ಕರಾವಳಿ

ಮನಪಾ ಚುನಾವಣಾ ಲೈವ್ ಫಲಿತಾಂಶ: ಬಿಜೆಪಿ 31, ಕಾಂಗ್ರೆಸ್ 14ರಲ್ಲಿ ಗೆಲುವು – SDPI-1

Pinterest LinkedIn Tumblr

ಮಂಗಳೂರು, ನವೆಂಬರ್.14: ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್‌ಗಳಿಗೆ ನವೆಂಬರ್ 12ರಂದು ನಡೆದ ಚುನಾಚಣೆಯ ಮತ ಎಣಿಕೆ ಕಾರ್ಯ ಇಂದು ಬೆಳಗ್ಗೆ 8 ಗಂಟೆಗೆ ನಗರದ ಸ್ಟೇಟ್‌ಬ್ಯಾಂಕ್ ಸಮೀಪದ ರೊಸಾರಿಯೋ ಶಾಲೆಯಲ್ಲಿ ಆರಂಭಗೊಂಡಿದ್ದು, ನಮ್ಮ ಓದುಗರಿಗಾಗಿ ವಿಜೇತ ಅಭ್ಯರ್ಥಿಗಳ ಲೈವ್ ವರದಿಯನ್ನು ಈ ಮೂಲಕ ನೀಡಲಾಗುತ್ತಿದೆ.

ಏಣಿಕೆ ಕಾರ್ಯ ಭರದಿಂದ ಸಾಗುತ್ತಿದ್ದು, ಬಿಜೆಪಿಯ ಗೆಲುವಿನ ಓಟ ಮುಂದುವರಿದಿದೆ. ಇದುವರೆಗೆ ಫಲಿತಾಂಶ ಪ್ರಕಟವಾಗಿರುವ ವಾರ್ಡ್ ಗಳಲ್ಲಿ ಬಿಜೆಪಿ 31, ಕಾಂಗ್ರೆಸ್ ಗೆ 14ರಲ್ಲಿ ಗೆಲುವು ಸಾಧಿಸಿದೆ. ಎಸ್‌ಡಿಪಿಐಗೆ 1ಸ್ಥಾನ ಲಭಿಸಿದೆ.

ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ನಂ.5 ಕಾಟಿಪಳ್ಳ ಉತ್ತರದಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಇಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಶಂಶಾದ್ ಅಬೂಬಕರ್ ಅವರು 2766 ಮತಗಳನ್ನು ಪಡೆದು ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ. ಇವರ ಪ್ರತಿಸ್ಪರ್ಧಿಗಳಾಗಿದ್ದ ಮಾಜಿ ಮೇಯರ್ ಮೇಯರ್ ಗುಲ್ಝಾರ್ ಬಾನು ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಉಮರಬ್ಬ ಅವರ ಪುತ್ರಿ ಫಾತಿಮಾ ಬಿ. ಅವರು ಸೋಲುಂಡಿದ್ದಾರೆ.

ವಾರ್ಡ್ ೫- ಕಾಟಿಪಳ್ಳ (ಉತ್ತರ)
೧. ಫಾತಿಮಾ ಉಮರಬ್ಬ (ಕಾಂಗ್ರೆಸ್)
೨. ಸುರೈಯಾ (ಬಿಜೆಪಿ)
೩. ಶಂಶಾದ್ ಅಬೂಬಕ್ಕರ್ (SಆPI)
೪. ಗುಲ್ಜಾರ್ ಬಾನು
೫. ಮಿಶ್ರಿಯಾ

ವಾರ್ಡ್ ನಂ.43 ಕುದ್ರೊಳಿ: ಕಾಂಗ್ರೆಸ್ ನ ಸಂಶುದ್ದೀನ್ 743 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ. ನಿಕಟಪೂರ್ವ ಕಾರ್ಪೊರೇಟರ್ ಅಝೀಝ್ ಕುದ್ರೋಳಿ ಸೋಲುಂಡಿದ್ದಾರೆ.

