ಕರಾವಳಿ

ಪಾಲಿಕೆಯಲ್ಲಿ ಕಾಂಗ್ರೇಸ್ ಆಡಳಿತಾವಧಿ ಕೊನೆಗೊಂಡ ಬಳಿಕ ವಿವಿಧ ಕಾಮಗಾರಿಗಳಿಗೆ 84.52 ಲಕ್ಷ ಅನುದಾನ ಬಿಡುಗಡೆ : ಶಾಸಕ ಕಾಮಾತ್

Pinterest LinkedIn Tumblr

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೇಸ್ ಆಡಳಿತಾವಧಿ ಕೊನೆಗೊಂಡ ನಂತರ ಸಾರ್ವಜನಿಕರ ಬೇಡಿಕೆಯ ಮೇರೆಗೆ ವಿವಿಧ ಅನುದಾನಗಳನ್ನು ಜೋಡಿಸಿ 13 ಕಾಮಗಾರಿಗಳಿಗೆ 84.52 ಲಕ್ಷ ಅನುದಾನ ಬಿಡುಗಡೆಗೊಳಿಸಿರುವುದಾಗಿ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ತಿಳಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯಿಂದ 5 ಲಕ್ಷ ಅನುದಾನ ಬಿಡುಗಡೆಗೊಳಿಸಿದ್ದು, ಅದರಲ್ಲಿ ಕುಲಶೇಖರ ಚೌಕಿ ಬೈತುರ್ಲಿ ಬಳಿ ಕಾಲು ಸಂಕ ನಿರ್ಮಾಣವಾಗಲಿದೆ.

ಮಳೆಹಾನಿ ಅನುದಾನದಡಿ 15 ಲಕ್ಷ ಬಿಡುಗಡೆಯಾಗಿದ್ದು, ಬೈತುರ್ಲಿ ಚೌಕಿ ಬಳಿ ಚರಂಡಿ ದುರಸ್ತಿ ಕಾಮಗಾರಿಗೆ 5 ಲಕ್ಷ, ಕುಲಶೇಖರ ಡೈರಿ ಪಕ್ಕದ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷ, ಹಾಗೂ ಚೌಕಿ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿ 5 ಲಕ್ಷ ಬಿಡುಗಡೆಗೊಳಿಸಲಾಗಿದೆ.

ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ 20 ಲಕ್ಷ ಬಿಡುಗಡೆಗೊಳಿಸಲಾಗಿದೆ. ಆ ಅನುದಾನದಲ್ಲಿ ಕೆ.ಎಂ.ಎಫ್ ಡೈರಿಯ ಬಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ 5 ಲಕ್ಷ, ಕುಡುಪು ದೇವಸ್ಥಾನದ ಬಳಿ ಚರಂಡಿ ತಡೆಗೋಡೆ ನಿರ್ಮಾಣ 7.50 ಲಕ್ಷ, ಜ್ಯೋತಿನಗರ ಕಂಚಲಗುರಿ ಬಳಿ ತಡೆಗೋಡೆ ನಿರ್ಮಾಣ 7.50 ಲಕ್ಷದ ಕಾಮಗಾರಿಗಳು ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಮಹಾನಗರ ಪಾಲಿಕೆ ಸಾಮಾನ್ಯ ನಿಧಿ ಅನುದಾನದಲ್ಲಿ ಪದವುಪೂರ್ವ ವಾರ್ಡಿಗೆ 13.52 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ. ಅದರಲ್ಲಿ ಕುಲಶೇಖರ – ಕನ್ನಗುಡ್ಡೆ ರಸ್ತೆಯ ಚರಂಡಿ ಅಭಿವೃದ್ಧಿಗೆ 7.70 ಲಕ್ಷ, ಜ್ಯೋತಿನಗರ ಜಿಲ್ಲಾ ತರಬೇತಿ ಕೇಂದ್ರ ಬಳಿ ಚರಂಡಿ ಹಾಗೂ ಕಾಲುದಾರಿಯ ಕಾಮಗಾರಿಗಳಿಗೆ 5.82 ಲಕ್ಷ ಅನುದಾನ ಒದಗಿಸಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆಯ ಮೂಲಕ ಅನುಷ್ಠಾನಗೊಳ್ಳುವ ಕೇಂದ್ರ ಸರಕಾರದ 14ನೇ ಹಣಕಾಸು ವ್ಯವಸ್ಥೆ ಅನುದಾನದದಲ್ಲಿ 20 ಲಕ್ಷ ಬಿಡುಗಡೆಯಾಗಿದ್ದು ಮೇಲ್ತೋಟ ಬಳಿ ಚರಂಡಿ ರಚನೆಗೆ ಆ ಅನುದಾನ ವಿನಿಯೇಗಿಸಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ/ಪಂಗಡ ಅನುದಾನದಲ್ಲಿ ಕೋಟಿಮುರ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿಗೆ 4 ಲಕ್ಷ, ಕುಡಿಯುವ ನೀರಿನ ಪರಿಹಾರ ಯೋಜನೆಯಲ್ಲಿ ಕುಡುಪು ದೇವಸ್ಥಾನದ ಬಳಿ ಇರುವ ಕೊಳವೆ ಬಾವಿಗೆ ಹೊಸ ಮೋಟರ್ ಪಂಪ್ ಸೆಟ್, ಸಬ್ ಮರ್ಸಿಬಲ್ ಕೇಬಲ್, ಹೊಸ ಕೊಳವೆ, ಪ್ಯಾನಲ್ ಬೋರ್ಡ್, ಯುಜಿ ಕೇಬಲ್ ಅಳವಡಿಸಿ ವಿದ್ಯುತೀಕರಣ ಹಾಗೂ ಲಿಂಕಿಂಗ್ ಕಾಮಗಾರಿಗಳಿಗೆ 3.5 ಲಕ್ಷ, ಕೋಟಿಮುರ ಬಳಿ ಹೊಸದಾಗಿ ಕೊರೆದ ಕೊಳವೆ ಬಾವಿಯಿಂದ ಕುಡಿಯುವ ನೀರು ಪೂರೈಸಲು ಎಚ್.ಡಿಸಪಿ.ಇ ಕೊಳವೆ ವಾಲ್ಟ್ ಅಳವಡಿಸಲು 3.5 ಲಕ್ಷ ಹಣ ಮೀಸಲಿಡಲಾಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

Comments are closed.