ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ 64ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ, ಕರ್ನಾಟಕ ಸಂಘ ಶಾರ್ಜಾ 17ನೇ ವಾರ್ಷಿಕೋತ್ಸವ, ಮಕ್ಕಳ ದಿನಾಚರಣೆ ಮತ್ತು “ಮಯೂರ ವಿಶ್ವ ಮಾನ್ಯಕನ್ನಡಿಗ ಪ್ರಶಸ್ತಿ” ಪ್ರದಾನ ಸಮಾರಂಭ ಶಾರ್ಜಾ ಇಂಡಿಯನ್ ಅಸೋಸಿಯೇಶನ್ ಬೃಹತ್ ಸಭಾಂಗಣದಲ್ಲಿ ಅದ್ಧೂರಿಯಾಗಿ ನಡೆಯಿತು.
ಕನ್ನಡ ಧ್ವಜರೋಹಣದೊಂದಿಗೆ ಕಾರ್ಯಕ್ರಮಕ್ಕೆಅಧಿಕೃತ ಚಾಲನೆ
ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಶರು ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರ ಸಮ್ಮುಖದಲ್ಲಿ ಸಂಘದ ಪೋಷಕರಾದ ಶ್ರೀ ಮಾರ್ಕಡೆನಿಸ್ ಡಿ’ಸೋಜಾರವರು ಧ್ವಜ ಅರಳಿಸಿ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ತಮ್ಮಉದ್ಘಾಟನಾ ಭಾಷಣದಲ್ಲಿ ಕರ್ನಾಟಕ ಸಂಘ ನಡೆದು ಬಂದ ಹಾದಿಯನ್ನು ಸಭೆಯ ಮುಂದಿಟ್ಟರು. ಆಲ್‌ಐನ್ ಕನ್ನಡ ಪೂರ್ವ ಅಧ್ಯಕ್ಷರು ಶ್ರೀ ಕೆ.ಬಿ.ರಮೇಶ್ ಮತ್ತು ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿಂಫೊನಿ ಮ್ಯೂಸಿಕಲ್ ಸ್ಕೂಲ್ ಅಜ್ಮಾನ್ ತಂಡದ ವತಿಯಿಂದ ಸ್ವಾಗತ ನೃತ್ಯದೊಂದಿಗೆ ಸಾಂಸ್ಕೃತಿಕ ಪ್ರಾರಂಭವಾಯಿತು. ರಾಡಿಕಲ್ ಡ್ಯಾನ್ಸ್ ಸ್ಟುಡಿಯೋ ತಂಡ, ಬಿಲ್ಲಾವಾಸ್ ದುಬಾಯಿ, ವಿಶ್ವಕರ್ಮತಂಡ, ಮಮತಾ ಸಿಷ್ಯರ ತಂಡ, ಸುಕನ್ಯಾ ಶಿಷ್ಯರ ತಂಡ, ಕನ್ನಡ ಪಾಠ ಶಾಲೆ ದುಬಾಯಿ ತಂಡದವರಿಂದ ವೈವಿಧ್ಯಮಯ ಶಾಸ್ತ್ರೀಯ, ಜಾನಪದ, ಸಿನೆಮ್ಯಾಟಿಕ್ ನೃತ್ಯಗಳು ಸರ್ವರ ಮನಸೆಳೆಯಿತು.
ಮಕ್ಕಳ ದಿನಾಚರಣೆಯ ವಿಶೇಷ ಕಾರ್ಯಕ್ರಮದಲ್ಲಿ ತಮ್ಮ ಸುಮಧುರ ಕಂಠಸಿರಿಯಲ್ಲಿ ಮಕ್ಕಳು ಸುಶ್ರಾವ್ಯ ಗಾನಗಳ ಮೂಲಕ ಸರ್ವರ ಮೆಚ್ಚುಗೆ ಪಡೆದರು. ಬಾಲ ಪ್ರತಿಭೆಗಳಾದ ಸನ್ನಿದಿ ವಿ. ಶೆಟ್ಟಿ, ಪ್ರಾಪ್ತಿ ಪಕ್ಕಳ, ಅಮೋಘವರ್ಷ ಭಟ್, ನಿನಾದ ಭಟ್, ಐಸಿರಿ ರೋಶನ್ ಶೆಟ್ಟಿ, ಅಮಿಷಾ, ಶಾನ್‌ಕ್ರಿಸ್ಟನ್, ಅನಿಕಾ, ಸಿಯೋನಾ ಸೂರ್ಯ ಸಂತೋಷ್ ಹಾಗೂ ಏಕಪಾತ್ರಭಿನಯದಲ್ಲಿ ಶ್ರೇಯಸ್ ಕೃಷ್ಣ.