ವಾರ್ಡ್ ೪೩- ಕುದ್ರೋಳಿ
೧. ಅಜೀಜ್ ಕುದ್ರೋಳಿ (ಜೆಡಿ‌ಎಸ್)
೨. ಆರ್ಶಾದ್ ಪೋಪಿ (ಬಿಜೆಪಿ)
೩. ಸಂಶುದ್ದೀನ್ (ಕಾಂಗ್ರೆಸ್)
೪. ಮುಝೈನ್ ಕುದ್ರೋಳಿ (ಎಸ್‌ಡಿಪಿ‌ಐ)

ವಾರ್ಡ್ ನಂ.53 ಬಜಾಲ್: ಕಾಂಗ್ರೆಸ್ ನ ಅಶ್ರಫ್ ಬಜಾಲ್ 1,660 ಮತಗಳನ್ನು ಪಡೆದು ಗೆಲುವು ಪಡೆದಿದ್ದಾರೆ.

ವಾರ್ಡ್ ೫೩- ಬಜಾಲ್
೧. ಅಶ್ರಾಫ್ (ಕಾಂಗ್ರೆಸ್)
೨. ಚಂದ್ರಶೇಖರ (ಬಿಜೆಪಿ)
೩. ರಿಯಾಜ್(ಜೆಡಿ‌ಎಸ್)
೪. ಸುರೇಶ ಬಜಾಲ್ (ಸಿಪಿ‌ಐ‌ಎಂ)
೫. ಎಂ. ಕಬೀರ್(ಎಸ್‌ಡಿಪಿ‌ಐ)

ವಾರ್ಡ್ ನಂ.22 ಕದ್ರಿ ಪದವು: ಬಿಜೆಪಿಯ ಜಯಾನಂದ ಅಂಚನ್ ರಿಗೆ ಜಯ

ವಾರ್ಡ್ ೨೨- ಕದ್ರಿ ಪದವು
೧. ಉಮೇಶ್ ದಂಡೆಕೇರಿ (ಕಾಂಗ್ರೆಸ್)
೨. ಜಯಾನಂದ ಅಂಚನ್ (ಬಿಜೆಪಿ)
೩. ನವೀನ್ ಬಿ(ಸಿಪಿ‌ಐ‌ಎಂ)
೪. ಮಧುಸೂಧನ ಕೆ.ಟಿ(ಜೆಡಿ‌ಎಸ್)
೫. ಅವಿನಾಶ್

ವಾರ್ಡ್ ನಂ.18 ಕಾವೂರು: ಬಿಜೆಪಿಯ ಗಾಯತ್ರಿ ಎ. ಅವರು 3296 ಮತಗಳನ್ನು ಗಳಿಸಿ ವಿಜಯಿಯಾಗಿದ್ದಾರೆ.

ವಾರ್ಡ್ ೧೮- ಕಾವೂರು
೧. ಗಾಯತ್ರಿ ಎ (ಬಿಜೆಪಿ)
೨. ಭವ್ಯ ಪೂಜಾರಿ (ಕಾಂಗ್ರೆಸ್)

ವಾರ್ಡ್ ನಂ.38 ಬೆಂದೂರ್: ಕಾಂಗ್ರೆಸ್ ನ ನವೀನ್ ಆರ್. ಡಿಸೋಜ 1598 ಮತಗಳನ್ನು ಗಳಿಸಿ ಗೆಲುವು ಸಾಧಿಸಿದ್ದಾರೆ.
ವಾರ್ಡ್ ೩೮-ಬೆಂದೂರ್
೧. ಜೇಸೆಲ್ ಡಿ’ಸೋಜ (ಬಿಜೆಪಿ)
೨. ನವೀನ್ ಆರ್ ಡಿ’ಸೋಜ (ಕಾಂಗ್ರೆಸ್)
೩. ಆಲ್ವಿನ್ ಪಿಂಟೋ

ವಾರ್ಡ್ ನಂ.39: ಕಾಂಗ್ರೆಸ್ಸಿನ ಜೆಸಿಂತಾ ಆಲ್ಫ್ರೆಡ್ 1092 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ.
ವಾರ್ಡ್ ೩೯- ಫಳ್ನೀರ್
೧. ಆಶಾ ಡಿ’ ಸಿಲ್ವಾ (ಬಿಜೆಪಿ)
೨. ಜೆಸಿಂತಾ ವಿಜಯ ಆಲ್ಫ್ರೇಡ್ (ಕಾಂಗ್ರೆಸ್)
೩. ಸಿಲ್ವಿಯಾ ಸಲ್ಡಾನ (ಜೆಡಿ‌ಎಸ್)

ವಾರ್ಡ್ ನಂ.44: ಬಂದರ್: ಝೀನತ್ ಸಂಶುದ್ದೀನ್ 1308 ಮತಗಳನ್ನು ಗಳಿಸಿ ಜಯಬೇರಿ ಬಾರಿಸಿದ್ದಾರೆ.

