ಕರಾವಳಿ

ಮಂಗಳೂರು ನಗರದ ಅಭಿವೃದ್ಧಿಗಾಗಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ : ಶಾಸಕ ವೇದವ್ಯಾಸ್ ಕಾಮತ್ ವಿಶ್ವಾಸ

Pinterest LinkedIn Tumblr

ಮಂಗಳೂರು, ನವೆಂಬರ್.10: ನಗರದ ಜನತೆಯ ಆಶೀರ್ವಾದದಿಂದ ಇಲ್ಲಿನ ಶಾಸಕನಾಗಿ ಜನಸೇವೆ ಮಾಡುವ ಅವಕಾಶ ನನಗೆ ಲಭಿಸಿದೆ. ಕಳೆದ ಒಂದೂವರೆ ವರ್ಷದಿಂದ ಜನತೆ ನನ್ನ ಮೇಲೆ ಇರಿಸಿದ ವಿಶ್ವಾಸಕ್ಕೆಬದ್ದನಾಗಿ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಬ್ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಧೈಯವನ್ನು ಅಕ್ಷರಶಃ ಅಳವಡಿಸಿಕೊಂಡು ಪಕ್ಷಬೇಧ ಮರೆತು ಎಲ್ಲ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ ಎನ್ನುವ ಆತ್ಮವಿಶ್ವಾಸ ನನ್ನಲ್ಲಿದೆ. ನಗರದ ಸರ್ವೋತಮ ಅಭಿವೃದ್ಧಿ ಹಿನ್ನೆಲೆಯಲ್ಲಿ ಈ ಬಾರಿ ಪಾಲಿಕೆಯಲ್ಲಿ ಬಿ ಜೆ ಪಿ ಅಧಿಕಾರಕ್ಕೆ ಬರುವ ವಿಶ್ವಾಸ ತನಗಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.

ಮಂಗಳೂರು ನಗರದ ಮುಖ್ಯ ರಸ್ತೆ, ಒಳ ರಸ್ತೆ, ಫುಟ್ಪಾತ್, ಕುಡಿಯುವ ನೀರು, ಘನತ್ಯಾಜ್ಯ ನಿರ್ವಹಣೆ, ಹಕ್ಕುಪತ್ರ ವಿತರಣೆ, ಮನೆ ನಂಬರ್ ನೀಡುವಿಕೆ, ಬಡವರಿಗೆ ಸೂರು. ಹೀಗೆ ಅನೇಕ ಯೋಜನೆ, ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದೇನೆ. ಅನೇಕ ಯೋಜನೆಗಳು ಪ್ರಗತಿಯ ಹಂತದಲ್ಲಿ ಹಾಗೂ ಅನುಷ್ಠಾನದ ಹಂತದಲ್ಲಿವೆ. ನಗರದ ಎಲ್ಲ ವಾರ್ಡ್ಗಳಲ್ಲಿ ನಿರಂತರ ಪ್ರವಾಸ, ಸಂಪರ್ಕ ಇರಿಸಿಕೊಂಡಿರುವ ನಾನು ಜನಸೇವೆಗೆ ಪೂರ್ತಿ ನನ್ನ ಸಮಯ ಮೀಸಲಿರಿಸಿದ್ದೇನೆ. – ನಮ್ಮ ಹೆಮ್ಮೆಯ ಮಂಗಳೂರು ನಗರ ತನ್ನದೇ ಆದ ಅನನ್ಯತೆಯಿಂದ ಇಂದು ವಿಶ್ವದಲ್ಲೇ ಗುರುತಿಸಿಕೊಂಡಿದೆ.

ಮಂಗಳೂರು ನಗರ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆ ಮತ್ತು ಅಮೃತ ಯೋಜನೆಗೆ ಆಯ್ಕೆಯಾಗಿದ್ದು ಅಭಿವೃದ್ಧಿಯ ಹೊಸ ಶಕೆ ಆರಂಭವಾಗಿದೆ. ಸತತ ಮೂರನೇ ಬಾರಿ ದ.ಕ. ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದ, ಪ್ರಸ್ತುತ ಬಿಜೆಪಿಯ ರಾಜ್ಯಾಧ್ಯಕ್ಷರಾಗಿರುವ ಶ್ರೀ ನಳಿನ್ ಕುಮಾರ್ ಕಟೀಲ್ ಅವರ ಪ್ರಯತ್ನದಿಂದ ಇದು ಸಾಧ್ಯವಾಗಿದ್ದು, ಮಂಗಳೂರು ಈ ಎರಡು ಯೋಜನೆಯ ಸೌಲಭ್ಯ ಪಡೆದ ದೇಶದ ಏಕೈಕ ನಗರವಾಗಿದೆ.

ಬಿಜೆಪಿಗೆ ದೇಶದಲ್ಲಿ ಈಗ ಸುವರ್ಣ ಕಾಲ. ಕೇಂದ್ರದಲ್ಲಿ ವಿಶ್ವಮಾನ್ಯ ನಾಯಕ ಶ್ರೀ ನರೇಂದ್ರ ಮೋದಿ ಅವರ ಸರ್ಕಾರ, ಕರ್ನಾಟಕದಲ್ಲಿ ರೈತ ನಾಯಕ, ಅಭಿವೃದ್ಧಿಯ ಹರಿಕಾರ, ಬಡವರ ಬಂಧು ಶ್ರೀ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ. ದ.ಕ.ಲೋಕಸಭಾ ಕ್ಷೇತ್ರದಲ್ಲಿ ಜನಪ್ರಿಯ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್, ಮಂಗಳೂರು ನಗರ ದಕ್ಷಿಣ ಸಹಿತ ಜಿಲ್ಲೆಯ 7 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು, ದ.ಕ.ಜಿಲ್ಲಾ ಪಂಚಾಯಿತಿ ಸಹಿತ ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಬಿಜೆಪಿ ಆಡಳಿತವಿದ್ದು, ಈಗ ಮಂಗಳೂರು ಮಹಾನಗರ ಪಾಲಿಕೆಗೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸುವರ್ಣಾ ವಕಾಶ ಬಂದಿದೆ ಎಂದು ಶಾಸಕರು ಮಾದ್ಯಮಕ್ಕೆ ತಿಳಿಸಿದ್ದಾರೆ.

Comments are closed.