ಮಂಗಳೂರು : ನಾನು ಶಾಸಕನಾಗಿ ಆಯ್ಕೆಯಾದ ಸಂದರ್ಭ ಹಿಂದಿನ ರಾಜ್ಯ ಸರ್ಕಾರ ಮತ್ತು ಮಂಗಳೂರು ಮಹಾ ನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಇಲ್ಲದ ಕಾರಣ ನಿರೀಕ್ಷಿತ ಅಭಿವೃದ್ಧಿ ಸಾಧ್ಯವಾಗಿರಲಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುವ ಕಾರ್ಯವೂ ಕೆಲವರಿಂದ ನಡೆದಿತ್ತು. ರಾಜ್ಯದಲ್ಲಿ ಬಿ.ಜೆ.ಪಿ ಅಧಿಕಾರಕ್ಕೆ ಬಂದ ಬಳಿಕ ರಾಜ್ಯ ಸರ್ಕಾರ ಹಾಗೂ ವಿವಿಧ ಇಲಾಖೆಗಳ ಅನುದಾನ ತರಿಸುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪರವರು 25 ಕೋಟಿ ರೂ. ವಿಶೇಷ ಅನುದಾನವನ್ನು ಒದಗಿಸಿ ಮಂಗಳೂರು ನಗರದ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಮಂಗಳೂರು ಮಹಾ ನಗರ ಪಾಲಿಕೆಗೆ ಈ ಹಿಂದೆ ಚುನಾಯಿತರಾದ ಬಿಜೆಪಿಯ ಪ್ರತಿನಿಧಿಗಳು ಪ್ರಾಮಾಣಿಕ ಸೇವೆ ಸಲ್ಲಿಸಿ ವಾರ್ಡ್ ನ ಅಭಿವೃದ್ದಿಗೆ ಶಕ್ತಿ ಮೀರಿ ಶ್ರಮಿಸಿದ್ದಾರೆ.
ಈಗ ಮತ್ತೆ ಪಾಲಿಕೆಯ ಚುನಾವಣೆ ಬಂದಿದೆ. ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 38 ವಾರ್ಡ್ ಗಳಲ್ಲಿ ಬಿಜೆಪಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ತಾವು ನ. 12 ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಆಯಾ ವಾರ್ಡ್ ಗಳ ಅಭಿವೃದ್ಧಿಗೆ ದುಡಿಯಲು ಅವಕಾಶ ಮಾಡಿಕೊಡುವಂತೆ ಕ್ಷೇತ್ರದ ಶಾಸಕನಾಗಿ, ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಅಧ್ಯಕ್ಷನಾಗಿ ತಮ್ಮಲ್ಲಿ ವಿನಮ್ರವಾಗಿ ವಿನಂತಿಸಿಕೊಳ್ಳುತ್ತಿದ್ದೇನೆ.
ನಾವೆಲ್ಲರೂ ಜತೆಯಾಗಿ ಮಂಗಳೂರನ್ನು ಸ್ಮಾರ್ಟ್ ಸಿಟಿಯಾಗಿ, ಶಾಂತಿ, ಸೌಹಾರ್ದತೆಯ, ಸ್ವಚ್ಛ ಸುಂದರ ನಗರವಾಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇವೆಂದು ಭರವಸೆ ನೀಡುತ್ತಿದ್ದೇನೆ. ನಿಮ್ಮ ಪ್ರೀತಿ, ಅಶೀರ್ವಾದ ಬಿಜೆಪಿ ಅಭ್ಯರ್ಥಿಗಳ ಮೇಲಿರಲಿ ಎಂದು ಆಶಿಸುತ್ತೇನೆ ಎಂದು ಶಾಸಕರು ಹೇಳಿದ್ದಾರೆ.
ಪ್ರಗತಿಯ ನೋಟ : ಮೀನುಗಾರಿಕಾ ಇಲಾಖೆ – 6.25 ಕೋಟಿ ರೂ. * ಮುಖ್ಯಮಂತ್ರಿಗಳ ವಿಶೇಷ ಅನುದಾನ-25 ಕೋಟಿ ರೂ. + ಕೈಗಾರಿಕಾ ಪ್ರದೇಶಾಭಿವೃದ್ದಿ – 5.65 ಕೋಟಿ ರೂ. * ಮಂಜೂರಾದ ಅನುದಾನದಲ್ಲಿ 23 ಕೋಟಿ ರೂ. + ಗಂಥಾಲಯ ಕಟ್ಟಡ ನಿರ್ಮಾಣ – 0.98 ಕೋಟಿ ರೂ. * ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ , * ಬೆಂಗೈಯಲ್ಲಿ ಆಧುನಿಕ ಅಂಗನವಾಡಿ – 0.25 ಕೋಟಿ ರೂ. * ಮಳೆ ಹಾನಿ ಕಾಮಗಾರಿ-8.48 ಕೋಟಿ ರೂ., * ಆರಾಧನಾ ಯೋಜನೆ ಅಡಿಯಲ್ಲ – 0.10 ಕೋಟಿ ರೂ. * ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ- 2 ಕೋಟಿ ರೂ. + 200 ಹಕ್ಕು ಪತ್ರ ವಿತರಣೆ * ಮಲೆನಾಡು ಪ್ರದೇಶಾಭಿವೃದ್ಧಿ-1 ಕೋಟಿ ರೂ. * 800 ಮನೆ ನಂಬರ್ ವಿತರಣೆ * ಅಲ್ಪಸಂಖ್ಯಾತ ಇಲಾಖೆ – 6.83 ಕೋಟಿ ರೂ. ಮಂಗಳೂರು ಮಹಾ ನಗರ ಪಾಲಿಕೆ : * ಲೋಕೋಪಯೋಗಿ-29.69 ಕೋಟಿ ರೂ. * ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ-125 ಕೋಟಿ ರೂ. ಎಂದು ಶಾಸಕರು ವಿವರ ನೀಡಿದ್ದಾರೆ.
Comments are closed.