ವಾರ್ಡ್ ೪೪ – ಬಂದರ್
೧. ಝೀನತ್ ಸಂಶುದ್ದೀನ್ (ಕಾಂಗ್ರೆಸ್)
೨. ಪ್ರಿಯಾಂಕ (ಬಿಜೆಪಿ)
೩. ರಮೀಜಾ ನಾಸಿರ್(ಜೆಡಿ‌ಎಸ್)

ವಾರ್ಡ್ ನಂ.3 ಕಾಟಿಪಳ್ಳ ಪೂರ್ವ: 2486 ಮತಗಳನ್ನು ಗಳಿಸಿರುವ ಬಿಜೆಪಿಯ ಲೋಕೇಶ್ ಬೊಳ್ಳಾಜೆ ಗೆಲುವು ಸಾಧಿಸಿದ್ದಾರೆ. ನಿಕಟಪೂರ್ವ ಕಾರ್ಪೊರೇಟರ್ ಬಶೀರ್ ಅಹ್ಮದ್ ಗೆ‌ ಸೋಲುಂಡಿದ್ದಾರೆ.

ವಾರ್ಡ್ ೩- ಕಾಟಿಪಳ್ಳ (ಪೂರ್ವ)
೧. ನವಾಜ್ ಕಾಟಿಪಳ್ಳ (ಜೆಡಿ‌ಎಸ್)
೨. ಬಶೀರ್ ಅಹವ್ಮದ್(ಕಾಂಗ್ರೆಸ್)
೩. ಲೋಕೇಶ್ ಬೊಳ್ಳಾಜೆ (ಬಿಜೆಪಿ)
೪. ಹುಸೈನ್ ಕಾಟಿಪಳ್ಳ

ವಾರ್ಡ್ ನಂ.57 ಹೊಯ್ಗೆ ಬಝಾರ್: ಬಿಜೆಪಿಯ ರೇವತಿ ಶ್ಯಾಂಸುಂದರ್ 2116 ಮತಗಳನ್ನು ಪಡೆದು ಜಯಸಿದ್ದಾರೆ.

ವಾರ್ಡ್ ೫೭- ಹೊಯಿಗೆ ಬಜಾರ್
೧. ರೇವತಿ (ಬಿಜೆಪಿ)
೨. ಶರ್ಮಿಳಾ ಶರತ್ (ಕಾಂಗ್ರೆಸ್)

ವಾರ್ಡ್ ನಂ.8 ಹೊಸಬೆಟ್ಟು ವಾರ್ಡ್ ನಲ್ಲಿ ಬಿಜೆಪಿಯ ವರುಣ್ ಚೌಟ ಗೆಲುವಿನ ನಗೆ ಬೀರಿದ್ದಾರೆ.

ವಾರ್ಡ್ ೮- ಹೊಸಬೆಟ್ಟು
೧. ಅಶೋಕ್ ಶೆಟ್ಟಿ (ಕಾಂಗ್ರೆಸ್)
೨. ರೊನಾಲ್ಡ್ ಫೆರ್ನಾಂಡಿಸ್ (ಜೆಡಿ‌ಎಸ್)
೩. ವರುಣ್ ಚೌಟ (ಬಿಜೆಪಿ)

ವಾರ್ಡ್ ನಂ.11 ಪಣಂಬೂರು ಬೇಂಗ್ರೆ: ಬಿಜೆಪಿಯ ಸುನೀತಾ 1,236 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ವಾರ್ಡ್ ೧೧- ಪಣಂಬೂರು
೧. ಚಂದ್ರಿಕಾ (ಕಾಂಗ್ರೆಸ್)
೨. ಶೋಭಾ (ಜೆಡಿ‌ಎಸ್)
೩. ಸುನಿತಾ (ಬಿಜೆಪಿ)
೪. ಸುನಿತಾ ಕೃಷ್ಣ (ಸಿಪಿ‌ಐ‌ಎಂ)
೫. ಸುಶೀಲಾ

