ಕರಾವಳಿ

ದೇರೆಬೈಲ್ ದಕ್ಷಿಣ ವಾರ್ಡಿನ ಸರ್ವತೋಮುಖ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆ  : ಶಾಸಕ ಕಾಮತ್

Pinterest LinkedIn Tumblr

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೇಸ್ ಆಡಳಿತಾವಧಿ ಕೊನೆಗೊಂಡ ನಂತರ, ದೇರೆಬೈಲ್ ದಕ್ಷಿಣ ವಾರ್ಡಿನ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜೋಡಿಸಿ ಒಟ್ಟು 98.43 ಲಕ್ಷ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ತಿಳಿಸಿದ್ದಾರೆ.

ಪಾಲಿಕೆಯಲ್ಲಿ ಆಡಳಿತ ಅವಧಿ ಮುಗಿದ ಮೇಲೆ ಸಾರ್ವಜನಿಕರು ನನ್ನನ್ನು ಭೇಟಿಯಾಗಿ ತಮ್ಮ ಪರಿಸರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಕುರಿತು ಬೇಡಿಕೆಗಳನ್ನಿಟ್ಟಿದ್ದರು. ಆ ಆಧಾರದ ಮೇಲೆ ಒಟ್ಟು 21 ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೊಳಿಸಿದ್ದು ಶೀಘ್ರವೇ ಕಾಮಗಾರಿಗಳು ಪ್ರಾರಂಭವಾಗಲಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಮಳೆಹಾನಿ ಪರಿಹಾರ ನಿಧಿಯಡಿ   15 ಲಕ್ಷ ರೂಪಾಯಿ ಬಿಡುಗಡೆಯಾಗಿದ್ದು, ಅದರಲ್ಲಿ ತಾರಾ ಅಪಾರ್ಟ್‌ಮೆಂಟ್ 2ನೇ ಅಡ್ಡರಸ್ತೆ, ಗುಡ್ಡೆರಸ್ತೆ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷ ರೂ, ಕೊಟ್ಟಾರ ಕ್ರಾಸ್ 1 ನೇ ಅಡ್ಡ ರಸ್ತೆ ಬಾಬು ಕಾಂಪೌಂಡ್ ಬಿಜೈ ಕಾಪಿಕಾಡ್ ಬಳಿ ತೋಡು ದುರಸ್ತಿ ಕಾಮಗಾರಿಗೆ 5 ಲಕ್ಷ, ರಾಮಾಂಜನೇಯ ಭಜನಾ ಮಂದಿರದ ಬಳಿಯ ರಸ್ತೆ ಡಾಮರೀಕರಣ ಕಾಮಗಾರಿ 5 ಲಕ್ಷ ರೂಪಾಯಿ ಮೀಸಲಿಡಲಾಗಿದೆ.

ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ದೇರೆಬೈಲ್ ದಕ್ಷಿಣ ವಾರ್ಡಿಗೆ 37.13 ಲಕ್ಷ ಅನುದಾನ ನೀಡಿದ್ದು, ಆ ಅನುದಾನದಲ್ಲಿ ದಡ್ಡಲಕಾಡು ಒಳ ಚರಂಡಿ ಅಭಿವೃದ್ಧಿ 6 ಲಕ್ಷ, ಕೊಟ್ಟಾರ ಕ್ರಾಸ್ 1ನೇ ಅಡ್ಡ ರಸ್ತೆಯ ಬಳಿ ಒಳ ಚರಂಡಿ ಅಭಿವೃದ್ಧಿ ಕಾಮಗಾರಿ 4.72 ಲಕ್ಷ, ದಡ್ಡಲಕಾಡು ಕೊರಗಜ್ಜ ಗುಡಿ ಒಳಚರಂಡಿ ಅಭಿವೃದ್ಧಿ ಕಾಮಗಾರಿ 1.67 ಲಕ್ಷ, ಕೊಟ್ಟಾರ ಕ್ರಾಸ್ 1 ನೇ ಅಡ್ಡ ರಸ್ತೆಯಲ್ಲಿ ಒಳ ಚರಂಡಿ ಅಭಿವೃದ್ಧಿ ಕಾಮಗಾರಿ 4.70 ಲಕ್ಷ, ಕೋಟೆಕಣಿ 1ನೇ ಅಡ್ಡರಸ್ತೆಯಲ್ಲಿ ಕವಲೊಡೆದ ಅಡ್ಡರಸ್ತೆ ಕಾಂಕ್ರೀಟೀಕರಣ ಕಾಮಗಾರಿ 5 ಲಕ್ಷ, ಕೋಟೆಕಣಿ 1ನೇ ಅಡ್ಡರಸ್ತೆಯ ಕೊನೆಯಲ್ಲಿ ರಸ್ತೆಗೆ ಕಾಂಕ್ರೀಟೀಕರಣ ಕಾಮಗಾರಿ 5 ಲಕ್ಷ, ಪತಂಜಲಿ ಸ್ಟೋರ್ ಬಳಿ ಒಳ ಚರಂಡಿ ಅಭಿವೃದ್ಧಿ ಕಾಮಗಾರಿ 4.68 ಲಕ್ಷ, ದಡ್ಡಲಕಾಡು ರಾಷ್ಟ್ರೀಯ ಹೆದ್ದಾರಿ ಕೂಡು ರಸ್ತೆ ಅಭಿವೃದ್ಧಿ 4.36 ಲಕ್ಷ ಹಾಗೂ ಕುದ್ಮುಲ್ ರಂಗರಾವ್ ಭವನದ ಉಳಿದ ಕಾಮಗಾರಿಗೆ 1 ಲಕ್ಷ ಅನುದಾನ ಒದಗಿಸಲಾಗಿದೆ.

