಧಿಕಾರಿಗಳು , ಶಾಲಾ ಸ್ಕೌಟ್ಸ್ ಶಿಕ್ಷಕಿ ಶ್ರೀಮತಿ ಲಕ್ಷ್ಮಿ ವೈ ಹಾಗೂ ಜಿಲ್ಲೆಯ ವಿವಿಧ ಶಾಲೆಗಳ ಸ್ಕೌಟ್ಸ್ ಗೈಡ್ಸ್ ಮತ್ತು ಕಬ್ಸ್ ಗಳು ಉಪಸ್ಥಿತರಿದ್ದರು.

Comments are closed.