ವಾರ್ಡ್ ನಂ.32 ಕದ್ರಿ ಉತ್ತರ: ಬಿಜೆಪಿಯ ಶಕೀಲಾ ಕಾವಾ 1813 ಮತಗಳನ್ನು ಗಳಿಸಿ ಜಯಿಸಿದ್ದಾರೆ

ವಾರ್ಡ್ ೩೨- ಕದ್ರಿ (ಉತ್ತರ)
೧. ಮಮತಾ ಶೆಟ್ಟಿ (ಕಾಂಗ್ರೆಸ್)
೨. ಶಖಿಲ ಕಾವ (ಬಿಜೆಪಿ)

ವಾರ್ಡ್ 27- ಬೋಳೂರು ನಲ್ಲಿ ಬಿಜೆಪಿಯ ಜಗದೀಶ್ ಜಯಗಳಿಸಿದ್ದಾರೆ. ಅವರ ಪ್ರತಿಸ್ಫರ್ಧಿ ಕಾಂಗ್ರೆಸ್ ನ ಬಿ. ಕಮಲಾಕ್ಷ ಸಾಲಿಯನ್ ಪರಭಾವಗೊಂಡಿದ್ದಾರೆ.

ವಾರ್ಡ್ 27- ಬೋಳೂರು
1 ಬಿ. ಕಮಲಾಕ್ಷ ಸಾಲಿಯನ್ (ಕಾಂಗ್ರೆಸ್)
2. ಜಗದೀಶ ಶೆಟ್ಟಿ (ಬಿಜೆಪಿ)
3. ಎಂ. ದಿವಾಕರ್ ರಾವ್(ಪುಟ್ಟು)
4 ರಾಜ್‌ಕುಮಾರ್ ಕೋಟ್ಯಾನ್

ವಾರ್ಡ್ 3 ಕಾಟಿಪಳ್ಳ (ಪೂರ್ವ) ದಲ್ಲಿ ಬಿಜೆಪಿಯ ಲೋಕೇಶ್ ಬೊಳ್ಳಾಜೆ ಜಯ ಸಾಧಿಸಿದ್ದಾರೆ. ಲೋಕೇಶ್ ಬೊಳ್ಳಾಜೆ 2486 ಮತಗಳನ್ನು ಪಡೆದರೆ ಅವರ ಪ್ರತಿಸ್ಫರ್ಧಿ ಕಾಂಗ್ರೆಸ್‌ನ ಬಶೀರ್ ಅಹವ್ಮದ್ 1680 ಮತಗಳನ್ನು ಪಡೆದು ಪರಭಾವಗೊಂಡಿದ್ದಾರೆ. ಜೆಡಿ ಎಸ್ ನ ನವಾಜ್ ಕಾಟಿಪಳ್ಳ 484 ಮತಗಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ.

ವಾರ್ಡ್ 3- ಕಾಟಿಪಳ್ಳ (ಪೂರ್ವ)
1 ನವಾಜ್ ಕಾಟಿಪಳ್ಳ (ಜೆಡಿ‌ಎಸ್)
2 ಬಶೀರ್ ಅಹವ್ಮದ್(ಕಾಂಗ್ರೆಸ್)
3 ಲೋಕೇಶ್ ಬೊಳ್ಳಾಜೆ (ಬಿಜೆಪಿ)
4 ಹುಸೈನ್ ಕಾಟಿಪಳ್ಳ

ವಾರ್ಡ್ 12 ಪಂಜಿಮೊಗರು ನಲ್ಲಿ ಕಾಂಗ್ರೆಸ್‌ನ ಅನಿಲ್ ಕುಮಾರ್ ಜಯ ಸಾಧಿಸಿದ್ದಾರೆ. ಅನಿಲ್ ಕುಮಾರ್ 1690 ಮತಗಳನ್ನು ಪಡೆದರೆ ಅವರ ಪ್ರತಿಸ್ಫರ್ಧಿ ಬಿಜೆಪಿಯ ನವೀನ್ ಚಂದ್ರ ಬಿ ಪೂಜಾರಿ ಮತಗಳನ್ನು ಪಡೆದು ಪರಭಾವಗೊಂಡಿದ್ದಾರೆ.