ಪಾಲಿಕೆ ಸಾಮಾನ್ಯ ನಿಧಿಯಿಂದ 40.3 ಲಕ್ಷ ರೂಪಾಯಿ ಬಿಡುಗಡೆಯಾಗಿದ್ದು, ಆ ಅನುದಾನದಲ್ಲಿ ಕೊಟ್ಟಾರ ಕ್ರಾಸ್ 1ನೇ ಅಡ್ಡ ರಸ್ತೆ ಬಳಿ ಡ್ರೈನೇಜ್ ದುರಸ್ತಿ ಕಾಮಗಾರಿ 2.72 ಲಕ್ಷ, ವಿ.ಕೆ ಪಾರ್ಕ್ ಮುಂಬಾಗ ಕೋಟೆಕಣಿ 3ನೇ ಅಡ್ಡ ರಸ್ತೆ ದುರಸ್ತಿ ಕಾಮಗಾರಿ 3.72 ಲಕ್ಷ, ಕೊಟ್ಟಾರ ಕ್ರಾಸ್ 1 ನೇ ಅಡ್ಡ ರಸ್ತೆಯ ಬಳಿ ಕಾಪಿಕಾಡು “8” ಎ ರಸ್ತೆಯ ಕಾಂಕ್ರೀಟ್ ಕಾಮಗಾರಿ 5 ಲಕ್ಷ, ಸಿರೆನೆ ಅಪಾರ್ಟ್‌ಮೆಂಟ್ ಬಳಿ ಒಳ ಚರಂಡಿ ಕಾಮಗಾರಿ 4.93 ಲಕ್ಷ, ಕಾಪಿಕಾಡ್ 8 ಎ ಅಡ್ಡ ರಸ್ತೆಯ ಕಾಂಕ್ರೀಟ್ ಕಾಮಗಾರಿ 5 ಲಕ್ಷ, ಚಿಲಿಂಬಿಗುಡ್ಡೆಯ ಬಳಿ ಆಳುಗುಂಡಿ ದುರಸ್ತಿ 4.98 ಲಕ್ಷ, ಕಾಪಿಕಾಡ್ 1ನೇ ಅಡ್ಡರಸ್ತೆಗೆ ಕಾಂಕ್ರೀಟೀಕರಣ 7.40 ಲಕ್ಷ, ಕಾಪಿಕಾಡ್ 1ನೇ ಅಡ್ಡರಸ್ತೆ ಚರಂಡಿ ಅಭಿವೃದ್ಧಿ ಕಾಮಗಾರಿ 7 ಲಕ್ಷ ಮೀಸಲಿಡಲಾಗಿದೆ. ಹಾಗೂ ತನ್ನ ಶಾಸಕರ ನಿಧಿಯಿಂದ ಚಿಲಿಂಬಿಗುಡ್ಡೆ ಗುರುವೈದ್ಯನಾಥ ದೇವಿ ಚಾಮುಂಡೇಶ್ವರಿ ದೇವಸ್ಥಾನದ ಬಳಿ ಅಭಿವೃದ್ಧಿ ಕಾಮಗಾರಿಗೆ 6 ಲಕ್ಷ ಅನುದಾನ ನೀಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

Comments are closed.