ಮಂಗಳೂರು, ಡಿಸೆಂಬರ್.05: ಭವಿಷ್ ಆರ್.ಕೆ ಕ್ರಿಯೇಶನ್ಸ್ ಲಾಂಛನದಲ್ಲಿ ತಯಾರಾದ `ಆಟಿಡೊಂಜಿ ದಿನ’ ತುಳು ಸಿನೆಮಾ ಡಿಸೆಂಬರ್ 6 ಶುಕ್ರವಾರದಂದು 14 ಚಿತ್ರ ಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ.
ನಗರದ ಪತ್ರಿಕಾಭವನದಲ್ಲಿ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಚಿತ್ರದ ಗೌರವ ನಿರ್ದೇಶಕ ಎ.ಎಸ್ ವೈಭವ್ ಪ್ರಶಾಂತ್ ಅವರು, ನಗರದ ಜ್ಯೋತಿ ಚಿತ್ರ ಮಂದಿರ, ಬಿಗ್ ಸಿನಿಮಾ, ಪಿವಿಆರ್, ಸಿನಿಪೋಲಿಸ್ ಸೇರಿದಂತೆ ಜಿಲ್ಲೆಯ 14 ಚಿತ್ರ ಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದರು.
ಆಟಿಯಲ್ಲಿ ಒಂದು ದಿನ ನಡೆಯುವ ಕಥೆಯನ್ನು ಆಧರಿಸಿ ಈ ಸಿನೆಮಾ ತಯಾರಿಸಲಾಗಿದೆ. ಆ ಮೂಲಕ ಸಿನೆಮಾ ಮಾಡಬೇಕು ಎಂದು ಹ್ಯಾರಿಸ್ ಕೊಣಾಜೆಕಲ್ಲು ಅವರ ಕನಸನ್ನು ನನಸು ಮಾಡಲಾಗುತ್ತಿದೆ.
ಪೃಥ್ವಿ ಅಂಬರ್ ನಾಯಕ ನಟನಾಗಿ, ನಿರೀಕ್ಷಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ನವೀನ್ ಡಿ. ಪಡೀಲ್, ವಾಸು ಮಲ್ಪೆ, ಶ್ರದ್ಧಾ ಸಾಲಿಯಾನ್, ದೀಪಕ್ ರೈ ಪಾಣಾಜೆ, ಅನೀಲ್ ರಾಜ್, ವಿಶ್ವನಾಥ್ ಮೂಡಬಿದ್ರೆ, ಸೂರಜ್ ಸಾಲ್ಯಾನ್, ಸುರೇಂದ್ರ ಕುಮಾರ್ ಹೆಗ್ಡೆ, ಶೈಲಶ್ರೀ, ಅವರು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಒಂದು ಹಾಡನ್ನು ಖ್ಯಾತ ಯಕ್ಷಗಾನ ಭಾಗವತ ಪಟ್ನ ಸತೀಶ್ ಶೆಟ್ಟಿ ಹಾಡಿದ್ದಾರೆ ಎಂದು ವೈಭವ್ ಪ್ರಶಾಂತ್ ತಿಳಿಸಿದರು..
ಚಿತ್ರದ ಸಹ ನಿರ್ದೇಶಕ ಮತ್ತು ಕಾರ್ಯಕಾರಿ ನಿರ್ಮಾಪಕ ಆಕಾಶ್ ಹಾಸನ್ ಮಾತನಾಡಿ, `ಆಟಿಡೊಂಜಿ ದಿನ’ ಸಿನೆಮಾವನ್ನು ಆರಂಭದಲ್ಲಿ ಹ್ಯಾರಿಸ್ ಕೊಣಾಜೆಕಲ್ಲು ಅವರು ನಿರ್ದೇಶಿಸಿದ್ದರು. ಆದರೆ ಅವರು ಅಪಘಾತದಲ್ಲಿ ಮೃತಪಟ್ಟ ಕಾರಣ ಪ್ರಸ್ತುತ ಎ.ಎಸ್ ವೈಭವ್ ಪ್ರಶಾಂತ್ ಅವರು ನಿರ್ದೇಶನ ಜವಾಬ್ದಾರಿ ವಹಿಸಿಕೊಂಡು ಸಿನೆಮಾ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ ಎಂದರು.
ತಂತ್ರಜ್ಞರು : ಛಾಯಾಗ್ರಹಣ ನರೇಂದ್ರ ಗೌಡ, ಕಥೆ ಚಿತ್ರಕಥೆ ಹ್ಯಾರಿಸ್ ಕೊಣಜೆಕಲ್, ಆಕಾಶ್ ಹಾಸನ , ಸಹ ನಿರ್ದೇಶನ ಮತ್ತು ಕಾರ್ಯಕಾರಿ ನಿರ್ಮಾಪಕರು ಆಕಾಶ್ ಹಾಸನ, ಸಂಕಲನ ಶ್ರೀನಿವಾಸ್ ಪಿ ಬಾಬು ಮತ್ತು ಮೆವಿನ್ ಜೋಯಲ್ ಪಿಂಟೋ, ಸಾಹಿತ್ಯ ಸಂಗೀತ ರಾಜೇಶ್ ಭಟ್ ಮೂಡ ಬಿದಿರೆ, ಹಿನ್ನಲೆ ಸಂಗೀತ ಎಸ್ ಪಿ ಚಂದ್ರಕಾಂತ್, ನಿರ್ಮಾಣ ನಿರ್ವಹಣೆ ಸತೀಶ್ ಬ್ರಹ್ಮಾವರ್, ಕಲಾ ನಿರ್ದೇಶನ ಹರೀಶ್ ಆಚಾರ್ಯ, ವಸ್ತ್ರಲಂಕಾರ ವಲ್ಲಿ ,ವರ್ಣಾಲಂಕಾರ ಜಗದೀಶ್, ನಿರ್ದೇಶನ ಸಹಾಯ ಕೆ. ಜಗದೀಶ್ ರೆಡ್ಡಿ, ಸಂದೀಪ್ ಬಾರಾಡಿ , ನವೀನ್ ನೆರೋಳ್ತಾಡಿ.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ನಾಯಕ ನಟ ಪೃಥ್ವಿ ಅಂಬರ್, ಸಂಗೀತ ಒದಗಿಸಿರುವ ರಾಜೇಶ್ ಭಟ್ ಮೂಡುಬಿದಿರೆ, ಹಿನ್ನೆಲೆ ಸಂಗೀತ ನೀಡಿರುವ ಎಸ್.ಪಿ ಚಂದ್ರಕಾಂತ್ ಪೂರಕ ಮಾಹಿತಿ ನೀಡಿದರು.
Comments are closed.