ಕರಾವಳಿ

ಬಿಜೆಪಿಗೆ ಭರ್ಜರಿ ಜಯ : ಮಂಗಳೂರು ಮಹಾನಗರ ಪಾಲಿಕೆ ಬಿಜೆಪಿ ವಶಕ್ಕೆ

Pinterest LinkedIn Tumblr

ಮಂಗಳೂರು, ನವೆಂಬರ್.14: ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್‌ಗಳಿಗೆ ನವೆಂಬರ್ 12ರಂದು ನಡೆದ ಚುನಾಚಣೆಯ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಬಿಜೆಪಿ 44 ವಾರ್ಡ್‌ಗಳಲ್ಲಿ ಗೆಲುವು ಸಾಧಿಸುವ ಮೂಲಕ ಪಾಲಿಕೆಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದೆ.

ಭಾರತೀಯ ಜನತಾ ಪಾರ್ಟಿಯ 44 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಉಳಿದಂತೆ ಈ ಬಾರಿ ಕಾಂಗ್ರೆಸ್ 14ರಲ್ಲಿ ಗೆಲುವು ಸಾಧಿಸಿದ್ದು, ಎಸ್‌ಡಿಪಿಐಗೆ 2ಸ್ಥಾನ ಲಭಿಸಿದೆ.

ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ನಿಂದ 60, ಬಿಜೆಪಿಯಿಂದ 60, ಜೆಡಿಎಸ್‌ 12, ಸಿಪಿಎಂ 7, ಸಿಪಿಐ 1, ಎಸ್‌ಡಿಪಿಐ 6, ಜೆಡಿಯು 2, ಡಬ್ಲೂಪಿಐ 3, ಕರ್ನಾಟಕ ರಾಷ್ಟ್ರ ಸಮಿತಿ 2 ಹಾಗೂ ಪಕ್ಷೇತರರು 27 ಸೇರಿ ಒಟ್ಟು 180 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು.

ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್‌ಗಳಿಗೆ ನವೆಂಬರ್ 12ರಂದು ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ನಡೆದ ಚುನಾವಣೆಯಲ್ಲಿ ಶೇ. 59.67 ಮತದಾನವಾಗಿದೆ. ಚುನಾವಣೆ ಶಾಂತಿಯುತವಾಗಿತ್ತು. ಒಟ್ಟು 3,94,894 ಮತದಾರರಲ್ಲಿ 1,13,084 ಪುರುಷರು, ಮತ್ತು 1,22,527 ಮಹಿಳೆಯರು ಸೇರಿ ಒಟ್ಟು 2,35,628 ಮಂದಿ ಮತ ಚಲಾಯಿಸಿದ್ದಾರೆ. ಅಲ್ಲದೆ, 17 ತೃತೀಯ ಲಿಂಗಿಗಳೂ ಮತ ಚಲಾಯಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳಲ್ಲಿ 3,87,465 ಮತದಾರರಿದ್ದು, ಇದರಲ್ಲಿ 1,99,989 ಪುರುಷರಿದ್ದರೆ, 1,87,465 ಸ್ತ್ರೀಯರಿದ್ದಾರೆ. 63 ತೃತೀಯ ಲಿಂಗಿಗಳಿದ್ದಾರೆ. ಮತದಾರರ ಸಂಖ್ಯೆಯಲ್ಲಿ ಸ್ತ್ರೀಯರು ಎರಡನೇ ಸ್ಥಾನದಲ್ಲಿದ್ದರೂ ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿರುವುದು ವಿಶೇಷ.

Comments are closed.