ಮಂಗಳೂರು : ಇದೇ ನವೆಂಬರ್ 20 ರಿಂದ 24ರ ವರೆಗೆ ಮಂಗಳೂರಿನ ಕರಾವಳಿ ಮೈದಾನದಲ್ಲಿ ಪ್ರೋ ಇಂಡಿಯಾ ಮೂಯಿಥಾಯ್ ಚಾಂಪಿಯನ್ ಶಿಪ್ ಪಂದ್ಯಾಟ ನಡೆಯಲಿದೆ. ಕರ್ನಾಟಕದ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಡೆಯುವ ಈ ಪಂದ್ಯಾಟದಲ್ಲಿ ದೇಶದ 27 ರಾಜ್ಯಗಳಿಂದ ಕ್ರೀಡಾಳುಗಳು ಭಾಗವಹಿಸಲಿದ್ದಾರೆ ಎಂದು ಮಾಯಿಥಾಯ್ ಎಸೋಶಿಯಸ್‌ನ ರಾಜ್ಯಾಧ್ಯಕ್ಷರಾದ ಶ್ರೀ ರಾಜಗೋಪಾಲ್ ರೈ ಮಾಹಿತಿ ನೀಡಿದರು.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇದು ದೇಶದಲ್ಲೇ ಅತ್ತಂತ ದೊಡ್ಡ ಪಂದ್ಯಾಟವಾಗಲಿದ್ದು ಮಂಗಳೂರಿನ ಜನತೆಗೆ ಹೆಮ್ಮೆಯ ವಿಷಯವಾಗಿದೆ. ಮಂಗಳೂರಿನ ಜನತೆ ಈ ಪಂದ್ಯಾಟದಲ್ಲಿ ಭಾಗವಹಿಸಿ ಪಂದ್ಯಾಟದ ಯಶಸ್ವಿಗೆ ಸಾಕ್ಷಿಯಾಗಬೇಕಾಗಿ ಹಾಗೂ ಕ್ರೀಡಾಳುಗಳಿಗೆ ಪ್ರೋತ್ಸಾಹ ನೀಡಬೇಕಾಗಿ ಅವರು ಮನವಿ ಮಾಡಿದರು.
ಪಂದ್ಯಾಟವು ದಿನಾಂಕ 20ನೇ ಬುಧವಾರದಂದು ಸಂಜೆ 3.30 ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮಂಗಳೂರಿನ ಸಂಸದರಾದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಲಿದ್ದಾರೆ.
ದಿನಾಂಕ 20-11-2019 ರಿಂದ 23-11-2019 ರವರೆಗ ಮೂಯಿಥಾಯ್ ಪ್ರೋ ಇಂಡಿಯಾ ಚಾಂಪಿಯನ್ ಶಿಪ್ ನಡೆಯಲಿದ್ದು ೨೪ ರಂದು ರಾಷ್ಟ್ರಮಟ್ಟದ ಅತ್ಯುತ್ತಮ 10 ಜನ ( 10 ಕುಸ್ತಿ ಪಟುಗಳಿಂದ) ಪ್ರೊಪೇಶನಲ್ ಪೈಟರ್‍ಸ್‌ಗಳಿಂದ ನಡೆಯಲಿದ್ದು ಈ ಪಂದ್ಯಾಟವನ್ನು ದ.ಕ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಲಿದ್ದಾರೆ.
ದ.ಕ ಜಿಲ್ಲೆಯಲ್ಲಿ ಸತತ ಐದು ದಿನ ನಡೆಯುವ ಈ ಪಂದ್ಯಾಟದ ಸಂಪೂರ್ಣ ನಿರ್ಣಾಯಕರು ರಾಷ್ಟ್ರೀಯ ಮೂಯಿಥಾಯಿ ಎಸೋಸಿಯೇಶನ್‌ನವರೇ ಆಗಿದ್ದು ಈಗಾಗಲೇ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ .27 ರಾಜ್ಯಗಳ 400 ರಿಂದ 450 ಕ್ರೀಡಾಳುಗಳು ಭಾಗವಹಿಸಲಿದ್ದು ಕ್ರೀಡಾಳುಗಳ ಎಲ್ಲಾ ವ್ಯವಸ್ಥೆಗಳನ್ನು (ಊಟ ವಸತಿ) ಮಂಕಿ ಮೆಹಮ್ ಫೈಟ್ ಕ್ಲಬಿನವರು ವಹಿಸಿಕೊಂಡು ಅತ್ತಂತ ವ್ಯವಸ್ಥಿತ ರೀತಿಯಲ್ಲಿ ಪಂದ್ಯಾಟದ ಯಶಸ್ವಿಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮಂಗಳೂರಿನ ಮಹಾ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಮೂಯಿಥಾಯಿ ಎಸೋಸಿಯೇಶನ್‌ನ ಕರ್ನಾಟಕದ ರಾಜ್ಯಾಧ್ಯಕ್ಷರಾದ ಶ್ರೀಯುತ ರಾಜಗೋಪಾಲ ರೈಯವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಚಂದ್ರಹಾಸ್ ಶೆಟ್ಟಿ, ಇಲಿಯಾಸ್ ಸಾಂಟೀಸ್, ಮಹೇಶ್ ಪಾಂಡ್ಯ , ಸದಾನಂದ ನಾವರ, ಸ್ವರ್ಣ ಸುಂದರ್, ಆಸ್ಲಂ, ವಿಲ್‌ಫ್ರೇಡ್ ಸಲ್ದಾನ , ಸಚಿನ್ ರಾಜ್ ರೈ , ನಿತೇಶ್ ಕುಮಾರ್, ರಾಘವೇಂದ್ರ ರಾವ್, ಶ್ರೀ ವಿಕ್ರಮ್ ದತ್ ಮುಂತಾದವರು ಉಪಸ್ಥಿತರಿದ್ದರು.
Comments are closed.