ಪ್ರತಿಷ್ಠಿತ “ಮಯೂರ ವಿಶ್ವಮಾನ್ಯಕನ್ನಡಿಗ ಪ್ರಶಸ್ತಿ” ಶ್ರೀ ರಾಮಚಂದ್ರ ಹೆಗ್ಡೆಯವರಿಗೆ ಪ್ರದಾನ
ಸಭಾ ಕಾರ್ಯ ಕ್ರಮವನ್ನು ಮುಖ್ಯ ಅತಿಥಿಗಳು ಜ್ಯೋತಿ ಬೆಳಗಿಸುವುದರ ಮೂಲಕ “ಮಯೂರ ವಿಶ್ವಮಾನ್ಯಕನ್ನಡಿಗ ಪ್ರಶಸ್ತಿ” ಪ್ರದಾನಸಮಾರಂಭಕ್ಕೆ ಚಾಲನೆ ನೀಡಿದರು.
ಕರ್ನಾಟಕ ಸಂಘ ಶಾರ್ಜಾಅಧ್ಯಕ್ಷರಾದ ಶ್ರೀ ಅನಂದ್ ಬೈಲೂರ್ ಸರ್ವರನ್ನು ಸ್ವಾಗತಿಸಿದರು.
ಅಹ್ವಾನಿತ ಅತಿಥಿಗಳು, ಗಣ್ಯಾತಿಗಣ್ಯರ ಸಮ್ಮುಖದಲ್ಲಿಕರ್ನಾಟಕ ಸಂಘ ಶಾಜಾ ಪ್ರತಿವರ್ಷಅರಬ್ ಸಂಯುಕ್ತ ಸಂಸ್ಥಾನದಲ್ಲಿ ಸಾಧನೆ ಮಾಡಿರುವಕನ್ನಡಿಗರನ್ನು ಗುರುತಿಸಿ ನೀಡಲಾಗುತಿರುವ ಪ್ರತಿಷ್ಠಿತ “ಮಯೂರ ವಿಶ್ವಮಾನ್ಯಕನ್ನಡಿಗ ಪ್ರಶಸ್ತಿ” ಯನ್ನು ಶ್ರೀ ರಾಮಚಂದ್ರ ಹೆಗ್ಡೆ ದಂಪತಿಗಳಿಗೆ ಪ್ರದಾನಿಸಲಾಯಿತು. ಸಾನ್ಮಾನ ಪ್ರಕ್ರಿಯೆಯಲ್ಲಿ ಮುಖ್ಯ ಅತಿಥಿಗಳಾದ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯು.ಎ.ಇ. ಯಅಧ್ಯಕ್ಷರಾದ ಶ್ರೀ ಪ್ರವೀಣ್‌ಕುಮಾರ್ ಶೆಟ್ಟಿ, ಎಂಸ್ಕ್ವೆರ್‌ಇಂಜಿನಿಯರಿಂಗ್ ವ್ಯವಸ್ಥಾಪಕ ನಿರ್ದೇಶಕರು ಶ್ರೀ ಮಹಮ್ಮದ್ ಮುಸ್ತಾಫಾ, ಇಂಡಿಯನ್ ಅಸೋಸಿಯೇಶನ್ ಶಾರ್ಜಾಅಧ್ಯಕ್ಷರು ಶ್ರೀ ಇ.ಪಿ.ಜಾನ್ಸನ್, ಕರ್ನಾಟಕ ಸಂಘ ಶಾರ್ಜಾ ಪೋಷಕರು ಶ್ರೀ ಮಾರ್ಕ್‌ಡೆನಿಸ್ ಡೆನಿಸ್, ಕರ್ನಾಟಕ ಸಂಘ ಶಾರ್ಜಾ ಪೂರ್ವಅಧ್ಯಕ್ಷರಾದ ಶ್ರೀ ಗಣೇಶ್‌ರೈ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀ ನೋವೆಲ್‌ಅಲ್ಮೆಡಾಎಲ್ಲಾರೂಒಗ್ಗೂಡಿಪ್ರಶಸ್ತಿ ಪ್ರದಾನಿಸಿದರು.
ಕರ್ನಾಟಕ ಸಂಘ ಶಾರ್ಜಾ ಸದಸ್ಯರಾದ ಶ್ರೀ ವಿಶ್ವನಾಥ್ ಶೆಟ್ಟಿ ದಂಪತಿಗಳಿಗೆ ಸನ್ಮಾನ
ಕರ್ನಾಟಕ ಸಂಘ ಶಾರ್ಜಾ ಸದಸ್ಯರಾದ ಶ್ರೀ ವಿಶ್ವನಾಥ್ ಶೆಟ್ಟಿ ಹಾಗೂ ಶ್ರೀಮತಿ ಉಷಾ ವಿಶ್ವನಾಥ್ ಶೆಟ್ಟಿ ದಂಪತಿಗಳನ್ನು ಶಾಲು ಹೊದಿಸಿ, ಸ್ಮರಣಿಕೆ, ಸನ್ಮಾನ ಪತ್ರ ನೀಡಿಗೌರವಿಸಲಾಯಿತು.
