ಕರಾವಳಿ

ಡೆಪ್ಯುಟಿ ಕಮಾಂಡೆಂಟ್ ರಮೇಶ್ ಅವರಿಗೆ ರಾಷ್ತಪತಿಗಳ ವಿಶಿಷ್ಟ ಸೇವಾ ಪದಕ

Pinterest LinkedIn Tumblr

ಮಂಗಳೂರು ನವೆಂಬರ್ 07 : ದ.ಕ ಜಿಲ್ಲಾ ಗೃಹರಕ್ಷಕದಳ ಡೆಪ್ಯುಟಿ ಕಮಾಂಡೆಂಟ್ ಮತ್ತು ಹೆಚ್ಚುವರಿ ನಿಯೋಜನೆ ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಮೇಶ್ ಇವರ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಇಲಾಖೆಯಲ್ಲಿ ವಿಶಿಷ್ಟ ಸೇವೆಯನ್ನು ಗುರುತಿಸಿ 2017-18೮ನೇ ಸಾಲಿನ ರಾಷ್ತಪತಿಗಳ ವಿಶಿಷ್ಟ ಸೇವಾ ಪದಕವನ್ನು ನವೆಂಬರ್ 8ರಂದು ಬೆಳಿಗ್ಗೆ 11ಗಂಟೆಗೆ ರಾಜಭವನದಲ್ಲಿ ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲ ವಜೂಭಾಯಿವಾಲ ಇವರಿಂದ ಸ್ವೀಕರಿಸಲಿದ್ದಾರೆ.

ರಮೇಶ್ 2008 ರಲ್ಲಿ ರಾಷ್ತಪತಿಗಳ ಶ್ಲಾಘನೀಯ ಪದಕ, 2008 ರಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಪಡೆದಿರುತ್ತಾರೆ. ಇವರ ಸೇವೆಯನ್ನು ಗುರುತಿಸಿ ಯುವ ವಾಹಿನಿ ಮಂಗಳೂರು 2014 ರಲ್ಲಿ ಯುವ ವಾಹಿನಿ ಸಾಧನ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

Comments are closed.