ವಾರ್ಡ್ 12- ಪಂಜಿಮೊಗರು
1. ಅನಿಲ್ ಕುಮಾರ್ (ಕಾಂಗ್ರೆಸ್)
2. ಅಹಮದ್ ಬಶೀರ್ (ಸಿಪಿ‌ಐ‌ಎಂ)
3. ನವೀನ್ ಚಂದ್ರ ಬಿ ಪೂಜಾರಿ (ಬಿಜೆಪಿ)
4. ಮೊಹಮ್ಮದ್ ಹನೀಫ್(ಎಸ್‌ಡಿಪಿ‌ಐ)

ವಾರ್ಡ್ 2 ಸುರತ್ಕಲ್ (ಪೂರ್ವ) ಬಿಜೆಪಿಯ ಶ್ವೇತಾ ಎ ಜಯ ಸಾಧಿಸಿದ್ದಾರೆ. ಶ್ವೇತಾ ಎ 2496 ಮತಗಳನ್ನು ಪಡೆದರೆ ಅವರ ಪ್ರತಿಸ್ಫರ್ಧಿ ಕಾಂಗ್ರೆಸ್‌ನ ಇಂದಿರಾ 1133 ಮತಗಳನ್ನು ಪಡೆದು ಪರಭಾವಗೊಂಡಿದ್ದಾರೆ.

ವಾರ್ಡ್ 2-ಸುರತ್ಕಲ್ (ಪೂರ್ವ)
1 ಇಂದಿರಾ (ಕಾಂಗ್ರೆಸ್)
2 ಶ್ವೇತಾ ಎ (ಬಿಜೆಪಿ)

ವಾರ್ಡ್ 6 ಇಡ್ಯಾ (ಪೂರ್ವ) ಬಿಜೆಪಿಯ ಸರಿತಾ ಶಶಿಧರ್ ಸಾಧಿಸಿದ್ದಾರೆ. ಸರಿತಾ ಅವರು 2229 ಮತಗಳನ್ನು ಪಡೆದರೆ ಅವರ ಪ್ರತಿಸ್ಫರ್ಧಿ ಕಾಂಗ್ರೆಸ್‌ನ ವಿನಿತಾ ಆರ್ ರಾವ್ 1764 ಮತಗಳನ್ನು ಪಡೆದು ಪರಭಾವಗೊಂಡಿದ್ದಾರೆ.

ವಾರ್ಡ್ 6-ಇಡ್ಯಾ ( ಪೂರ್ವ)
1 ವಿನಿತಾ ಆರ್ ರಾವ್ (ಕಾಂಗ್ರೆಸ್)
2. ಸರಿತಾ ಶಶಿಧರ್( ಬಿಜೆಪಿ)
3 ರಝಿಯಾ ಬಾನು
4 ರೀನಾ ನವೀನ್ ಪೂಜಾರಿ
5 ಸೌಮ್ಯ ಆಸಿಪ್

09:00am
ಏಣಿಕೆ ಕಾರ್ಯ ಭರದಿಂದ ಸಾಗುತ್ತಿದ್ದು, ಬಿಜೆಪಿ ಇದುವರೆಗೆ ಆರು ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ 1 ಹಾಗೂ ಪಕ್ಷೇತರ 1 ಗೆಲುವು ಸಾಧಿಸಿದೆ

ವಾರ್ಡ್ 21 ಪದವು ಪಶ್ಚಿಮ: ಬಿಜೆಪಿಯ ವನಿತಾ ಪ್ರಸಾದ್ 1051 ಮತಗಳನ್ನು ಪಡೆದು ಜಯ ಸಾಧಿಸಿದ್ದಾರೆ.

ವಾರ್ಡ್ 21- ಪದವು (ಪಶ್ಚಿಮ)
1 ಆಶಾಲತಾ (ಕಾಂಗ್ರೆಸ್)
2 ವನಿತಾ ಪ್ರಸಾದ್ (ಬಿಜೆಪಿ)

ವಾರ್ಡ್ 51 ಅಳಪೆ ಉತ್ತರ: 2083 ಮತಗಳನ್ನು ಗಳಿಸಿರುವ ಬಿಜೆಪಿಯ ರೂಪಾಶ್ರೀ ಪೂಜಾರಿಗೆ ಗೆಲುವು. ಕಾಂಗ್ರೆಸ್‌ನ ಶೋಭಾ 2007 ಮತಗಳನ್ನು ಗಳಿಸಿದ್ದಾರೆ.