ಗೌರವ ಅತಿಥಿಗಳಿಗೆ ಗೌರವ ಸಮರ್ಪಣೆ
ಗೌರವಾನ್ವಿತಅತಿಥಿಯಾಗಿ ಆಗಮಿಸಿದ ಕರ್ನಾಟಕಕಡಲ ತೀರದ ಮುಲ್ಕಿ ಮೂಡಬಿದ್ರೆ ವಿಧಾನ ಸಭಾಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ ಉಮನಾಥ್‌ಕೊಟ್ಯಾನ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಬಾರಿಕರ್ನಾಟಕರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರಿ. ಬಿ. ಜಿ. ಮೋಹನ್‌ದಾಸ್‌ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯ ಮೇಲಿದ್ದ ಅತಿಥಿಗಳಿಗೆ ಸ್ಮರಣಿಕೆ ನೀಡಿಗೌರವಿಸಲಾಯಿತು. ಸಮಾರಂಭದಲ್ಲಿ ಭಾಗಿಗಳಾಗಿರುವ ಕಲಾವಿದರು, ಗಾಯಕರು, ಪ್ರಾಯೋಜಕರು, ಅಬುಧಾಬಿ ಕರ್ನಾಟಕ ಸಂಘದಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಮಾಧ್ಯಮ ಪ್ರತಿನಿಧಿಗಳನ್ನು ಗೌರವಿಸಲಾಯಿತು.
ಕೊಚ್ಚೆಕಾರ್‌ದೇವದಾಸ್ ಪೈ ಯವರ ಸಿತಾರ್ ವಾದನಕಛೇರಿ “ಸಂಗೀತಾ ಕಲಾ ರತ್ನ” ಬಿರುದು ಪುರಸ್ಕಾರ
ಸಮಾರಂಭದ ಭವ್ಯ ವೇದಿಕೆಯಲ್ಲಿ ಸಿತಾರ್ ವಾದನ ಕಛೇರಿಯನ್ನು ಭಾರತ ಮತ್ತು ವಿದೇಶಗಳಲ್ಲಿ ಹಲವಾರು ಕಛೇರಿಗಳನ್ನು ನಡೆಸಿ ಕೊಟ್ಟು ಭಾರತೀಯ ಸಂಗೀತವನ್ನು ವಿಶ್ವವ್ಯಾಪಿ ಮಾಡಿರುವ ಶ್ರೀ ಕೊಚ್ಚಿಕಾರ್ ದೇವದಾಸ ಪೈಯವರು ಸಿತಾರ್ ವಾದನಕಛೇರಿಯನ್ನು ನಡೆಸಿಕೊಟ್ಟು ಸರ್ವರ ಪ್ರಸಂಸೆಗೆ ಪಾತ್ರರಾದರು. ಇವರ ಸಾಧನೆಯನ್ನು ಅಭಿನಂದಿಸಿ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಸಮಸ್ಥ ಅನಿವಾಸಿ ಕನ್ನಡಿಗರ ಪರವಾಗಿ “ಸಂಗೀತಾ ಕಲಾ ರತ್ನ” ಬಿರುದು ನೀಎಡಿ ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದ ಕಾರ್ಯಕ್ರಮ ನಿರೂಪಣೆಯನ್ನುಅತ್ಯಂತ ಸೊಗಸಾಗಿ ನಿರೂಪಣೆ ಮಾಡಿದವರು ಶ್ರೀಮತಿ ಆರತಿಆಡಿಗ ಮತ್ತು ಶ್ರೀ ವಿಘ್ನೇಶ್ ಹಾಗು ಬಾಲಕ ಕು. ಅಮೋಘವರ್ಷ ಭಟ್ ಇವರುಗಳು ಸರ್ವರ ಮೆಚ್ಚುಗೆಗೆ ಪಾತ್ರರಾದರು.
ಕರ್ನಾಟಕ ಸಂಘ ಶಾರ್ಜಾದ ಸರ್ವ ಸದಸ್ಯರ ಹಲವು ದಿನಗಳ ಪೂರ್ವತಯಾರಿಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು
ಬಿ. ಕೆ. ಗಣೇಶ್‌ರೈ
ಅರಬ್ ಸಂಯುಕ್ತ ಸಂಸ್ಥಾನ
Comments are closed.