ವಾರ್ಡ್ 51 ಅಳಪೆ (ಉತ್ತರ)
1 ರೂಪ ಶ್ರೀ ಪೂಜಾರಿ (ಬಿಜೆಪಿ)
2 ಶೋಭಾ (ಕಾಂಗ್ರೆಸ್)

ವಾರ್ಡ್ 56 ಮಂಗಳಾದೇವಿ: ಬಿಜೆಪಿಯ ಪ್ರೇಮಾನಂದ ಶೆಟ್ಟಿ 2,187 ಮತಗಳನ್ನು ಗೆಲುವು ಸಾಧಿಸಿದ್ದಾರೆ.

ವಾರ್ಡ್ 56- ಮಂಗಳಾದೇವಿ
1 ದಿನೇಶ ಬಿ ರಾವ್ (ಕಾಂಗ್ರೆಸ್)
2 ಪ್ರೇಮಾನಂದ ಶೆಟ್ಟಿ (ಬಿಜೆಪಿ)
3 ಎನ್ ಮಹೇಶ್ ರಾವ್(ಜೆಡಿ‌ಎಸ್)

08:48am
41 ನೇ ಸೆಂಟ್ರಲ್ ಮಾರ್ಕೆಟ್ ವಾರ್ಡಿನಿಂದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಶ್ರೀಮತಿ ಪೂರ್ಣಿಮಾ ಪ್ರಚಂಡ ಬಹುಮತದಿಂದ ಜಯಶಾಲಿಯಾಗಿದ್ದಾರೆ. ಅವರ ನಿಕಟ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಎಚ್ ಮಮತಾ ಶೆಣೈ ಪರಭಾವಗೊಂಡಿದ್ದಾರೆ. ಪೂರ್ಣಿಮಾ 2037 ಮತಗಳನ್ನು ಗಳಿಸಿದರೆ, ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಮಮತಾ ಶೆಣೈ 426 ಮತಗಳನ್ನಷ್ಟೇ ಗಳಿಸಲು ಶಕ್ತರಾಗಿದ್ದಾರೆ. 18 ನೋಟಾ ಚಲಾವಣೆಯಾಗಿದೆ.

ವಾರ್ಡ್ 41- ಸೆಂಟ್ರಲ್ ಮಾರ್ಕೆಟ್
1. ಪೂರ್ಣಿಮಾ (ಬಿಜೆಪಿ)
2 ಎಚ್ ಮಮತಾ ಶೆಣೈ (ಕಾಂಗ್ರೆಸ್)
3 ರೇಖಾ ಸುರೇಂದ್ರ (ಪಕ್ಷೇತರ )

08 : 28am
ಸುರತ್ಕಲ್ ಪಶ್ಚಿಮ 1ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ಶೋಭಾ ರಾಜೇಶ್ ವಿಜಯಿಯಾಗಿದ್ದಾರೆ. ಶೋಭಾ ರಾಜೇಶ್ 985 ಮತಗಳನ್ನು ಗಳಿಸಿದರೆ, ಅವರ ನಿಕಟ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ರೇವತಿ ಪುತ್ರನ್ 760 ಮತ, ಶಾಂತಾ ರಾವ್ 548 ಮತಗಳನ್ನು ಪಡೆದಿದ್ದಾರೆ. 21 ನೋಟಾ ಚಲಾವಣೆಯಾಗಿದೆ.

ವಾರ್ಡ್ 1- ಸುರತ್ಕಲ್ (ಪಶ್ಚಿಮ)
1. ಶಾಂತ ಎಸ್ ರಾವ್ (ಕಾಂಗ್ರೆಸ್)
2 ಶೋಭಾ ರಾಜೇಶ್ (ಬಿಜೆಪಿ)
3 ರೇವತಿ ಪುತ್ರನ್ (ಪಕ್ಷೇತರ )

Comments are closed.